ನಮಸ್ತೆ ಬಂಧುಗಳೇ…
ವಿದ್ಯಾಸಿರಿ ವಿದ್ಯಾರ್ಥಿವೇತನ : ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗಲು ನಮ್ಮ ರಾಜ್ಯ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತದೆ. ಕರ್ನಾಟಕ ಸರ್ಕಾರವು ರೂಪಿಸಿರುವ ಅಂತಹ ಹಲವಾರು ಯೋಜನೆಗಳಲ್ಲಿ ಒಂದು ಯೋಜನೆಯು ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆ ಕೂಡ ಒಂದು. ಹೀಗೆ ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಜವಾಬ್ದಾರಿ ವಹಿಸಿಕೊಂಡಿದೆ. ಕರ್ನಾಟಕ ಸರ್ಕಾರವು ವಿದ್ಯುನ್ಮಾನ ಪಾವತಿ ಮತ್ತು ವಿದ್ಯಾರ್ಥಿವೇತನದ ಅರ್ಜಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂಬುದು ತಿಳಿದು ಬಂದಿದೆ, ಇದು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿವೇತನವನ್ನು ಯಾವುದೇ ತೊಂದರೆಯಿಲ್ಲದೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಸಹಾಯ ಮಾಡುತ್ತದೆ.
ಈ ಸುದ್ದಿ ಓದಿ:- “Colgate Scholarship” – 75 ಸಾವಿರ ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 7 ಕೊನೆ ದಿನ ಈಗಲೇ ಅರ್ಜಿ ಸಲ್ಲಿಸಿ
ಈ ವಿದ್ಯಾರ್ಥಿ ವೇತನದ ಯೋಜನೆಯ ಮೂಲಕ, ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಕೋರ್ಸ್ಗಳಿಗೆ ಸೇರಲು ಉಚಿತ ಹಾಸ್ಟೆಲ್ ವಸತಿ/ ಪರೀಕ್ಷಾ ಶುಲ್ಕ, SSLC/ದ್ವಿತೀಯ ಪಿಯುಸಿಗೆ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ಮತ್ತು PMS FAAS, FC ಹಾಗೂ NUR ಗಾಗಿ ಸಂಪೂರ್ಣವಾಗಿ ಕೋರ್ಸ್ ಶುಲ್ಕ ರಿಯಾಯಿತಿಯನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ, ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ವಿದ್ಯಾರ್ಥಿವೇತನವನ್ನು ತಾವುಗಳು ಪಡೆಯಲು ಸಾಧ್ಯವಾಗುತ್ತದೆ.
Table of Contents
ವಿದ್ಯಾಸಿರಿ ಸ್ಕಾಲರ್ಶಿಪ್
ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಅನ್ನು ನೀಡುತ್ತಿದ್ದು ವಸತಿ ಮತ್ತು ಊಟವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವ ಸದುದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭ ಮಾಡಿದೆ. ವಿದ್ಯಾಸಿರಿ ವಿದ್ಯಾರ್ಥಿ ವೇತನದ ಸಹಾಯದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇರುವ & ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳಲು ಅವಕಾಶ ಸಿಗದೇ ಇರುವಂತಹ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ತಮ್ಮ ದೈನಂದಿನ ಊಟ ತಿಂಡಿ ವಸತಿ ಖರ್ಚು ಮಾಡಿ ಕೊಳ್ಳಲು ಈ ವಿದ್ಯಾರ್ಥಿ ವೇತನವನ್ನು ಅವಕಾಶ ಕಲ್ಪಿಸುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಸುದ್ದಿ ಓದಿ:- ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ
ಒಟ್ಟಾರೆ ಶೈಕ್ಷಣಿಕ ವರ್ಷದಲ್ಲಿ ಹತ್ತು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದು ಸಾವಿರದ ಐದು ನೂರುಗಳನ್ನು (1,500) ರೂಪಾಯಿಗಳನ್ನು ಅಂದರೆ,, ಜೂನ್ 2024 ರಿಂದ ಮಾರ್ಚ್ 2025 ರವರೆಗೆ ಹದಿನೈದು (15,000) ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿಗಳು ವಿದ್ಯಾಸಿರಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಹೀಗೆ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಅವರ ಅಧಿಕೃತ ಬ್ಯಾಂಕ್ ಖಾತೆಗೆ 1,500 ರೂಪಾಯಿಗಳನ್ನು ನೇರವಾಗಿ ಜಮೆ ಮಾಡಲಾಗುತ್ತದೆ.
