ನಮಸ್ಕಾರ ಬಂಧುಗಳೇ, Solar Scheme : ರಾಜ್ಯ ಸರ್ಕಾರದಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲೆಂದು ಕೃಷಿ ಪಂಪ್‌ಸೆಟ್ ಗಳಿಗೆ ನಿರಂತರವಾಗಿ ಬೆಳಗಿನ ವೇಳೆಯಲ್ಲಿ ಹಾಗೂ ಸಮರ್ಪಕ ವಿದ್ಯುತ್ ಕಲ್ಪಿಸುವ ಮಾರ್ಗವಾಗಿ ಶೇ. 80ರಷ್ಟು ಸಬ್ಸಿಡಿ ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಲು ರೈತರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಈ ಯೋಜನೆಗೆ ಸಂಬ೦ಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಕೊನೆವರೆಗೂ ಓದಿ.
ಈ ಸೋಲಾರ್ ಯೋಜನೆ ಯಾವುದು SOLAR Scheme?
ಸರಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನಿರಂತರವಾಗಿ ಬೆಳಗಿನ ವೇಳೆಯಲ್ಲಿ ಕರೆಂಟ್ ಒದಗಿಸುವ ಉದ್ದೇಶದಿಂದ ಈ ಮಹತ್ವವಾದ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಹೆಸರು ‘ಕುಸುಮ್-ಬಿ ಯೋಜನೆ’ (Kusum B yojana) ಈ ಸ್ಕೀಮ್ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಒಟ್ಟಾಗಿ ಪ್ರಾಯೋಜಿತ ಯೋಜನೆಯಾಗಿದ್ದು ಅರ್ಹ ರೈತರಿಗೆ ಪ್ರಯೋಜನವನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಸಹ ಓದಿ: RAILWAY JOBS :ದಕ್ಷಿಣ ರೈಲ್ವೆ ಭಾಗದಲ್ಲಿ 2860 ಹುದ್ದೆಗಳ ಭರ್ತಿಗೆ ಅಧಿಸೂಚನೆ: ಆನ್‌ಲೈನ್ ಅರ್ಜಿ ಆಹ್ವಾನ ಡೈರೆಕ್ಟ್ Apply ಲಿಂಕ್ ಇಲ್ಲಿದೆ!
ಸೌರ ಘಟಕ ಅಳವಡಿಸಲು ತಗಲುವ ವೆಚ್ಚವೆಷ್ಟು Solar units ?
ಕೊರೆದ ಅಥವಾ ತೆರೆದ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು ರೈತರ ಮೇಲಿನ ಹಣಕಾಸು ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಜತೆಗೂಡಿ ಸೌರ ಘಟಕಕ್ಕೆ ತಗಲುವ ಒಟ್ಟಾರೆ ವೆಚ್ಚದಲ್ಲಿ ಶೇ. 80ರಷ್ಟು ಸಹಾಯಧನವನ್ನು ಅಂದರೆ ಸಬ್ಸಿಡಿಯನ್ನು ನೀಡಲಿವೆ. ಇದರಲ್ಲಿ ರಾಜ್ಯ ಸರ್ಕಾರವು ಶೇ. 50ರಷ್ಟು ಸಹಾಯಧನ ಸಬ್ಸಿಡಿ ಮತ್ತು ಕೇಂದ್ರ ಸರ್ಕಾರ ಶೇ. 30ರಷ್ಟು ಸಹಾಯಧನ ಸಬ್ಸಿಡಿ ಹಣ ನೀಡಲಿವೆ. ಅಂದರೆ ರೈತರು ಭರಿಸಬೇಕಾಗಿರುವುದು ಇನ್ನುಳಿದ ಕೇವಲ ಶೇ. 20ರಷ್ಟು ಹಣ ಮಾತ್ರ.
ಈ ರೈತರಿಗೆ ಮಾತ್ರ ಅವಕಾಶ ಸಿಗಲಿದೆ ! ಯಾವ್ಯಾವ ರೈತರಿಗೆ?
ಆದ್ಯತೆ 1 : ರಾಜ್ಯದಲ್ಲಿ ಹಲವು ರೈತರು ಅಕ್ರಮ ಪಂಪ್‌ಸೆಟ್ ಗಳನ್ನು ಅಳವಡಿಸಲು ಯೋಜನೆಯ ಅಡಿಯಲ್ಲಿ ₹10,000ಕ್ಕಿಂತ ಅಧಿಕ ಹಣವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಈ ರೈತರು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸಫಾರ್ಮೆರ್ ಘಟಕಗಳಿಂದ 500 ಮೀಟರ್’ಗಿಂತ ಅಂದರೆ ಅರ್ಧ ಕಿಲೋಮೀಟರ್ ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲು ಆದ್ಯತೆ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆದ್ಯತೆ 2 : ರೈತರು ತಮ್ಮ ಪಂಪ್‌ಸೆಟ್ ಗಳನ್ನು ಅಳವಡಿಸಲು “ಕುಸುಮ್ ಬಿ ಯೋಜನೆ” ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಈಗಾಗಲೇ ರೂ. 50 ವನ್ನು ಅರ್ಜಿ ಶುಲ್ಕಕ್ಕಾಗಿ ಪಾವತಿಸಿದ್ದು, ಇವರ ಕೊರೆದ/ತೆರೆದ ಬಾವಿಗಳು ಟ್ರಾನ್ಸ್ ಫಾರ್ಮರ್ ಕೇಂದ್ರದಿ೦ದ ಅರ್ಧ ಕಿಲೋ ಮೀಟರ್ ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಎರಡನೇ ಆದ್ಯತೆ ನೀಡಲಾಗುವುದು.
ಆದ್ಯತೆ 3 : ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ಶೇಕಡ 20% ರಷ್ಟು ಹಣವನ್ನು ಪಾವತಿಸಿದ್ದರೆ ಮತ್ತು ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್ ಫಾರ್ಮರ್ ಕೇಂದ್ರದಿ೦ದ 500 ಮೀಟರ್ ಗಿಂತ ಜಾಸ್ತಿ ದೂರದಲ್ಲಿದ್ದವರಿಗೆ 3 ನೇ ಆದ್ಯತೆ ನೀಡಲಾಗುವುದು.
ಇದನ್ನೂ ಸಹ ಓದಿ: ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ..! free sewing machine scheme
ಆದ್ಯತೆ 4 : ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಅಂದರೆ ಬೋರ್ವೆಲ್ ಗಳ ಟಿ ಸಿ ಪೆಟ್ಟಿಯಿಂದ (Transformer) 500 ಮೀಟರ್‌ಗಿಂತ ಅಂದರೆ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಒಳಗಿದ್ದು ಮತ್ತು ಹಾಗೂ ಶೇಕಡ 20 ರಷ್ಟು ಹಣ ಪಾವತಿಸುವವರಿಗೆ 4-ನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ಯೋಜನೆಯಲ್ಲಿ ನೋಂದಾಯಿಸುವ ರೈತರಿಗೆ ಅದರಲ್ಲಿ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ?
ನಿಮ್ಮ ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಗೆ ನೇರವಾಗಿ ಅರ್ಜಿ ಸಲ್ಲಿಸುವುದಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳಬಹುದು ಅಥವಾ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು, ಈ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