ನಮಸ್ತೆ ಬಂಧುಗಳೇ… ನೀವೇನಾದ್ರೂ ಹೊಸ ರೇಷನ್ ಕಾರ್ಡ್ ಗೆ ಈಗಾಗಲೇ ಅರ್ಜಿ ಹಾಕಿದ್ದೀರಾ, ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ತಯಾರಾಗಿದ್ದರೆ ಅದರ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು, ಎಂಬುದನ್ನು ತಿಳಿಯಲು ಕೆಳಗಡೆ ನೀಡಿರುವ ಸಂಪೂರ್ಣ ಲೇಖನವನ್ನು ಓದಿ. ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಉಚಿತ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಬಿಪಿಎಲ್ (BPL) ರೇಷನ್ ಕಾರ್ಡಗೆ ಬಹಳ ಮಹತ್ವ ಹೆಚ್ಚಾಗಿದೆ. ಹಾಗಾಗಿ ಜನರು ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
ಜನರು ತಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಿದ ಮೇಲೆ ತಮಗೆ ರೇಷನ್ ಕಾರ್ಡ್ ತಯಾರಾಗಿರುವ ಬಗ್ಗೆ ಅದರ ಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ, ಅದರ ಭಾಗವಾಗಿ ಈ ಲೇಖನದಲ್ಲಿ ಹೇಗೆ ಚೆಕ್ ಮಾಡಬೇಕೆಂದು ನಾವು ಮಾಹಿತಿ ನೀಡಿದ್ದೇವೆ, ಕೆಳಗಡೆ ಹೊಸ ರೇಷನ್ ಕಾರ್ಡ್ ಸ್ಥಿತಿಯನ್ನು ಯಾವ ರೀತಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನವನ್ನು ಈ ರೀತಿಯಾಗಿ ತಿಳಿಸಿಕೊಡಲಾಗಿದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ.!ನಿಮ್ಮ ಮೊಬೈಲ್ ನಲ್ಲೇ ನೀವೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೊಸ ರೇಷನ್ ಕಾರ್ಡ್ ಪಡೆಯುವ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ,Ration Card Status:
Step 01: ಮೊದಲು ನೀವು ಸರ್ಕಾರದ ಅಧಿಕೃತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಅಂದರೆ ಜಾಲತಾಣಕ್ಕೆ ಭೇಟಿ ನೀಡಬೇಕು, ಹಾಗಾಗಿ ಈ ಕೆಳಗೆ ಇರುವ ಲಿಂಕ್ ಕ್ಲಿಕ್ ಮಾಡಿ: https://ahara.kar.nic.in/lpg/
Step 02: ನಂತರ ಈ ಮೇಲೆ ಇರುವ ರೀತಿ ಒಂದು ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಗಳನ್ನು ಮೂರು ವಿಭಾಗಗಳೊಂದಿಗೆ ಸಂಯೋಗ ಗೊಳಿಸಲಾಗಿರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಖಾತರಿಪಡಿಸಿಕೊಂಡ ಮೇಲೆ ಅದರ ಮೇಲ್ಕಂಡ ನೀಲಿ ಬಣ್ಣದ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ.
Step 03: ಈ ಮೇಲ್ಕಂಡ ಪುಟದಲ್ಲಿ ನೀವು ನಿಮ್ಮ ಜಿಲ್ಲೆಯು ಒಳಗೊಂಡಿರುವ ವಿಭಾಗವನ್ನು ಆಯ್ಕೆ ಮಾಡಿದ ನಂತರ ಈ ಕೆಳಕಂಡ ಹೊಸ ಪುಟ ತೆರೆದುಕೊಳ್ಳುತ್ತದೆ, ಇದರಲ್ಲಿ ನೀವು ನಿಮ್ಮ “ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲಾದ ಅರ್ಜಿಯ ಸ್ಥಿತಿ” ಅಂತ ಒಂದು ಆಯ್ಕೆಯು ಕಾಣಸಿಗುತ್ತದೆ. ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
Step 04: ನಂತರದಲ್ಲಿ ನೀವೇನಾದರೂ ನಗರದಲ್ಲಿ ವಾಸ ಮಾಡುತ್ತಿದ್ದರೆ ಅರ್ಬನ್ (Urban) ಎಂಬ ಮೊದಲನೇ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರದಲ್ಲಿ ನೀವು ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದಾಗ ಅವರು ನೀಡಿರುವ ಚೀಟಿಯಲ್ಲಿ ಹಿಂಬರಹ ಸಂಖ್ಯೆಯನ್ನು ನೀಡಲಾಗಿರುತ್ತದೆ, ಅದೇ ಹಿಂಬರಹ ಸಂಖ್ಯೆಯನ್ನು ನಮೂದಿಸಿ. ನಮೂದಿಸಿದ ನಂತರ ಮೇಲೆ “GO” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ : Government Gift for simple Marriage : ಸರಳ ಮದುವೆಗೆ ಸರ್ಕಾರದ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ..
Step 05: ನೀವೇನಾದ್ರೂ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿದ್ದರೆ ರೂರಲ್ (Rural) ಎಂಬ ಆಯ್ಕೆಯನ್ನು ನೀವು ಆಯ್ಕೆ ಮಾಡಬೇಕು, ನಂತರದಲ್ಲಿ ನಿಮ್ಮ ಹಿಂಬರಹ ಸಂಖ್ಯೆಯನ್ನು ನಮೂದಿಸಿ ನಂತರ ನಿಮ್ಮ ಜಿಲ್ಲೆ ಮತ್ತು ತಾಲೂಕು ಹಾಗೂ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸೆಲೆಕ್ಟ್ ಮಾಡಿ. ನಂತರದಲ್ಲಿ “GO” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಹೊಸ ರೇಷನ್ ಕಾರ್ಡ್ ಅರ್ಜಿ ಸ್ಥಿತಿಯನ್ನು ಕ್ಷಣದಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.