ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2024 ಭಾರತದಂತಹ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶದಲ್ಲಿ ಅತಿ ಮಹತ್ವವಾದ ಯೋಜನೆಯಾಗಿದೆ,  ಈ ಯೋಜನೆಯಿಂದ 30 ಲಕ್ಷ ಕರಕುಶಲಿಗಳ  ಕುಟುಂಬಗಳಿಗೆ ನೆರವನ್ನು ಒದಗಿಸುವ  ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ.ಅತಿಯಾದ ಯಂತ್ರೋಪಕರಣಗಳನ್ನು ಉಪಯೋಗಿಸದೆ  ಕೇವಲ ತಮ್ಮ ಕೈಗಳಿಂದಲೇ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಸಮಾಜಕ್ಕೆ ನೀಡುವ  ಉತ್ಕೃಷ್ಟ  ಕೌಶಲ್ಯಗಳನ್ನು ಹೊಂದಿರುವ ಕರಕುಶಲಿಗಳ ಒಟ್ಟಾರೆ ಸಮುದಾಯವು ದೇಶದ ಒಂದು ಬಹುದೊಡ್ಡ ಅಸಂಘಟಿತ  ಸಮುದಾಯವಾಗಿದೆ. ಇದೀಗ ನಮ್ಮ ಕೇಂದ್ರ ಸರ್ಕಾರವು ಈ ಸಮುದಾಯದ  ಅಭಿವೃದ್ಧಿ, ಏಳಿಗೆಗೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ-2023’  ಮೂಲಕ ಪ್ರಮುಖ ಯೋಜನೆಯನ್ನು ದೇಶದ ಜನತೆಗೆ ಈಗಾಗಲೇ ಜಾರಿಗೊಳಿಸಿದೆ.

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ 2023-24ನೇ  ವರ್ಷದ ಸಾಲಿನ ಬಜೆಟ್‌ನಲ್ಲಿ ಈಗಾಗಲೇ ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಅಥವಾ ಪಿಎಂ ವಿಶ್ವಕರ್ಮ ಯೋಜನೆಯನ್ನು’ ಸದನದಲ್ಲಿ ಪ್ರಸ್ತಾಪಿಸಲಾಗಿತ್ತು.  ಹಾಗೆ  2023ರ ಆಗಸ್ಟ್ 15ರಂದು ನರೇಂದ್ರ ಮೋದಿ ಅವರು ಪಿಎಂ ವಿಶ್ವಕರ್ಮ ಯೋಜನೆಯನ್ನು ದೇಶಕ್ಕೆ  ಸಮರ್ಪಿಸುವ ಬಗ್ಗೆ ಘೋಷಣೆ ಮಾಡಿದರು.  ಹಾಗೆ ಘೋಷಣೆಯ ಭರವಸೆಯಂತೆ ಕಳೆದ 2023ರ  ಸೆಪ್ಟೆಂಬರ್ 17ರಂದು ರಾಷ್ಟ್ರೀಯ ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆಯನ್ನು  ಅಧಿಕೃತವಾಗಿ ಜಾರಿಗೊಳಿಸಿದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಏನಿದು ಯೋಜನೆ? ಏಕೆ ಈ ಯೋಜನೆ ?

