ನಮಸ್ತೆ ಬಂಧುಗಳೇ… ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದ್ದೀರಾ ? ಹಾಗಾದರೆ ಈ ಸುದ್ದಿ ನೀವು ಓದಲೇಬೇಕು ! ರೇಷನ್ ಕಾರ್ಡ್ ಗಾಗಿ ಈಗಾಗಲೇ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಅರ್ಜಿ ಸಲ್ಲಿಸಿದವರಿಗೆ ಯಾವಾಗ ರೇಷನ್ ಕಾರ್ಡ್ ವಿತರಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹಲವಾರು ಸರ್ಕಾರದ ಯೋಜನೆಗಳಿಗಾಗಿ ಮತ್ತು ಸೌಲಭ್ಯಗಳಿಗೆ ರೇಷನ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಬಹುಮುಖ್ಯ ಪಾತ್ರ ವಹಿಸುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ವಾ? ಗ್ಯಾರಂಟಿ ಯೋಜನೆಗಳು ಬಂದ್? ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು. ಫಲಿತಾಂಶದ ನಂತರ ಬಿಗ್ ಶಾಕ್ !
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಅರ್ಜಿ ವಿಲೇವಾರಿ ಮಾಡಿ ರೇಷನ್ ಕಾರ್ಡ್ ವಿತರಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಹೀಗೆ ರೇಷನ್ ಕಾರ್ಡ್ ವಿತರಿಸಲು ವಿಳಂಬ ಮಾಡಲು ಬಹು ಮುಖ್ಯ ಕಾರಣ ಏನೆಂಬುದು ತಿಳಿದು ಬಂದಿದೆ, ಅದೇನೆಂದರೆ 2023ರ ನಂತರ ಜಾರಿಗೆ ಬಂದ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಗೃಹಲಕ್ಷ್ಮಿ ಯೋಜನೆಯು ರೇಷನ್ ಕಾರ್ಡ್ ಅವಲಂಬಿತವಾಗಿದೆ, ಅಂದರೆ ಪ್ರತ್ಯೇಕ ವಾಗಿ ರೇಶನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬದ ಮಹಿಳೆಯರ ಕಾರ್ಡಿಗೆ 2 ಸಾವಿರ ರೂಪಾಯಿಯನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆ ಮಾಡುತ್ತಿದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಇದನ್ನೂ ಓದಿ : ಇದು ಪೋಸ್ಟ್ ಆಫೀಸ್ ಬಂಪರ್ ಕೊಡುಗೆ ! ಕೇವಲ 299 ಕಟ್ಟಿ 10 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು! ಹೇಗೆ ತಿಳಿಯಲು ಸಂಪೂರ್ಣವಾಗಿ ಓದಿ!
ಹೌದು ಬಂಧುಗಳೇ, ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಗಳನ್ನು ಖಾತೆಗೆ ಜಮೆ ಮಾಡಲು ಹಲವಾರು ಯೋಜನೆಗಳ ಅನುದಾನಗಳನ್ನು ಕಡಿತ ಮಾಡಿದೆ. ಹೀಗೆ ಬಹುದೊಡ್ಡ ಯೋಜನೆ ಯಾದ ಗೃಹಲಕ್ಷ್ಮಿಗೆ ಬಜೆಟ್ ನ ಗರಿಷ್ಠ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿ ತಿಂಗಳು ಖರ್ಚು ಮಾಡುತ್ತಿರುವ ಸರ್ಕಾರವು ಅನುದಾನಕ್ಕೆ ಹಣಕಾಸು ಸಾಲದೆ ಸಂಕಷ್ಟದಲ್ಲಿ ಸಿಲುಕಿದೆ.
ಇದನ್ನೂ ಓದಿ : ಬರ ಪರಿಹಾರ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ! | ಬರ ಪರಿಹಾರ ಹಣ ಖಾತೆಗೆ ಬಂದಿದೀಯಾ ಇಲ್ವಾ ಚೆಕ್ ಮಾಡೋದು ಹೇಗೆ?
ಗೃಹಲಕ್ಷ್ಮಿ ಯೋಜನೆ ಅಡಿ ವಿತರಿಸುತ್ತಿರುವ ಹಣದ ಹೊರೆಯು ಮತ್ತಷ್ಟು ಹೆಚ್ಚಾಗದಿರಲಿ ಎಂಬ ಕಾರಣದಿಂದ ಸರ್ಕಾರವು ಬಡವರಿಗೆ ಅನ್ನ ಭಾಗ್ಯದ ಅಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವುದನ್ನು ಕೂಡ ತಪ್ಪಿಸಿದಂತಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಉಚಿತವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯ ಆದರೆ ಸುಮಾರು ಎರಡು ವರ್ಷಗಳಿಂದಲೂ ರೇಷನ್ ಕಾರ್ಡ್ ಗೆ ಹೊಸ ಅರ್ಜಿಗಳನ್ನು ಆಹ್ವಾನ ಮಾಡದೆ ಬಡವರಿಗೆ ಭರವಸೆಯಾಗಿದ್ದ ಅನ್ನ ಭಾಗ್ಯದ ಪ್ರಮುಖ ಉದ್ದೇಶಕ್ಕೆ ತರಲಾಗಿದೆ. ಈಗಾಗಲೇ ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳನ್ನು ರೇಷನ್ ಕಾರ್ಡ್ ಗಾಗಿ ಸಲ್ಲಿಸಲಾಗಿದೆ. ಅವುಗಳನ್ನು ವಿಲೇವಾರಿ ಮಾಡದೆ ಸರ್ಕಾರ ಬಡವರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಪರವಾಗಿ ಪ್ರಶ್ನೆ ಮಾಡಿದ ಜನರಿಗೆ ಸರ್ಕಾರವು ಈಗಾಗಲೇ ಸಲಿಕೆ ಆಗಿರುವ ಹಳೆಯ ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರವೇ ಹೊಸ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗುತ್ತದೆ ಎಂಬುದಾಗಿ ಆಹಾರ ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.