ಕೇವಲ 13, 14ರ  ವಯಸ್ಸಿಗೆ ಲೈಂಗಿಕ ಕುತೂಹಲದಿಂದ ಗರ್ಭಿಣಿಯಾಗುತ್ತಿರುವ  ಈ ಬಾಲೆಯರು ಎಲ್ಲಿ? ಆಘಾತಕಾರಿ ಸಂಗತಿ ಬೆಳಕಿಗೆ!

WhatsApp Group Join Now
Telegram Group Join Now

ಬಾಲಕಿಯರ ಗರ್ಭ ಧರಿಸುವಿಕೆಗೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳು?

  •  ಕುತೂಹಲದಿಂದ ಲೈಂಗಿಕತೆಗೆ ಒಳಗಾಗುವುದು.
  • ಬಾಲ್ಯ ವಿವಾಹ ಹೆಚ್ಚಾಗುತ್ತಿರುವುದು.
  • ಹಂತಕರಿಂದ ಲೈಂಗಿಕ ದೌರ್ಜನಕ್ಕೆ ಬಲಿಯಾಗುತ್ತಿರುವುದು.
  1. ಬೆಂಗಳೂರು ನಗರ 2815 ಪ್ರಕರಣಗಳು ಬೆಳಕಿಗೆ. 
  2. .ಬಿಜಾಪುರ 2004 ಪ್ರಕರಣಗಳು.
  3. . ಬೆಳಗಾವಿ 2754 ಪ್ರಕರಣಗಳು.
  4.  ಬಳ್ಳಾರಿ 1896 ಪ್ರಕರಣಗಳು.
  5.  ಗುಲ್ಬರ್ಗ 1511 ಪ್ರಕರಣಗಳು.

ಈ ಮೇಲ್ಕಂಡಲ್ಲಿ ನಮೂದಿಸಿರುವ ಹಾಗೆ ರಾಜ್ಯದ ಅತಿ ಹೆಚ್ಚು ಬಾಲಕಿಯರು ಗರ್ಭಧರಿಸಿರುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಅಧಿಕೃತವಾಗಿ ವರದಿಯನ್ನು ಬಿಡುಗಡೆ ಮಾಡಿದೆ  ಇದು ಕೇವಲ 2023 ರ ಜನವರಿಯಿಂದ  ಕೊನೆಯ ನವೆಂಬರ್ ವರೆಗೆ ಸಿಕ್ಕಿರುವ ದತ್ತಾಂಶದ ವರದಿಯಾಗಿದೆ,

ಬಾಲಕಿಯರು ಗರ್ಭ ಧರಿಸುವಿಕೆಗೆ ಅವೈಜ್ಞಾನಿಕವಾಗಿ ಮಾಡುತ್ತಿರುವ ಬಾಲ್ಯ ವಿವಾಹವೇ ಮುಖ್ಯ ಕಾರಣ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಆದರೆ ಬಾಲ್ಯ ವಿವಾಹವನ್ನು ತಡೆಯಲು ಹಲವಾರು ಸಂಘ ಸಂಸ್ಥೆಗಳು, ಪಂಚಾಯಿತಿ ಅಧಿಕಾರಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪ್ರಯತ್ನ ಮಾಡದೆ ಸೋತಿದ್ದಾರೆ. 

