ನಮಸ್ತೆ ಬಂಧುಗಳೇ…..
ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್, ಪದವಿ ಪಡೆದು ಪಾಸಾದವರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುವ ಸಾಧ್ಯತೆ ಕಂಡು ಬಂದಿದೆ . ಶೀಘ್ರದಲ್ಲೇ 500 ಹುದ್ದೆಗಳು ಸರ್ವೇಯರ್, 60 ಎಡಿಎಲ್‌ಆರ್ ADLR, 1500 ಗ್ರಾಮ ಲೆಕ್ಕಾಧಿಕಾರಿ VA (ಗ್ರಾಮಆಡಳಿತಾಧಿಕಾರಿ) ಹುದ್ದೆಗಳನ್ನು ಸೇರಿ 2,000ಕ್ಕೂ ಹೆಚ್ಚಿನ ಖಾಲಿ ಇರುವ ಹುದ್ದೆಗಳಿಗೆ ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.,, ಎಂಬುದಾಗಿ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
- ಕಂದಾಯ ಇಲಾಖೆಯಿಂದ 2000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.
- ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka Revenue Dept Recruitment 2024
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ,(ಗ್ರಾಮಆಡಳಿತಾಧಿಕಾರಿ) ಸರ್ವೇಯರ್ ಹಾಗೂ ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಮುಂದಿನ ಬಜೆಟ್‌ನಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ!nadakacheri 2024
ನಮ್ಮ ರಾಜ್ಯದಲ್ಲಿ 1500 ಗ್ರಾಮ ಲೆಕ್ಕಾಧಿಕಾರಿ(ಗ್ರಾಮಆಡಳಿತಾಧಿಕಾರಿ), 500 ಸರ್ವೇಯರ್, 60 ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಸಂಬಂಧ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆ ನಡೆಸಿದ ಎಲ್ಲಾ ಇಲಾಖೆಗಳ ಸಚಿವರು ಮುಖ್ಯಮಂತ್ರಿ ಅವರೂ ಹುದ್ದೆಗಳ ಭರ್ತಿಗೆ ಆಸಕ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್‌ನಲ್ಲಿ ಎಷ್ಟು ಹುದ್ದೆಗಳ ಭರ್ತಿಗೆ ಅವರಿಂದ ಅನುಮತಿ ಸಿಗುತ್ತದೆಯೋ ಅಷ್ಟೂ ಸಂಖ್ಯೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಕಂದಾಯ ಸಚಿವರು ಕೃಷ್ಣ ಬೈರೇಗೌಡ ಹೇಳಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮುಂದುವರೆದು ಗ್ರಾಮ ಲೆಕ್ಕಾಧಿಕಾರಿಗಳ (ಗ್ರಾಮಆಡಳಿತಾಧಿಕಾರಿ), ನೇಮಕವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಮಾಡಬೇಕು. ಹಾಗೂ ಪ್ರತಿಯೊಂದು ಆಯ್ಕೆ ಪ್ರಕ್ರಿಯೆಯು ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲೇ ನಡೆಯುತ್ತದೆ. ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಜೇಷ್ಠತೆಯ ಆಧಾರದ ಮೇಲೆ ನೇಮಕಾತಿಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿವರಿಸಿದರು.
ಭೂಮಾಪಕರ ಹಾಗೂ ಇನ್ನಿತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯ ಹಂತದಲ್ಲಿನ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪಾರದರ್ಶಕವಾಗಿ ನಡೆಸಲು ಚಿಂತಿಸಿ ಅಧಿಕಾರಿಗಳ ಜತೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಹಲವಾರು ಬಾರಿ ಪಿಎಸ್ಐ ಹಾಗೂ ಇನ್ನಿತರ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಭವಿಷ್ಯದಲ್ಲಿ ನಡೆಯಲಿರುವ ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಯಾವ ಹುದ್ದೆಗೆ ಏನು ವಿದ್ಯಾರ್ಹತೆ ? ತಿಳಿದುಕೊಳ್ಳಿ.
- ಗ್ರಾಮ ಲೆಕ್ಕಾಧಿಕಾರಿ,(ಗ್ರಾಮಆಡಳಿತಾಧಿಕಾರಿ) : ದ್ವಿತೀಯ ಪಿಯುಸಿ 2nd PUC
- ಸರ್ವೇಯರ್ (ಭೂಮಾಪಕರು) : ಡಿಪ್ಲೊಮ / ಐಟಿಐ / ಬಿಇ / ಬಿ.ಟೆಕ್ / ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ).
- ಎಡಿಎಲ್‌ಆರ್ (ADLR) : ಡಿಪ್ಲೊಮ / ಐಟಿಐ / ಬಿಇ / ಬಿ.ಟೆಕ್ / ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ).
ನೇಮಕಾತಿ ವಿಧಾನ :
ಈ ಮೇಲ್ಕಂಡ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಮತ್ತು ನೇಮಕ ಮಾಡಿಕೊಳ್ಳಲಾಗುತ್ತದೆ.
ಹುದ್ದೆವಾರು ವೇತನ ಶ್ರೇಣಿ ವಿವರ :
- ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತಾಧಿಕಾರಿ) : ವೇತನ ಶ್ರೇಣಿ ರೂ.21,400-42,000.
- ಸರ್ವೇಯರ್ (ಭೂಮಾಪಕರು) : ವಾರ್ಷಿಕ Rs.3,60,000 – 4,80,000.
- ಎಡಿಎಲ್‌ಆರ್ ADLR : ವಾರ್ಷಿಕ ವೇತನ ರೂ.5 ರಿಂದ 6 ಲಕ್ಷವರೆಗೆ. (ಸಂಭಾವ್ಯ)ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