ನಮ್ಮ ಭಾರತ ದೇಶವು ಹಲವಾರು ಸಂಸ್ಕೃತಿ ಸಂಪ್ರದಾಯಗಳನ್ನು ಹೊಂದಿದೆ,  ದೇಶದ ಉದ್ದಗಲಕ್ಕು ವಿವಿಧ ರೀತಿಯ ಕಲೆಗಳನ್ನು ಕರಕುಶಲಗಳನ್ನು ನಾವು ನೋಡಬಹುದು,  ಈ  ಕೌಶಲ್ಯಗಳನ್ನು ಇನ್ನಷ್ಟು ಅಭ್ಯುದಯ ಮಾಡುವುದಕ್ಕಾಗಿ  ಕೇಂದ್ರ ಸರ್ಕಾರವು ಈ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ, ದೇಶದ ಸಾಂಪ್ರದಾಯಿಕ ಕೌಶಲ್ಯಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಕುಶಲಕರ್ಮಿಗಳ ಅಭ್ಯುದಯಕ್ಕೆ, ಏಳಿಗೆಗೆ ನೆರವು ಕಲ್ಪಿಸಲು  ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ  ಯೋಜನೆಯು ಕೇಂದ್ರ ಸರ್ಕಾರದ  ಸುಮಾರು 13 ಸಾವಿರ ಕೋಟಿ ಮೊತ್ತದ  ಅನುದಾನ ಇದಾಗಿದೆ.ಭಾರತವು ಹಳ್ಳಿಗಳ ದೇಶ,  ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ  ನಮ್ಮ ದೇಶದಲ್ಲಿ  ಕರಕುಶಲ ಕಲೆಗಳಿಗೆ, ಪ್ರತಿಭೆಗಳಿಗೆ ಮತ್ತು ಅವುಗಳ ತಾಣಗಳಿಗೆ ಕಡಿಮೆ ಏನಿಲ್ಲ,  ಜಾಗತೀಕರಣದ ಪ್ರಭಾವದಿಂದ ಈ ಕೌಶಲ್ಯಗಳು  ಇತ್ತೀಚೆಗೆ ಕಣ್ಮರೆಯಾಗುತ್ತಿವೆ, ಯಾವುದೇ ರಾಷ್ಟ್ರವು ತನ್ನ ಪ್ರಬಲ ಗುರುತಿಸುವಿಕೆಗಾಗಿ ತಮ್ಮತನವನ್ನು ಸಂಸ್ಕೃತಿಯನ್ನು ಕಾಯ್ದುಕೊಳ್ಳಬೇಕಾಗಿದೆ,

Pradhan-mantri-vishwakarma-sewing-machine

 ರಾಷ್ಟ್ರದಾದ್ಯಂತ ಗ್ರಾಮೀಣ ಹಾಗೂ ನಗರ  ಪ್ರದೇಶಗಳಲ್ಲಿರುವ  ಒಟ್ಟಾರೆ 18 ವರ್ಗದ ಕುಶಲಕರ್ಮಿಗಳಿಗೆ ಈ  ಪ್ರಧಾನಮಂತ್ರಿ ವಿಶ್ವಕರ್ಮ  ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ  ಉಪಕರಣ ಖರೀದಿ ಮತ್ತು  ಬ್ಯಾಂಕ್  ಇಂದ ಖಾತರಿ  ರಹಿತವಾಗಿ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು. ಕರಕುಶಲಿಗಳು ತಾವು ತಯಾರಿಸುವ  ಎಲ್ಲಾ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು  ಕೇಂದ್ರ ಸರ್ಕಾರದ  ಈ ಯೋಜನೆಯ ಮೂಲ  ಉದ್ದೇಶವಾಗಿದೆ.ರಾಜ್ಯ ಸರ್ಕಾರಗಳಿಂದ ಯಾವುದೇ ನೆರವನ್ನು ಪಡೆಯದೆ  ಕೇವಲ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಈ ಯೋಜನೆಯ ಅನುದಾನವನ್ನು  ಭರಿಸಲಿದ್ದು.  ಬ್ಯಾಕ್ವರ್ಡ್ ಕ್ಲಾಸೆಸ್ ಎಂದು ಕರೆಯುವ ಹಿಂದುಳಿದ ವರ್ಗಗಳಿಗೆ ಸೇರಿದ  ದೇಶದ ಒಟ್ಟು 30 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ  ಈ ಯೋಜನೆಯ ಪ್ರಯೋಜನ ಸಿಗಲಿದೆ  ಎಂದು ಅಂದಾಜಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ನಮ್ಮ ವಾಟ್ಸಪ್ Whats app ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ದೊರೆಯುವ  ಹಣ ಎಷ್ಟು ? ಮತ್ತು  ಒಟ್ಟಾರೆಯಾಗಿ ದೊರೆಯುವ ಸಾಲ ಸೌಲಭ್ಯಗಳು !

ಕೇಂದ್ರ ಸರ್ಕಾರದ  ಅದೀನದಲ್ಲಿರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯವು ಈ ಯೋಜನೆಯ  ಮುಖ್ಯ ಮತ್ತು ಮೂಲ ಇಲಾಖೆಯಾಗಿ ಕೆಲಸ ಮಾಡಲಿದೆ.  ಪ್ರಮುಖವಾಗಿ  ವಿಶ್ವಕರ್ಮಗಳಿಗೆ  ಸಾಲ ಸೌಲಭ್ಯಗಳನ್ನು ಕೊಡಿಸಲು  ದೇಶದ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಪ್ರಮಾಣದ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು,  ಹಾಗೂ ಸಣ್ಣ ಹಣಕಾಸು ಸಂಸ್ಥೆಗಳಿಂದ ವಿಶ್ವಕರ್ಮ ಯೋಜನೆ  ಲಭಿಸುವ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.