ಹಲವಾರು ಕಾರಣಗಳಿಂದ ವಿದ್ಯಾಭ್ಯಾಸವನ್ನು  ಮೊಟಕುಗೊಳಿಸಿದ ಹೆಣ್ಣು ಮಕ್ಕಳನ್ನು ಪತ್ತೆ ಹಚ್ಚುವ ಮೂಲಕ ಬಾಲ್ಯ ವಿವಾಹಗಳನ್ನು ಗರಿಷ್ಠ ಪ್ರಮಾಣದಲ್ಲಿ ತಡೆಯಬಹುದು ಎಂಬುದು ತಜ್ಞರವಾದವಾಗಿದೆ.ಬಾಲ್ಯ ವಿವಾಹಗಳು ಹೆಚ್ಚಾಗಿ ಬಡತನವನ್ನು ಹೊಂದಿರುವುದರಿಂದಲೇ ತಮ್ಮ ಆರ್ಥಿಕ ಸ್ಥಿತಿಗತಿಯನ್ನು ಒಳ್ಳೆಯ ರೀತಿ ನಡೆಸಬಹುದೆಂಬುದು ತಿಳಿದಿದೆ. ಇನ್ನು ಕೆಲವು ಭಾಗಗಳಲ್ಲಿ ಶ್ರೀಮಂತರು ರಾಜಕೀಯ ವರ್ಗದ ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಇನ್ನೂ ವೈಜ್ಞಾನಿಕ ಸಾಂವಿಧಾನಿಕವಾದ ಕನಿಷ್ಠ ಮದುವೆ ವಯಸ್ಸಿಗೂ ಬರುವ ಮುನ್ನವೇ  ತಮ್ಮ ಮಕ್ಕಳ ಮದುವೆಯನ್ನು ನಿಶ್ಚಯ ಮಾಡಿಬಿಡುತ್ತಾರೆ. ಆದರೆ ಅಲ್ಲಿ ಮುಂದೆ ದಾಂಪತ್ಯ ವಹಿಸುವ ತಮ್ಮ ಮಕ್ಕಳ ಯಾವುದೇ ಅಭಿಪ್ರಾಯಕ್ಕೂ ಮನ್ನಣೆ ಇರುವುದಿಲ್ಲ ಅವರು ಮುಂದೆ ಪ್ರಭುದ್ಧರಾದಾಗ ದಾಂಪತ್ಯದಲ್ಲಿ ಬಿರುಕು ಕಂಡು ವಿಚ್ಛೇದನಕ್ಕೆ ಅರ್ಜಿ ಹಾಕುವ ತೊಡಕುಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. 

WhatsApp Group Join Now
Telegram Group Join Now

ಗಂಡು ಮಕ್ಕಳು ಓದುವುದನ್ನು ನಿಲ್ಲಿಸಿದರೆ ಯಾವುದೋ ಒಂದು ಕೆಲಸಕ್ಕೆ ನೇಮಿಸುವ ಈ  ಪೋಷಕರು ಅದೇ ಹೆಣ್ಣು ಮಕ್ಕಳು ಓದುವುದನ್ನು ನಿಲ್ಲಿಸಿದರೆ ನೇರವಾಗಿ ಅವರ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ,  ಅವರ ಬೇಕು ಬೇಡಗಳನ್ನು ಪರಿಗಣಿಸದೆ ಪ್ರಭುದ್ಧತೆ ಬರುವ ಮುನ್ನವೇ ಸಂಸಾರದ ಭಾರವನ್ನು ಹೊರಲು ಅವರನ್ನು ತಳ್ಳುತ್ತಿದ್ದಾರೆ.

ಬಾಲಕಿಯರ ಗರ್ಭಚೀಲವು ಬೆಳವಣಿಗೆ ಆಗುವ ಮುನ್ನವೇ ಭ್ರೂಣವನ್ನು ಹೊಂದುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಹಾಗೂ ಪ್ರಸವದ ಸಮಯದಲ್ಲೂ ವೇದನೆಪಡುವಂತಾಗಿದೆ.

ಭಾರತೀಯ ಸಂವಿಧಾನದ ಪ್ರಕಾರ 18 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಮದುವೆಯಾಗಲು ಅರ್ಹರಾಗಿರುತ್ತಾರೆ. ಈ ಅರ್ಹತೆಯು ವೈದ್ಯ ವಿಜ್ಞಾನದ ಪ್ರಕಾರವಾಗಿಯೂ ಕನಿಷ್ಠ ವಯಸ್ಸಾಗಿರುತ್ತದೆ. ಆದರೆ ಇದನ್ನು ಅರ್ಥೈಸಲು ನಮ್ಮ ನಾಗರಿಕರು ಹಿಂದುಳಿದಿದ್ದಾರೆ. ಹೀಗೆ ಸರಿಯಾದ ವೈಜ್ಞಾನಿಕವಾದ ವಯಸ್ಸಿಗೆ ಬರುವ ಮುನ್ನವೇ ದಾಂಪತ್ಯಕ್ಕೆ ಬರುವುದರಿಂದ ಬಾಲೆಯರು ಸಾಂಸಾರಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ಸಬಲರಲ್ಲದ ಕಾರಣ ಒತ್ತಡಕ್ಕೆ ಒಳಗಾಗುತ್ತಾರೆ,  ಹೀಗೆ ಅತಿಯಾದ ಒತ್ತಡವು ವಯಸ್ಸಿಗೆ ಮೀರಿದ್ದಾಗಿರುತ್ತದೆ,  ಕೆಲವು ಹೆಣ್ಣು ಮಕ್ಕಳು ಅವೈಜ್ಞಾನಿಕ ಈ ಒತ್ತಡಕ್ಕೆ ಬಲಿಪಶುಗಳಾಗುತ್ತಾರೆ,  ಅವರಿಗೆ ಬುದ್ಧಿ ಬರುವಷ್ಟರಲ್ಲಿ ಕಾಲವು ಮೀರಿರುತ್ತದೆ ಈ ಅಂಶಗಳು ಒಳ್ಳೆಯ ದಾಂಪತ್ಯಕ್ಕೆ ಅಡ್ಡಿಗಳಾಗಿ ಪರಿಣಮಿಸುತ್ತವೆ. 

