ಎಲ್ಲರಿಗೂ ನಮಸ್ಕಾರ ಬಂಧುಗಳೇ…. ಡಿಪ್ಲೋಮಾ ಕೋರ್ಸ್ ಮತ್ತು ಪದವಿ ಪಡೆದಿರುವ ಅಭ್ಯರ್ಥಿಗಳು ಇಂದು ಮಧ್ಯಾಹ್ನ 1:30 PM ಸಮಯಕ್ಕೆ ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದು, 1,500 ಮತ್ತು 3,000 ಗಳನ್ನು ಖಾತೆಗೆ ಜಮೆ ಮಾಡುವ ಮಾಹಿತಿ ಇಲ್ಲಿದೆ, ಈ ಬರಹವನ್ನು ಸಂಪೂರ್ಣವಾಗಿ ಓದಿ, ಹಣ ಪಡೆಯುವ ಮಾಹಿತಿಯನ್ನು ತಿಳಿದುಕೊಳ್ಳಿ.
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ಐದನೆಯ ಗ್ಯಾರಂಟಿ ಯೋಜನೆ ಯುವನಿಧಿ ಯೋಜನೆ ಆಗಿದೆ, ಇಂದು ಅಂದರೆ 26-Dec-2023ನೇ ಮಧ್ಯಾಹ್ನ 1:30 ಗಂಟೆಗೆ ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಸ್ವೀಕೃತವಾಗುತ್ತದೆ, ಈ ಯೋಜನೆಯ ಅಡಿಯಲ್ಲಿ ಹತ್ತನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ನಂತರದಲ್ಲಿ ಮುಂದುವರಿಸಿದ ಡಿಪ್ಲೋಮಾ ಮತ್ತು ಪಿಯುಸಿ ನಂತರದ ಪದವಿಯನ್ನು ಪಡೆದ ಯುವಕ, ಯುವತಿಯರಿಗೆ ಪ್ರತಿ ತಿಂಗಳು ಕ್ರಮವಾಗಿ ಅಂದರೆ ಡಿಪ್ಲೋಮಾ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ 1500 ಮತ್ತು ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ರೂ.3,000ಗಳನ್ನು ಖಾತೆಗೆ ನೇರವಾಗಿ ಜಮೆ ಮಾಡುವ ಯೋಜನೆ ಇದಾಗಿದೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಗ್ಯಾರಂಟಿ ಯೋಜನೆಗಳ ಫಲವಾಗಿ ಗೃಹಲಕ್ಷ್ಮಿ ಯೋಜನೆ, ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಚಲಿಸಲು ಮಹಿಳೆಯರಿಗೆ ಶಕ್ತಿ ಯೋಜನೆ, ಆಹಾರ ನಾಗರಿಕ ಸರಬರಾಜು ಇಲಾಖೆ ಅಡಿಯಲ್ಲಿ ದೊರೆಯುವ ಅನ್ನಭಾಗ್ಯ ಯೋಜನೆ, ಹಾಗೂ 200 ಯೂನಿಟ್ ಗಳ ಹೊರಗೆ ಉಚಿತ ವಿದ್ಯುತ್ ಕೊಡುವ ಗೃಹಜೋತಿ ಯೋಜನೆ ಜಾರಿಗೆ ಆಗಿದೆ, ಆದರೆ ಯುವನಿಧಿ ಯೋಜನೆ ಘೋಷಣೆಯಾಗಿದ್ದರು ಸಹ ಜಾರಿಯಾಗಿರಲಿಲ್ಲ, ಹಾಗಾಗಿ ಡಿಪ್ಲೋಮಾ ಕೋರ್ಸ್ ಮತ್ತು ಪದವಿ ಮುಗಿಸಿದ್ದ ಯುವಕ ಯುವತಿಯರು ಉದ್ಯೋಗ ಹುಡುಕಿದರೂ ಸಿಗದೇ ಇದ್ದ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದರು, ಅಂತಹವರಿಗೆ ಆರ್ಥಿಕವಾಗಿ ಕನಿಷ್ಠ ಬೆಂಬಲವಾದರೂ ಅವಶ್ಯಕವಾಗಿತ್ತು,