WhatsApp Group Join Now
Telegram Group Join Now

 ಫಲಾನುಭವಿಗಳು  ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ  ತಾವು ಪಡೆದ  ಸಾಲಕ್ಕೆ  ಕೇವಲ ಶೇ 5ರಷ್ಟು ಬಡ್ಡಿದರ  ಮಾತ್ರವನ್ನು ತಾವು ಪಡೆದ ಸಾಲಕ್ಕೆ ಪಾವತಿಸಬೇಕು  ಇನ್ನುಳಿದ ಬಡ್ಡಿಯನ್ನು ಕೇಂದ್ರ ಸರ್ಕಾರವು ಸಂಬಂಧಪಟ್ಟ ಬ್ಯಾಂಕ್‌ಗಳು ಅಥವಾ ಇತರೆ ಹಣಕಾಸು ಸಂಸ್ಥೆಗಳಿಗೆ ಈ ಯೋಜನೆಯಲ್ಲಿ ಸಾಲವನ್ನು ಪಡೆದ ಫಲಾನುಭವಿಗಳ ಪರವಾಗಿ ಶೇ 8ರಷ್ಟು ಬಡ್ಡಿ  ಸಹಾಯಧನವನ್ನು  ಸರ್ಕಾರವೇ ನೆರವು ನೀಡಲಿದೆ.

  ಪ್ರಧಾನಮಂತ್ರಿ ವಿಶ್ವಕರ್ಮ  ಯೋಜನೆಯ ಫಲಾನುಭವಿಗೆ ತಾವು ಮಾಡುವ ಕೆಲಸ ನಿರ್ವಹಿಸಲು ಅಗತ್ಯವಿರುವ ಟೂಲ್ ಕಿಟ್ ಖರೀದಿಗಾಗಿ ಯೋಜನೆಯಡಿ 15 ಸಾವಿರ ಮೌಲ್ಯದ ಉಪಕರಣಗಳನ್ನು ಕೊಳ್ಳಲು  ಕೂಪನ್ ಗಳನ್ನು ನೀಡಲಾಗುತ್ತದೆ. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ಕೂಪನ್ ಗಳನ್ನು ಫಲಾನುಭವಿಗಳಿಗೆ ಹತ್ತಿರದಲ್ಲಿರುವ ಬ್ಯಾಂಕ್ ಮೂಲಕ ನೀಡಲಾಗುತ್ತದೆ.  ವಿಶ್ವಕರ್ಮ ಯೋಜನೆಯಡಿ ನೋಂದಣಿಯಾದ ಕುಶಲಕರ್ಮಿಗಳಿಗೆ  ಆಯಾ ಜಿಲ್ಲಾ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 7 ದಿನಗಳ  ಅಧಿಕೃತ ತರಬೇತಿಯನ್ನು ನೀಡಲಾಗುತ್ತದೆ. ಹೀಗೆ ಏಳು ದಿನಗಳ ತರಬೇತಿಯನ್ನು ಪಡೆಯುವ ಪ್ರತಿ ಅಭ್ಯರ್ಥಿಗಳಿಗೆ ಅಥವಾ ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿಯಂತೆ ಭತ್ಯೆ ನೀಡಲಾಗುವುದು. 

  • ವಿಶ್ವಕರ್ಮ ಯೋಜನೆಗೆ ಫಲಾನುಭವಿ  ಆದವರಿಗೆ ಶೇ 5ರಷ್ಟು ಬಡ್ಡಿದರದ  ಅಡಿಯಲ್ಲಿ ಒಟ್ಟು 3 ಲಕ್ಷ ರೂಪಾಯಿಯ ಖಾತರಿ ರಹಿತ ಬ್ಯಾಂಕ್ ಸಾಲ ದೊರೆಯಲಿದೆ.
  • ಮೊದಲ ಕಂತಿನಲ್ಲಿ ದೊರೆತ 1 ಲಕ್ಷ ರೂಪಾಯಿ ಸಾಲಕ್ಕೆ 18 ತಿಂಗಳ  ಅಂದರೆ ಒಂದುವರೆ ವರ್ಷಗಳ  ಗಡುವನ್ನು  ಮರುಪಾವತಿಗಾಗಿ ನೀಡಲಾಗುತ್ತದೆ.
  • ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿಗಳನ್ನು ಎರಡುವರೆ ವರ್ಷಗಳ ಮರುಪಾವತಿ ಅವಧಿಯೊಂದಿಗೆ ಫಲಾನುಭವಿಗೆ ನೀಡಲಾಗುವುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ನಮ್ಮ ವಾಟ್ಸಪ್ Whats app ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