ಈ ಮೇಲೆ ಹೇಳಿದಂತೆ ವೈದ್ಯಕೀಯ ವಿಜ್ಞಾನದ ಪ್ರಕಾರ ಸರಿಯಾಗಿ ಬೆಳವಣಿಗೆ ಆಗದ ಗರ್ಭಚೀಲದಲ್ಲಿ ಶಿಶು ಜನ್ಮ ತಾಳುವುದರಿಂದ ಪ್ರಭುದ್ಧವಲ್ಲದ ಹೆಣ್ಣಿನ ದೇಹಕ್ಕೆ ಅಪಾಯ ವಾಗುವ ಸಂಭವವಿರುತ್ತದೆ, ಹೆಣ್ಣಿನ ತಂದೆ ತಾಯಂದಿರು ಸಂಬಂಧಿಕರ ಅಥವಾ ಇನ್ಯಾರೋ ವ್ಯಕ್ತಿಗಳ ಮಾತುಗಳಿಗೆ ಒತ್ತಡಕ್ಕೆ ಸಿಲುಕಿ ನಿರ್ದಿಷ್ಟ ವಯಸ್ಸಿಗೆ ಬರುವ ಮುನ್ನವೇ ಮದುವೆ ಮಾಡಿಬಿಡುತ್ತಾರೆ. 

ಆದರೆ ಕಷ್ಟಪಡುವ ಜೀವಗಳು ಇವರ ಮಕ್ಕಳೇ ಆಗಿರುತ್ತಾರೆ ಆದರೆ ಸಂದರ್ಭ ಸ್ಥಿತಿ ಅವರ ಅರಿವಿಗೆ ಬರುವುದಿಲ್ಲ. 

ಮದುವೆ ಮಾಡುವ ಸಂದರ್ಭದಲ್ಲಿ ಹೆಣ್ಣಿನ ತಂದೆ ತಾಯಂದಿರು ಕೇವಲ ವರ ಆಗುವವನ ಆಸ್ತಿ, ಜಮೀನು,  ಹಣ, ಪ್ರತಿಷ್ಠೆ, ಇವುಗಳ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸುತ್ತಾರೆ ಆದರೆ ನಿಜವಾಗಿಯೂ ತನ್ನ ಹೆಣ್ಣು ಮಕ್ಕಳಿಗೆ ಬೇಕಾಗಿರುವುದು ಗುಣವಿರುವ  ವರನೇ ಹೊರತು ಆಸ್ತಿ ಹಣವಿರುವ ಶ್ರೀಮಂತನಲ್ಲ,  ಏಕೆಂದರೆ ಹಣ ಆಸ್ತಿ ಉಳ್ಳವನು ಕೇವಲ ಹಣಕ್ಕೆ ಮಾತ್ರ ಕಟ್ಟು ಬೀಳುತ್ತಾನೆ ಆದರೆ ಒಳ್ಳೆಯ ಗುಣ ಇರುವವನು ಸಂಸ್ಕಾರವಂತ ಮನೆಯಿಂದ ಬಂದವನು ತನ್ನ ಮನೆಗೆ ಬಂದ ತನ್ನ  ನಂಬಿ ಬಂದ ಹೆಣ್ಣನ್ನು ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವ ಬಗ್ಗೆ ಚಿಂತಿಸುತ್ತಾನೆ.