ಸರ್ಕಾರವು ಮುಖ್ಯವಾಗಿ ನಿರುದ್ಯೋಗಿಗಳಿಗೆ ಹಣವನ್ನು ಮೀಸಲಿಡುವ ಬದಲು ಉದ್ಯೋಗಗಳನ್ನು ಸೃಷ್ಟಿಸುವ ಕೆಲಸಗಳನ್ನು ಮಾಡಬೇಕು, ಸರ್ಕಾರವು ತನ್ನ ಮಟ್ಟದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಹಲವಾರು ಕಂಪನಿಗಳ ಸಂಯೋಗದೊಂದಿಗೆ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ದೊರಕಿಸಿ ಕೊಡುವ ಕೆಲಸಗಳನ್ನು ಮಾಡುತ್ತಿವೆ ಆದರೆ ಆ ಕೆಲಸಗಳೆಲ್ಲವೂ ಸಂಪೂರ್ಣವಾಗಿ ಅಭ್ಯರ್ಥಿಗಳ ಜೀವನ ಮಟ್ಟವನ್ನು ಸುಧಾರಿಸುವಂತಹ ಉದ್ಯೋಗಗಳೇನು ಅಲ್ಲ, ಹಿಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿದಿನವೂ ಹೊಸತೊಂದು ತಂತ್ರಜ್ಞಾನ ಪ್ರಾಯೋಗಿಕ ಪ್ರಪಂಚಕ್ಕೆ ಕಾಲಿಡುತ್ತಲೇ ಇವೆ, ಇಂತಹ ವಿದ್ಯಮಾನಗಳಲ್ಲಿ ಕೇವಲ ಹಳೆಯ ಸಂಪ್ರದಾಯ ಬದ್ಧ ಪಠ್ಯಗಳನ್ನು ಅಭ್ಯಸಿಸುವುದರಿಂದ ಉತ್ಕೃಷ್ಟವಾದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸಗಳನ್ನು ಪಡೆಯುವುದು ಗ್ರಾಮೀಣ ಭಾಗದ ಮತ್ತು ಕನ್ನಡ ಮಾಧ್ಯಮಗಳಲ್ಲಿ ಓದಿದಂತಹ ಅಭ್ಯರ್ಥಿಗಳಿಗೆ ಕಷ್ಟಕರವಾಗಿದೆ,ಎಂಬುದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸಕ್ಕಾಗಿ ಅಲೆದಾಡಿದಂತಹ ಯುವ ಮಿತ್ರರಿಂದ ಕಂಡುಬಂದಂತಹ ಕಹಿ ಸತ್ಯವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾಗಿ ಸರ್ಕಾರವು ಶಾಲಾ-ಕಾಲೇಜುಗಳಲ್ಲೇ ಇಂದಿನ ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ಪಠ್ಯಗಳೊಂದಿಗೆ ಸಂಯೋಜನೆ ಮಾಡಬೇಕಾಗಿದೆ, ಸರ್ಕಾರವು ಇದರ ಭಾಗವಾಗಿ ಹೊಸತರವಾದ ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನ ಮಾಡಬೇಕು. ಇಲ್ಲದೆ ಇದ್ದಲ್ಲಿ ನಮ್ಮ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಯುವಕ ಯುವತಿಯರಿಗೆ ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವುದು ಕಷ್ಟವಾಗುತ್ತದೆ ಮತ್ತು ಆ ಎಲ್ಲಾ ಕೆಲಸಗಳಿಗೆ ಉತ್ತರ ಭಾರತದಿಂದ ಬಂದ ಹಿಂದಿಯವರ ಪಾಲಾಗುತ್ತದೆ. ಮತ್ತು ಇದರ ಜೊತೆ ಇಂಗ್ಲಿಷ್ ಸಂವಹನ ಕೌಶಲ್ಯವೂ ಕೂಡ ಮುಖ್ಯವಾಗಿದೆ ಎಂಬುದು ವಾಸ್ತವಕ್ಕೆ ಹತ್ತಿರವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಯುವ ನಿಧಿ ಯೋಜನೆಯನ್ನು ಘೋಷಣೆ ಮಾಡಿದಂತೆ ಅನುಷ್ಠಾನ ಮಾಡುವ ದಿನಾಂಕವನ್ನು ಇಂದಿಗೆ ನಿಗದಿಪಡಿಸಿತ್ತು ಇಂದು ಮಧ್ಯಾಹ್ನ 1:30 ಗಂಟೆಗೆ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗಳು ತಮ್ಮ ಮೊಬೈಲ್ ಫೋನ್ನಲ್ಲಿ ಅಥವಾ ಹತ್ತಿರದ ಗ್ರಾಮವನ್ ಅಥವಾ ಕರ್ನಾಟಕವನ್ನು ಅಥವಾ ಸೇವಾ ಸಿಂಧು ಸೆಂಟರ್ ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು, ಹಾಗೂ ಅರ್ಜಿ ಸಲ್ಲಿಸಲು ಹಲವಾರು ಮಾನದಂಡಗಳನ್ನು ಮತ್ತು ಅರ್ಹತಾ ಹಾಗೂ ಅನರ್ಹತ ಷರತ್ತುಗಳನ್ನು ವಿಧಿಸಲಾಗಿದೆ, ಆ ಎಲ್ಲಾ ಮಾನದಂಡಗಳೇನು ಎಂದು ಕೆಳಕಂಡಂತೆ ತಿಳಿದುಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುವನಿಧಿ ಯೋಜನೆಗೆ ಸರ್ಕಾರ ತಿಳಿಸಿರುವ ಅರ್ಹತೆಗಳು
- 2023 ನೇ ವರ್ಷದಲ್ಲಿ ಡಿಪ್ಲೋಮಾ ಮತ್ತು ಪದವಿಯನ್ನು ಯಾವುದೇ ಬ್ಯಾಕ್ ಲಾಗ್ ಗಳಿಲ್ಲದೆ ಪೂರ್ಣವಾಗಿ ಮುಗಿಸಿರುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ,
- ಅಭ್ಯರ್ಥಿಗಳು ಈ ವರ್ಷದ ಅಂದರೆ 2023ನೇ ಮಾರ್ಚ್ ಏಪ್ರಿಲ್ ಮೇ ಜೂನ್ ಗಳಲ್ಲಿ ಪದವಿಯನ್ನು ಮತ್ತು ಡಿಪ್ಲೋಮಾ ಕೋರ್ಸ್ ಗಳನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿಸಿದೆ.
- ಡಿಪ್ಲೋಮಾ ಮತ್ತು ಪದವಿಯನ್ನು ಮುಗಿಸಿ 180 ದಿನಗಳು ಅಂದರೆ ಆರು ತಿಂಗಳುಗಳಾಗಿರಬೇಕು.
- ಮತ್ತು ಈ ಆರು ತಿಂಗಳ ಅವಧಿಯಲ್ಲಿ ಯಾವುದೇ ತರಹದ ಕಂಪನಿಗಳಿಗೆ ಅಥವಾ ಇನ್ನಿತರ ಸಂಘಟಿತ ನೋಂದಾಯಿತ ಕಂಪನಿ ಕಚೇರಿಗಳಿಗೆ ಕೆಲಸಕ್ಕೆ ಸೇರಿರಬಾರದು.
- ಡಿಪ್ಲೋಮಾ ಮತ್ತು ಪದವಿಯನ್ನು ಮುಗಿಸಿ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬಾರದು.