 ಹೀಗೆ ಪಡೆದ ರೂ.1,00,000 ಸಾಲವನ್ನು  ಶೇಕಡ 5% ಬಡ್ಡಿದರದಲ್ಲಿ ಸಂಪೂರ್ಣವಾಗಿ ತೀರಿಸಿದ ನಂತರ ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ, ಹೀಗೆ ಎರಡನೇ ಕಂತಿನಲ್ಲಿ  ದೊರೆತ 2 ಲಕ್ಷ ರೂಪಾಯಿ ಸಾಲ ಮರುಪಾವತಿಗೆ 30 ತಿಂಗಳ  ಅಂದರೆ 2.6 ವರ್ಷಗಳ ಗಡುವು ನೀಡಲಾಗುತ್ತದೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ನೋಂದಣಿ ಹೇಗೆ?

ಫಲಾನುಭವಿಯು ತಾವೇ ಖುದ್ದಾಗಿ ನೇರವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಕಾಮನ್ ಸೇವಾ ಸರ್ವಿಸ್ ಸೆಂಟರ್ (CSC),  ಗ್ರಾಮ ಒನ್ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರಗಳು ಈ ರೀತಿಯ ಕೇಂದ್ರಗಳನ್ನು ಸಂಪರ್ಕಿಸಬೇಕು ಹಾಗೂ ನಗರ ಮಟ್ಟದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕು, ‘ಪಿಎಂ ವಿಶ್ವಕರ್ಮ’ ವೆಬ್ ಪೋರ್ಟಲ್ www.pmvishwakarma.gov.in ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

 ತಮ್ಮ ಕೈ ಬೆರಳುಗಳ  ಬಯೊಮೆಟ್ರಿಕ್ ಆಧಾರಿತ  ಅರ್ಜಿ ಸಲ್ಲಿಸುವಿಕೆ ಆಗಿರುವುದರಿಂದ  ತಾವೇ  ಸ್ವತಃ  ತಮ್ಮ ಮೊಬೈಲ್ ಫೋನ್ ಮೂಲಕ ಆಗಲಿ ಅಥವಾ ಕಂಪ್ಯೂಟರ್ ಮೂಲಕ ಆಗಲಿ ಅರ್ಜಿ ಹಾಕಲು ಆಗುವುದಿಲ್ಲ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ನಮ್ಮ ವಾಟ್ಸಪ್ Whats app ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ನೋಂದಣಿಯಾದವರಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು  ವಿಶ್ವಕರ್ಮ ಗುರುತಿನ ಚೀಟಿ ಲಭಿಸಲಿದೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  •  ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅಭ್ಯರ್ಥಿಯ ನೋಂದಣಿ ದಿನದ ವೇಳೆಗೆ ಫಲಾನುಭವಿಯ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು.
  • ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ  ಉದ್ಯೋಗಿ ಆಗಿರಬೇಕು. 
  •  ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ವಉದ್ಯೋಗ ಅಥವಾ ವ್ಯಾಪಾರ ಅಭಿವೃದ್ಧಿಗೆ ಸಾಲ ಸೌಲಭ್ಯ ಪಡೆದಿರಬಾರದು. 
  •   ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಮತ್ತು ಪಿಎಂ ಸ್ವನಿಧಿ ಯೋಜನೆಯ ಅಡಿಯಲ್ಲಿ ಈಗಾಗಲೇ ಸಾಲ ಪಡೆದವರಿಗೆ ಈ ಯೋಜನೆಯಡಿ ಮತ್ತೆ ಸಾಲ ಸಿಗುವುದಿಲ್ಲ.
  • ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ವ್ಯಾಪಾರ ಅಭಿವೃದ್ಧಿಗೆ ಅಥವಾ ವ್ಯವಹಾರ ಸ್ಥಾಪಿಸಲು ಈಗಾಗಲೇ ಪಡೆದಿರುವ ಸಾಲವನ್ನು ಮರುಪಾವತಿ ಮಾಡಿರುವ ಅಭ್ಯರ್ಥಿಗಳು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು. 
  • ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಷ್ಟೇ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ,  ಪಡಿತರ ಚೀಟಿಯ ಆಧಾರದ ಮೇಲೆ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು.
  • ಕೇಂದ್ರ ಅಥವಾ ರಾಜ್ಯ ಸರ್ಕಾರಿ  ನೌಕರಿಯಲ್ಲಿರುವ  ಅಭ್ಯರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೌಲಭ್ಯ ಸಿಗುವುದಿಲ್ಲ,   ಹಾಗಾಗಿ ಅವರು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.& ನಮ್ಮ ವಾಟ್ಸಪ್ Whats app ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊದಲ ವರ್ಷ ಐದು ಲಕ್ಷ ಕುಟುಂಬಗಳನ್ನು ಇದು ಒಳಗೊಳ್ಳುತ್ತದೆ. ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ ಎನ್ನಲಾಗಿದೆ.

ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರದ ಆಡಳಿತಕ್ಕೆ ಒಳಪಟ್ಟ ನಿಗಮಗಳು, ಮಂಡಳಿಗಳು, ಸಹಕಾರ ಬ್ಯಾಂಕ್ ಗಳು, ಕೈಗಾರಿಕೆಗಳು ಹೀಗೆ ಇನ್ನಿತರ ಸರ್ಕಾರದ ಆಡಳಿತಕ್ಕೆ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ   ಹುದ್ದೆಯಲ್ಲಿ ಕೆಲಸ ನಿರ್ವಹಿಸಬಾರದು. ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ,ಮುದ್ರಾ ಮತ್ತು ಪಿಎಂ ಸ್ವನಿಧಿ ಯೋಜನೆಯಲ್ಲಿ ಸಾಲಗಳನ್ನು ಪಡೆದಿರಬಾರದು. ಹಾಗೇನಾದರೂ ಈ ಮೇಲ್ಕಂಡ ಯೋಜನೆಗಳಲ್ಲಿ ಸಾಲ ಪಡೆದಿದ್ದರೆ  ಅಂದರೆ ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಕೆ, ದೃಢೀಕರಣ ಪರಿಶೀಲನೆ  ಬಗೆಗೆ ಏನಾದರೂ  ಗೊಂದಲಗಳಿದ್ದರೆ ಪಿಎಂ ವಿಶ್ವಕರ್ಮ ವೆಬ್‌ಸೈಟ್ pmvishwakarma.gov.in ಭೇಟಿ ನೀಡಿ  ಸಂದೇಹಗಳನ್ನು ಪರಿಹರಿಸಕೊಳ್ಳಬಹುದು. 

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ವ್ಯಾಪ್ತಿಗೆ ಒಳಪಡುವ 18 ಬಗೆಯ ಕುಶಲಕರ್ಮಿಗಳು! 