ವಿದ್ಯಾಸಿರಿ ವಿದ್ಯಾರ್ಥಿ ವೇತನದ (ಸ್ಕಾಲರ್ಶಿಪ್) 2024 ರ ಮುಖ್ಯ ಉದ್ದೇಶ
ವಿದ್ಯಾಸಿರಿ ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಯೋಜನೆಯ ಮುಖ್ಯ ಉದ್ದೇಶ ಹಣಕಾಸಿನ ಸ್ಥಿತಿಗತಿಯಲ್ಲಿ ದುರ್ಬಲ ವರ್ಗಕ್ಕೆ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ತಪ್ಪದೇ ನೀಡುವುದು ಮತ್ತು ಈ ವರ್ಗಗಳನ್ನು ಸಬಲೀಕರಣ ಮಾಡುವುದಾಗಿದೆ. ಕರ್ನಾಟಕ ಸರ್ಕಾರವು ವಿದ್ಯಾರ್ಥಿ ವೇತನವನ್ನು ನೀಡಲು ಯೋಜನೆ ಮಾಡಿರುವುದರಿಂದ ಈಗ ವಿದ್ಯಾರ್ಥಿಗಳು ತಮ್ಮ ದೈನಂದಿನ ಶಿಕ್ಷಣ ಖರ್ಚುಗಳನ್ನು ನಿಭಾಯಿಸಿಕೊಳ್ಳಬಹುದಾಗಿದೆ ಹಾಗಾಗಿ ತಮ್ಮ ಹಣಕಾಸಿಗೆ ಇತರರನ್ನು ಅವಲಂಬಿಸುವ ಅಗತ್ಯವಿಲ್ಲ, ಹಾಗೂ ಯೋಜನೆಯು ರಾಷ್ಟ್ರದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲಿದೆ, ಅದಲ್ಲದೆ ಉದ್ಯೋಗ ಸೃಷ್ಟಿಯಾಗಲಿದೆ.
ವಿದ್ಯಾಸಿರಿ ವಿದ್ಯಾರ್ಥಿವೇತನದ (ಸ್ಕಾಲರ್ಶಿಪ್) ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು
* ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಾರಂಭಿಸಿದೆ.
* ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
* ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯನ್ನು ಕರ್ನಾಟಕ ಸರ್ಕಾರದ ಭಾಗವಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಿರ್ವಹಿಸುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಸುದ್ದಿ ಓದಿ:- 2024 ರಲ್ಲಿ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡುತ್ತಿದ್ದರೆ ತಿಳಿದುಕೊಳ್ಳಲೇ ಬೇಕಾದ ಅಂಶಗಳೇನು ?
ಕರ್ನಾಟಕ ಸರ್ಕಾರವು ವಿದ್ಯುನ್ಮಾನ ಪಾವತಿ & ವಿದ್ಯಾರ್ಥಿವೇತನದ ಅರ್ಜಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು ಜಮೆಮಾಡುತ್ತದೆ, ಇದು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿವೇತನವನ್ನು ಯಾವುದೇ ಅಡ್ಡಿ ತೊಂದರೆಯಿಲ್ಲದೆ ಸರಳವಾಗಿ ಪಡೆಯಲು ಸಹಾಯ ಮಾಡುತ್ತದೆ. ಈ ಯೋಜನೆಯ ಮೂಲಕ,, ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಕೋರ್ಸ್ಗಳಿಗೆ, ಉಚಿತ ಹಾಸ್ಟೆಲ್ ವಸತಿ-ಶುಲ್ಕ, SSLC/ದ್ವಿತೀಯ ಪಿಯುಸಿಗೆ (2nd PUC) ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ಮತ್ತು NUR ಗಾಗಿ ಸಂಪೂರ್ಣವಾಗಿ ಸಂಬಂಧಿತ ಕೋರ್ಸ್ ಶುಲ್ಕ ರಿಯಾಯಿತಿಯನ್ನು ಒದಗಿಸಲಾಗುತ್ತದೆ. ಮತ್ತು ಈ ಯೋಜನೆಯ ಅನುಷ್ಠಾನದಿಂದ, ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುತ್ತದೆ..