- ರಾಜ್ಯ ಮತ್ತು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಲ್ಲಿ ನೀಡುವ ಸಾಲ ಸೌಲಭ್ಯಗಳನ್ನು ಪಡೆದು ಸ್ವಯಂ ಉದ್ಯೋಗಗಳನ್ನು ಸ್ಥಾಪಿಸಬಾರದು.
- ಸರ್ಕಾರಿ ಅಂಗಸಂಸ್ಥೆಗಳಾದ ಹಲವಾರು ನಿಗಮಗಳು ಮಂಡಳಿಗಳಲ್ಲಿ ಶಾಶ್ವತವಾದ ಅಥವಾ ತಾತ್ಕಾಲಿಕ ಹಾಗೂ ಇನ್ನಿತರ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿರಬಾರದು.
ಈ ಎಲ್ಲಾ ಮೇಲ್ಕಂಡ ಮಾನದಂಡಗಳನ್ನು ಪೂರ್ಣಗೊಳಿಸಲು ಬದ್ಧವಾಗಿರುವ 18 ವರ್ಷ ಮೇಲ್ಪಟ್ಟು ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಇರುವ ಕನ್ನಡಿಗರಾದ ಅಭ್ಯರ್ಥಿಗಳು ಈ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮಾಣಪತ್ರಗಳು ಯಾವುವು?
- ಡಿಪ್ಲೋಮಾ ಪ್ರಮಾಣ ಪತ್ರ ( ಎಲ್ಲಾ ಸೆಮಿಸ್ಟರ್ ಗಳ ಅಂಕಪಟ್ಟಿಗಳು)
- ಪದವಿ ಪ್ರಮಾಣ ಪತ್ರ -ವಿಶ್ವವಿದ್ಯಾನಿಲಯಗಳು ದೃಢೀಕರಿಸಿರುವ ಪ್ರಮಾಣ ಪತ್ರ ಮತ್ತು ( ಎಲ್ಲಾ ಸೆಮಿಸ್ಟರ್ ಗಳ ಅಂಕಪಟ್ಟಿಗಳು)
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್.
- ಅಭ್ಯರ್ಥಿಯ ಭಾವಚಿತ್ರ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ವಾಸ ಸ್ಥಳ ದೃಢೀಕರಣ ಪತ್ರ.
- ಬ್ಯಾಂಕ್ ಪಾಸ್ ಬುಕ್ ಮತ್ತು ಕಳೆದ ಆರು ತಿಂಗಳಿನ ಬ್ಯಾಂಕ್ ಖಾತೆಯ ವಹಿವಾಟು ಪ್ರತಿ. ( ಬ್ಯಾಂಕ್ ಸ್ಟೇಟ್ ಮೆಂಟ್ ಪ್ರತಿ). ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಫೋನ್ನಲ್ಲಿಯೇ ಅರ್ಜಿ ಸಲ್ಲಿಸಿ https://sevasindhuservices.karnataka.gov.in/directApply.do?serviceId=2079
ಈ ಮೇಲ್ಕಂಡ ದಾಖಲಾತಿಗಳು ಪ್ರಮುಖವಾಗಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾಗಿರುತ್ತವೆ ಹಾಗೂ ಸರ್ಕಾರವು ಇನ್ನಿತರ ದಾಖಲಾತಿಗಳ ಅವಶ್ಯಕತೆ ಇದ್ದರೆ ಮುಂದೆ ತಿಳಿಸಬಹುದು.
ಈ ಯೋಜನೆಗೆ ಇಂದಿನಿಂದ ಅಂದರೆ 26-December-2023 ರಿಂದ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು, ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿಕರಿಸಿದ್ದಾರೆ,
ಮುಂದಿನ ತಿಂಗಳ ಅಂದರೆ ಜನವರಿ 12ನೆಯ 2024 ನೇ ತಾರೀಕು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ರಾಷ್ಟ್ರೀಯ ಯುವ ದಿನ ಆಚರಣೆಯ ದಿನದಂದು ಶಿವಮೊಗ್ಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ DBT ನೇರ ನಗದು ವರ್ಗಾವಣೆ ಅಡಿಯಲ್ಲಿ ಯುವನಿಧಿ ಯೋಜನೆಯ ಮೊದಲ ಕಂತನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ.