ಇನ್ನೂ ಈ ಬಾಲ್ಯ ವಿವಾಹಗಳು ಭಾರತದಲ್ಲಿ ಮಾತ್ರವಲ್ಲದೆ ಎಲ್ಲಾ ದೇಶಗಳಲ್ಲಿಯೂ ಬಹು ಹಿಂದಿನಿಂದಲೂ ನಡೆದು ಬಂದಿವೆ ಆಫ್ರಿಕಾದಂತಹ  ದೇಶದಲ್ಲಿ ಬುಡಕಟ್ಟು ಜನಾಂಗಗಳೇ ಹೆಚ್ಚು ಅಂತಹ ವ್ಯವಸ್ಥೆಯಲ್ಲಿ ಕೇವಲ ಎಂಟು ಒಂಬತ್ತು ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಅತಿ ಹೆಚ್ಚು ವಯಸ್ಸಿನ ಅಂತರ ಇರುವ ಅದೇ ಜನಾಂಗದ ಗಂಡಸರಿಗೆ ಅವರ ಸಂಪ್ರದಾಯವಾಗಿ ಮದುವೆ ಮಾಡಿಬಿಡುತ್ತಾರೆ,  ಪ್ರಪಂಚದಲ್ಲೇ ಅತಿ ಹೆಚ್ಚು ಶ್ರೀಮಂತ ದೇಶ ಮತ್ತು ಅಭಿವೃದ್ಧಿ ಹೊಂದಿದ ದೇಶ ಎಂದು ಕರೆಸಿಕೊಳ್ಳುವ ಅಮೆರಿಕಾದಲ್ಲೂ ಕೂಡ 16 ವರ್ಷಕ್ಕೆ ಬಂದ ಮಕ್ಕಳನ್ನು ಅವರ ಜನ್ಮದಾತರ ಮತ್ತು ನ್ಯಾಯಾಲಯದ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳಬಹುದು.. 

ಹಾಗೂ ಅನಾದಿಕಾಲದಿಂದಲೂ ಹಲವಾರು ಧರ್ಮಗಳಲ್ಲಿ ಬಹುಬೇಗನೆ ಮದುವೆ ಮಾಡುವುದುಂಟು ಅದರಲ್ಲೂ ಇಸ್ಲಾಂ ಧರ್ಮದಲ್ಲಿ  ಮಕ್ಕಳಿಗೆ ಮದುವೆ ಮಾಡಲು ಕನಿಷ್ಠ ವಯಸ್ಸನ್ನು ನಿಗದಿಪಡಿಸಿಲ್ಲ ಆದರೂ ನಿರ್ದಿಷ್ಟವಾಗಿ ಅಲ್ಲದಿದ್ದರೂ ಕೆಲವು ಉದಾಹರಣೆಗಳೊಂದಿಗೆ ಹೇಳಬೇಕೆಂದರೆ 12ನೇ ವಯಸ್ಸಿಗೆ ಬಂದ ಹುಡುಗನನ್ನು ಕೇವಲ ಒಂಬತ್ತು ವರ್ಷ ವಯಸ್ಸಿಗೆ ಬಂದ ಬಾಲಕಿಗೆ ಮದುವೆ ಮಾಡಿ ಬಿಡುತ್ತಿದ್ದರು, ಆದರೆ ಸಂಭೋಗ ಪ್ರಕ್ರಿಯೆಯಲ್ಲಿ ತೊಡಗಲು ಹುಡುಗನಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಹುಡುಗಿಗೆ ಕನಿಷ್ಠ 12 ವರ್ಷ ವಯಸ್ಸಾಗಿರಬೇಕೆಂದು ಕೆಲವೊಂದು ಇಸ್ಲಾಂ ಉದಾಹರಣೆಗಳನ್ನು ನಾವು ಕಾಣಬಹುದು, 

ಪರ್ಷಿಯಾದ ಚಿರಾಕ್ ನಲ್ಲಿ, ಸಿರಿಯಾ ದೇಶದಲ್ಲಿ ಪಶ್ಚಿಮ ಆಫ್ರಿಕಾದ,ಸೂದನ ನೋಬಿಯಾದಲ್ಲಿ ತರುಣಿಯರು ಮುಟ್ಟಾಗುವ ಮೊದಲೇ ಅವರೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ.

1955ರ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮದುವೆಗೆ ಸಿದ್ಧವಾಗಿರುವ ವರನ ವಯಸ್ಸು ಕನಿಷ್ಠ 21 ವರ್ಷ ಆಗಿರಬೇಕು ಮತ್ತು ವಧುವಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು. ಈ ಕಾನೂನಿನ ಉಲ್ಲಂಘನೆ ಮಾಡಿದವರು ಸೆಕ್ಷನ್ 11 ಮತ್ತು 12ರ ಅಡಿಯಲ್ಲಿ  ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಹಾಗೂ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ವಿಚ್ಛೇದನವನ್ನು ಪಡೆಯಬಹುದು. 

