ನಮಸ್ತೆ ಬಂಧುಗಳೇ…ಅಯೋಧ್ಯೆಯ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನನಾದ ಬಳಿಕ ಮೊದಲ ರಾಮನವಮಿ ಹಬ್ಬದ ಸಂಭ್ರಮಕ್ಕೆ ಶ್ರೀರಾಮನ ತವರು ಸಾಕ್ಷಿಯಾಯ್ತು. ಚೈತ್ರಮಾಸದ ನವಮಿ ದಿನದಂದೇ ಸೂರ್ಯನ ಕಿರಣಗಳು ಬಾಲರಾಮನ ಹಣೆಗೆ ತಿಲಕವಿಟ್ಟ ವಿಸ್ಮಯ ಕಂಡು ವಿಶ್ವದ ಲಕ್ಷಾಂತರ ರಾಮಭಕ್ತರು ಪುಳಕಿತರಾದರು. ಈ ವೇಳೆ ಬಾಲರಾಮನಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
ಬಾಲರಾಮನ ವಿಗ್ರಹದ ಬಳಿ ಇರುವ ಪುಟ್ಟ ರಾಮನ ವಿಗ್ರಹಕ್ಕೂ ಉತ್ಕೃಷ್ಟ ಕ್ಷೀರಾಭಿಷೇಕ ನಡೆಯಿತು. ಬೆಳಗಿನ ಜಾವ 3 ಗಂಟೆಗೆ ಶುರುವಾದ ಪೂಜಾ ಕಾರ್ಯಕ್ರಮವನ್ನು ಭಕ್ತರು ಸರದಿ ಸಾಲಲ್ಲಿ ನಿಂತು ವೀಕ್ಷಿಸಿದರು.
ವಿಮಾನದಲ್ಲಿ ತಮ್ಮ ಶೂಸ್ ಬಿಚ್ಚಿಟ್ಟು ಸೂರ್ಯತಿಲಕ ವೀಕ್ಷಿಸಿದ ಪ್ರಧಾನಿ ಮೋದಿ
ಅಸ್ಸಾಂ ರ್ಯಾಲಿ ಮುಗಿಸಿ ವಿಮಾನದಲ್ಲಿ ದೆಹಲಿಗೆ ಹೊರಟ ಪ್ರಧಾನಿ ನರೇಂದ್ರ ಮೋದಿ ಪಾದರಕ್ಷೆಯನ್ನು ಬಿಟ್ಟು ಟ್ಯಾಬ್ ಮೂಲಕ ಸೂರ್ಯ ಪವಾಡ ವೀಕ್ಷಿಸಿದ್ದು ವಿಶೇಷವಾಗಿತ್ತು, ದೇಶಾದ್ಯಂತ ಶ್ರೀರಾಮನ ಸನ್ನಿಧಿಯಲ್ಲಿ ಸಂಭ್ರಮ, ಸಡಗರದಿಂದ ಶ್ರೀ ರಾಮನವಮಿ ಆಚರಿಸಲಾಯಿತು. ಜನ ಬೀದಿಬೀದಿಗಳಲ್ಲಿ ಮಜ್ಜಿಗೆ ಪಾನಕ ಹಂಚಿ ಸಂಭ್ರಮಿಸಿದರು.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಶ್ರೀ ರಾಮನಿಗೆ ಸೂರ್ಯ ರಶ್ಮಿ ತಲುಪಿದ್ದು!