ವಿದ್ಯಾಸಿರಿ ವಿದ್ಯಾರ್ಥಿವೇತನ (Scholarship) ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
https://ssp.postmatric.karnataka.gov.in/
ವಿದ್ಯಾಸಿರಿ ವಿದ್ಯಾರ್ಥಿವೇತನ (Scholarship) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
ವಿದ್ಯಾರ್ಥಿಗಳು ವಿದ್ಯಾಸಿರಿ ವಿದ್ಯಾರ್ಥಿವೇತನ (Scholarship) ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಇಮೇಲ್ ಐಡಿ
- 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಪಿಯುಸಿ ಅಥವಾ ಪದವಿ ಸೆಮಿಸ್ಟರ್ ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ವಿಳಾಸ
- ವಿದ್ಯಾರ್ಥಿಯ ಕಾಲೇಜ್ ನೋಂದಣಿ ಸಂಖ್ಯೆ
- ಹಾಸ್ಟೆಲ್ ವಿವರಗಳು ಕೂಡ ಬೇಕು.
- ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಹೀಗೆ ಕೆಲವು ಅಗತ್ಯ ದಾಖಲೆಗಳು ಹೊಂದಿರಬೇಕು.
ಈ ಎಲ್ಲಾ ಮೇಲಿನ ದಾಖಲೆಗಳನ್ನು ತಯಾರಿ ಮಾಡಿಕೊಂಡು ನಿಮ್ಮ ಹತ್ತಿರದ ಕಂಪ್ಯೂಟರ್ ಸೈಬರ್ ಸೆಂಟರ್ ಗೆ ತೆರಳಿ ಅರ್ಜಿಯನ್ನು ಹಾಕಬಹುದು, ಅಥವಾ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿಯೇ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ..ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಸಿರಿ (Scholarship) ವಿದ್ಯಾರ್ಥಿ ವೇತನ ಪಡೆಯಲು ಅಗತ್ಯವಿರುವ ಅರ್ಹತೆಗಳು
ಕರ್ನಾಟಕ ಸರ್ಕಾರದ ವಿದ್ಯಾಸಿರಿ ವಿದ್ಯಾರ್ಥಿವೇತನ (Scholarship) ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕಾದರೆ ವಿದ್ಯಾರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ 1. ವಿದ್ಯಾರ್ಥಿಯು ರಾಜ್ಯದ ಖಾಯಂ ನಿವಾಸಿ ಆಗಿರಬೇಕು. 2. ಎಸ್ ಸಿ ,ಎಸ್ ಟಿ ,ಒ ಬಿ ಸಿ ಮೊದಲಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. 3. ಕುಟುಂಬದ ವಾರ್ಷಿಕ ಆದಾಯವು ರೂ 2.50 ಲಕ್ಷಕ್ಕಿಂತ ಪ್ರವರ್ಗ 1 ಅಡಿಯಲ್ಲಿ ಬರುವ ವಿದ್ಯಾರ್ಥಿಗಳು ಮೀರಬಾರದು ಹಾಗೂ 4. ಓಬಿಸಿ (OBC) ಹಿಂದುಳಿದ ವರ್ಗಗಳು) ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿಗಳು ಮೀರಿರಬಾರದು.
ಕನಿಷ್ಠ ಎರಡು ವರ್ಷವಾದರೂ ಕರ್ನಾಟಕದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮಾಡಿರಬೇಕು ಹಾಗೂ ಎಪ್ಪತ್ತೈದರಷ್ಟು (75%) ಹಾಜರಾತಿಯನ್ನು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ಹೊಂದಿರಬೇಕು. ಹಾಗೂ ಸರ್ಕಾರ Or ಮಂಡಳಿಯಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆ ಅಥವಾ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದ ಅಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಹಾಗೂ ವಿಶೇಷವಾಗಿ ವಿದ್ಯಾಸಿರಿ ವಿದ್ಯಾರ್ಥಿ ವೇತನಗು ಕೇವಲ ಗ್ರಾಮೀಣ ಭಾಗದ ಹಳ್ಳಿ ವಿದ್ಯಾರ್ಥಿಗಳಿಗೆ ಮಾತ್ರ ದೊರಕಲಿದ್ದು, ಹಾಗೂ ವ್ಯಾಸಂಗ ಮಾಡುತ್ತಿರುವ ಕಾಲೇಜು ಅಥವಾ ಶಿಕ್ಷಣ ಸಂಸ್ಥೆ ತಮ್ಮ ವಾಸಸ್ಥಾನದಿಂದ 5 ಕಿ.ಮೀ ದೂರದಲ್ಲಿ ಇರಬೇಕು.
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