ಬಾಲ್ಯ ವಿವಾಹ  ಪದ್ಧತಿಯನ್ನು ತಡೆಯಲು ಭಾರತದ ರಾಜಸ್ಥಾನ್ ಗುಜರಾತ್ ಮಹಾರಾಷ್ಟ್ರ ಆಂಧ್ರ ಬಿಹಾರ್ ಹಿಮಾಚಲ ಪ್ರದೇಶ  ರಾಜ್ಯಗಳಲ್ಲಿ ಮದುವೆಯಾಗುವ ಗಂಡು ಮತ್ತು ಹೆಣ್ಣಿನ ವಯಸ್ಸನ್ನು ದೃಢಪಡಿಸಲು ವಿವಾಹ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಆದರೆ ಹಿನ್ನುಳಿದ ಭಾರತದ ರಾಜ್ಯಗಳಲ್ಲಿ ವಿವಾಹನೋಂದಣಿ  ಕಡ್ಡಾಯವಾಗಿಲ್ಲ ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ. 

ಬಾಲ್ಯ ವಿವಾಹಗಳನ್ನು ತಡೆಯಲು ಕರ್ನಾಟಕ ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕಾನೂನನ್ನು ಜಾರಿಗೊಳಿಸಿ ಅದರ ಅಡಿಯಲ್ಲಿ  ಕಾಯ್ದೆಗಳನ್ನು ರೂಪಿಸಿ ಬಾಲ್ಯ ವಿವಾಹ ಮಾಡುವುದನ್ನು ನಿಷೇಧಿಸಿದೆ, ಬಾಲ್ಯ ವಿವಾಹವನ್ನು ತಡೆಯಲು ಅದರ ವಿರುದ್ಧವಾಗಿ  ವಿಶ್ವಸಂಸ್ಥೆಯು ಕೂಡ ಹಲವಾರು ಕಾರ್ಯಕ್ರಮಗಳನ್ನು ವಿವಿಧ ದೇಶಗಳಲ್ಲಿ ಮಾಡುತ್ತ ಬಂದಿದೆ, ಸರ್ಕಾರಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಶಾಲೆಯ ಕಾಲೇಜುಗಳ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಇನ್ನಿತರ ಯಾವುದೇ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭಗಳಲ್ಲಿ ಅಕ್ಷರಸ್ತರಾದ ನಾವೆಲ್ಲರೂ ಬಾಲ್ಯ ವಿವಾಹದ ವಿರುದ್ಧ ಪ್ರಚಾರ ಮಾಡುತ್ತ ಹರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. 

ಈ ಬರಹವನ್ನು ಓದಿದ ತಮಗೆಲ್ಲ ಕೇಳಿಕೊಳ್ಳುವುದೇನೆಂದರೆ ನಿಮ್ಮ  ನೆರೆಹೊರೆಯಲ್ಲಿ ನಡೆಯುಬಹುದಾದ ಬಾಲ್ಯ ವಿವಾಹಗಳನ್ನು ತಪ್ಪಿಸಲು ಹತ್ತಿರದ ಪೊಲೀಸರಿಗೆ ಅಥವಾ ಮಕ್ಕಳ ಕಲ್ಯಾಣ ಇಲಾಖೆಗೆ ಒಂದು ದೂರವಾಣಿ ಕರೆಯ ಮೂಲಕ ದೂರು ನೀಡಿ ಹೆಣ್ಣು ಮಗುವಿನ ಭವಿಷ್ಯವನ್ನು ಕಾಪಾಡುವ ನೈತಿಕ ಕೆಲಸವನ್ನು  ಮಾಡಿ.

 ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ನಿಮ್ಮ ಕೊಡುಗೆಯನ್ನು ನೀಡಿ.

 ಇಂತಿ ನಿಮ್ಮ ಪ್ರೀತಿಯ ತಂಡ

One Life kannada

ಮತ್ತೊಮ್ಮೆ ಓದಿ

 ಇಂತಿ ನಿಮ್ಮ

WhatsApp Group Join Now
Telegram Group Join Now

1 thought on “ಕೇವಲ 13, 14ರ  ವಯಸ್ಸಿಗೆ ಲೈಂಗಿಕ ಕುತೂಹಲದಿಂದ ಗರ್ಭಿಣಿಯಾಗುತ್ತಿರುವ  ಈ ಬಾಲೆಯರು ಎಲ್ಲಿ? ಆಘಾತಕಾರಿ ಸಂಗತಿ ಬೆಳಕಿಗೆ!”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