ಹಲವಾರು ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿಕೊಂಡು ಈ ಚಮತ್ಕಾರವನ್ನು ಮಾಡಲಾಗಿದ್ದು, ರಾಮನ ವಿಗ್ರಹದ ಹಣೆಯ ಮೇಲೆ 5.8 ಸೆಂ.ಮೀ. ವ್ಯಾಸದ ಇರುವಂತೆ ಸೂರ್ಯನ ಬೆಳಕಿನ ಕಿರಣಗಳು ಸ್ಪರ್ಶಿಸಿದವು. ಮಧ್ಯಾಹ್ನ 12 ಗಂಟೆಗೆ ಸುಮಾರು 3 ನಿಮಿಷಗಳ ಕಾಲ ಶ್ರೀ ರಾಮನಿಗೆ ಸೂರ್ಯ ಕಿರಣಗಳ ಅಭಿಷೇಕ ನಡೆಯಿತು. ಇದಕ್ಕೆ ಹಲವು ಕನ್ನಡಿಗಳು ಮತ್ತು ಮಸೂರಗಳನ್ನು ಬಳಕೆ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ರೀತಿಯ ಕಾರ್ಯವಿಧಾನವು ಕೋನಾರ್ಕ್ ಸೂರ್ಯ ದೇವಾಲಯ ಸೇರಿ ಹಾಗೂ ಕೆಲವು ಜೈನ ದೇವಾಲಯಗಳಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಈ ಎಲ್ಲಾ ದೇವಾಲಯಗಳಿಗಿಂತ ವಿಭಿನ್ನವಾಗಿ ಶ್ರೀ ರಾಮಮಂದಿರದಲ್ಲಿ ವಿನ್ಯಾಸಗೊಳಿಸಲಾಗಿದೆ.
ಸೂರ್ಯನ ಅತಿಯಾದ ತಾಪವನ್ನು ತಡೆಯಲು ಫಿಲ್ಟರ್ ಬಳಕೆ ಮಾಡಲಾಗಿದೆ ಸೂರ್ಯ ಕಿರಣಗಳು ಕೇಂದ್ರೀಕರಣಗೊಂಡು ಅತಿಯಾದ ತಾಪಮಾನದಿಂದ ಶ್ರೀ ರಾಮನ ವಿಗ್ರಹಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಲು ಸೂಕ್ತವಾದ ಫಿಲ್ಟರ್‌ಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಕಂಪನಿಯಿಂದ ನೆರವು
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟೋಫಿಸಿಕ್ಸ್ ತಂಡವು ಚಂದ್ರ ಮತ್ತು ಸೌರ ಕ್ಯಾಲೆಂಡರ್ ನಡುವಿನ ಅಸಮಾನತೆಯನ್ನು ಸಮನ್ವಯಗೊಳಿಸಿ ಪಂಚಾಂಗದ ಪ್ರಕಾರ ಶ್ರೀ ರಾಮನವಮಿಯಂದು ಸೂರ್ಯನ ಕಿರಣ ಬೀಳುವಂತೆ ವ್ಯವಸ್ಥೆ ಮಾಡಿದೆ. ಮಂದಿರದ 3ನೇ ಮಹಡಿಯಿಂದ ಗರ್ಭಗುಡಿಗೆ ಸೂರ್ಯ ಕಿರಣಗಳು ತಲುಪಲು ಸಿಬಿಆರ್‌ಐಗೆ ಟೆಕ್ನಿಕಲ್ (ತಾಂತ್ರಿಕ ) ಬೆಂಬಲ ಒದಗಿಸಿದೆ. ಅಲ್ಲದೆ, ಬೆಂಗಳೂರು ಮೂಲದ ಕಂಪನಿಯಾದ ಆಪ್ಟಿಕಲ್ಸ್ ಅಂದರೆ ಮಸೂರಗಳ ಉತ್ಪಾದನಾ ಪರಿಣತಿಯು ಈ ಯೋಜನೆಯನ್ನು ಯಶಸ್ವಿ ಮಾಡಲು ಸಹಕಾರಿಯಾಗಿದೆ.
ಇದನ್ನು ಓದಿ: ಮೈಸೂರಿನ ರಾಜ ಯದುವೀರ್ ಒಡೆಯರ್ ಒಟ್ಟು ಆಸ್ತಿ ಎಷ್ಟು? ಪೂರ್ತಿ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.