  1.  ಬಡಿಗ ಅಥವಾ ಮರಗೆಲಸದವರು ( ಕಟ್ಟಡಗಳಿಗೆ ಬೇಕಾದ ಮರದ ಸಾಮಾನುಗಳನ್ನು ತಯಾರಿ  ಮಾಡುವವರು,
  2.  ದೋಣಿ ತಯಾರಕರು,
  3. ಸಾಂಪ್ರದಾಯಿಕ ಶಸ್ತ್ರಗಳನ್ನು ತಯಾರಿಸುವವರು,
  4. ಕುಂಬಾರರು,( ಮಣ್ಣಿನ ಮಡಿಕೆ ಇತರೆ ವಸ್ತುಗಳನ್ನು ತಯಾರಿಸುವವರು)
  5. ಸುತ್ತಿಗೆ ಹಾಗೂ ಇತರ ವಸ್ತುಗಳ ತಯಾರಕರು,( ಕಬ್ಬಿಣದ ಹಾಗೂ ಇತರ ಲೋಹದ ಸಲಕರಣೆಗಳನ್ನು ತಯಾರಿಸುವವರು)
  6. ಬೀಗ ಹಾಗೂ ಕೀಲಿ ತಯಾರಕರು,
  7. ಅಕ್ಕಸಾಲಿಗರು,( ಚಿನ್ನ ಬೆಳ್ಳಿ ಇತರ ಆಭರಣಗಳನ್ನು ತಯಾರಿಸುವವರು)
  8. ಕಮ್ಮಾರರು,( ಕುಲುಮೆಯಲ್ಲಿ  ಕೆಲಸ ಮಾಡುವವರು)
  9. ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು,(  ಮೂರ್ತಿಗಳ  ಕೆತ್ತನೆ ಕೆಲಸ ಮಾಡುವವರು)
  10. ಸಾಂಪ್ರದಾಯಿಕವಾಗಿ ಪಾದರಕ್ಷೆ ತಯಾರಿಸುವವರು, (ಸ್ವತಹ ತಾವೇ ಚಪ್ಪಲಿಗಳನ್ನು ತಯಾರು ಮಾಡುವವರು)
  11. ಕಲ್ಲು ಕುಟಿಗರು ಅಥವಾ ರಾಜಮೇಸ್ತ್ರಿಗಳು( ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಮಾಡುವವರು)
  12. ಸಾಂಪ್ರದಾಯಿಕವಾಗಿ ಬಿದಿರು ಅಥವಾ ಇನ್ನಿತರ ಮರದ ಬುಟ್ಟಿ, ಚಾಪೆ, ಪೊರಕೆ,         ಹಾಗೂ ತೆಂಗಿನನಾರಿನ ಹಗ್ಗ ತಯಾರಕರು,
  13. ಸಾಂಪ್ರದಾಯಿಕವಾಗಿ ಗೊಂಬೆ ಮತ್ತು ಆಟಿಕೆ ತಯಾರಕರು,(ಸಣ್ಣ ಮರದ ಅಥವಾ ಇನ್ನಿತರ ಮಕ್ಕಳ ಆಟಿಕೆಗಳನ್ನು ತಯಾರಿಸುವವರು)
  14. ಕ್ಷೌರಿಕರು,( ತಲೆ ಕೂದಲು ತೆಗೆಯುವ ಸಲೂನ್ ಕೆಲಸಗಾರರು)
  15. ಹೂಮಾಲೆ ತಯಾರಕರು,
  16. ಅಗಸರು ಅಥವಾ ಬಟ್ಟೆ ತೊಳೆಯುವವರು,
  17. ದರ್ಜಿಗಳು,(ಬಟ್ಟೆ ಒಲೆಯುವ ಟೈಲರ್ಗಳು)
  18. ಮೀನಿನ ಬಲೆ ತಯಾರಕರು

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ 47 ಲಕ್ಷಕ್ಕೂ ಅಧಿಕ ಅರ್ಜಿಗಳು!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಜಾರಿಯಾಗಿ ಕೆಲವೇ ತಿಂಗಳುಗಳಲ್ಲಿ ಲಕ್ಷಾಂತರ ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ, ಸ್ವಾರಸ್ಯಕರ ಎಂದರೆ ಒಂದೇ ತಿಂಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ವಿಶ್ವಕರ್ಮ ಪೋರ್ಟಲ್‌ನಲ್ಲಿ 47  ಲಕ್ಷಕ್ಕೂ ಅಧಿಕ ಹೆಚ್ಚು ಅರ್ಜಿಗಳು  ಸಲ್ಲಿಕೆಯಾಗಿದೆ. ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಕೆ, ಆಯ್ಕೆ,ಹೀಗೆ ಪ್ರತಿಯೊಂದೂ  ಕೂಡ ಆನ್‌ಲೈನ್  ನಲ್ಲೆ  ಪರಿಹಾರ ಸಿಗಲಿದೆ. 

ಬಂಧುಗಳೇ ಈ ಮೇಲ್ಕಂಡ ಪಟ್ಟಿಯಲ್ಲಿರುವ 18  ವರ್ಗದಲ್ಲಿ  ಇರುವ ಯಾವುದೇ ಕರಕುಶಲಿಗರು  ನೀವಾಗಿದ್ದರೆ ಈ ಕೂಡಲೇ ನಿಮಗೆ ಹತ್ತಿರವಿರುವ  ಕಾಮನ್ ಸೇವಾ ಸರ್ವಿಸ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿ,   ಮೂರು ಲಕ್ಷ ರೂ ವರೆಗಿನ ಸೌಲಭ್ಯಗಳನ್ನು ಪಡೆದುಕೊಳ್ಳಿ, ಇದರ ಬಗೆಗಿನ ಮುಂದಿನ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. & ನಮ್ಮ ವಾಟ್ಸಪ್ Whats app ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ

ಇಂತಿ ನಿಮ್ಮ ಪ್ರೀತಿಯ ತಂಡ

ಮತ್ತೊಮ್ಮೆ ಓದಿ 

ಧನ್ಯವಾದ

WhatsApp Group Join Now
Telegram Group Join Now

6 thoughts on “ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍

%d