ಯುವ ನಿಧಿ ಯೋಜನೆಯ ಫಲಾನುಭವಿಗಳಾದ ಅಭ್ಯರ್ಥಿಗಳು ತಾವು ನೋಂದಣಿ ಆದ ದಿನಾಂಕದಿಂದ ಮುಂದಿನ ಎರಡು ವರ್ಷಗಳವರೆಗೆ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಯನ್ನು ಪಡೆಯಬಹುದು.
ಮತ್ತು ಈ ಅವಧಿಯಲ್ಲಿ ಉದ್ಯೋಗವೇನಾದರೂ ದೊರೆತರೆ ಸೇವಾ ಸಿಂಧು ಪೋರ್ಟಲ್ ನ ಮೂಲಕ ಉದ್ಯೋಗದ ಸ್ಥಿತಿಯನ್ನು ದಾಖಲಿಸಬೇಕು ಇಲ್ಲದೆ ಇದ್ದಲ್ಲಿ ಇಲಾಖೆಯ ಮುಂದೆ ದಂಡ ವಿಧಿಸುತ್ತದೆ.
ಇನ್ನು ಕೇವಲ ಮೂರು ಗಂಟೆಗಳಲ್ಲಿ ಅಂದರೆ ಮಧ್ಯಾಹ್ನ 1.30 ಗಂಟೆಗೆ ಸೇವಾಸಿಂದು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ ಸರ್ಕಾರ ಸೂಚಿಸಿರುವ ಮಾನದಂಡಗಳನ್ನು ಪೂರೈಸುವ ಎಲ್ಲಾ ಡಿಪ್ಲೋಮಾ ಮತ್ತು ಪದವೀಧರರು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದವರೆಲ್ಲರಿಗೂ ನಿರುದ್ಯೋಗ ಭಕ್ತಿ ದೊರೆಯಲಿ ಮತ್ತು ನಿಮಗೆಲ್ಲರಿಗೂ ಆದಷ್ಟು ಬೇಗ ಉದ್ಯೋಗಗಳು ದೊರಕಲಿ ಎಂದು ಆಶಿಸುತ್ತಾ ಈ ಲೇಖನವನ್ನು ಮುಗಿಸುತ್ತೇನೆ.
ನಿಮ್ಮ ಯಾವುದೇ ಸಲಹೆ ಸೂಚನೆಗಳಿಗೆ Onelifekannada ದ ಅಧಿಕೃತ ಮಿಂಚಂಚೆ vishwapatha.kannada@gmail.com ಸಂಪರ್ಕಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಧನ್ಯವಾದಗಳು ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡುವುದರ ಮೂಲಕ ಬೆಂಬಲವಾಗಿರಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
One Life kannada
ಮತ್ತೊಮ್ಮೆ ಓದಿ
ಪದವಿ ಪಡೆದಿರುವ ಅಭ್ಯರ್ಥಿಗಳು ಇಂದು ಮಧ್ಯಾಹ್ನ 1:30 PM ಸಮಯಕ್ಕೆ ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದು, 1,500 ಮತ್ತು 3,000 ಗಳನ್ನು ಖಾತೆಗೆ ಜಮೆ ಮಾಡುವ ಮಾಹಿತಿ ಇಲ್ಲಿದೆ, ಈ ಬರಹವನ್ನು ಸಂಪೂರ್ಣವಾಗಿ ಓದಿ, ಹಣ ಪಡೆಯುವ ಮಾಹಿತಿಯನ್ನು ತಿಳಿದುಕೊಳ್ಳಿ.