Property: ಕೇವಲ 7 ದಿನಗಳಲ್ಲೇ ನಿಮ್ಮ ಹೆಸರಿಗೆ ಜಮೀನು ವರ್ಗ ಮಾಡಿಸಬಹುದು.!

ನಮಸ್ತೆ ಬಂಧುಗಳೇ…Property ಜಮೀನುಗಳನ್ನು ಒಬ್ಬರ ಹೆಸರಿನಿಂದ ಮತ್ತೊಬ್ಬರ ಹೆಸರಿಗೆ ವರ್ಗ ಮಾಡುವುದು ಸ್ವಲ್ಪ ಸವಾಲಿನ ಕೆಲಸವೆಯಾಗಿದೆ ಏಕೆಂದರೆ ತಾಲೂಕು ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳನ್ನು ಅಲೆದಾಡುವುದು ಸಾಮಾನ್ಯವಾಗಿದೆ. ಈ ಹಿಂದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗಲು 30 ದಿನಗಳಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಈ ಅವಕಾಶವನ್ನು ತಕರಾರು ಅರ್ಜಿ ಸಲ್ಲಿಸುವವರು ಕೆಲವೊಮ್ಮೆ ಅನಿವಾರ್ಯ ಪಡಿಸಿಕೊಂಡರೆ ಇನ್ನು ಕೆಲವರು ಬೇಕೆಂದಲೇ  ತಂಟೆ ತಕರಾರು  ಮಾಡುತ್ತಿದ್ದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

 ಈ ಬೆಳವಣಿಗೆಗಳಿಂದ ಆಸ್ತಿ ಸಂಬಂಧಪಟ್ಟ ಮಾಲೀಕರಿಗೆ  ನಡೆಯುತ್ತಿದ್ದ ಸಮಸ್ಯೆ ತಪ್ಪಿಸಲು ಮತ್ತು ಸರ್ಕಾರ  ಖಜಾನೆಗೂ ಆದಾಯ ಹೆಚ್ಚಾಗುವಂತೆ ಮಾಡಿ  ಸರ್ಕಾರಿ ಇಲಾಖೆಗಳ ಕೆಲಸದ  ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ,  ಹಾಗೂ  30 ದಿನಗಳವರೆಗೆ ಕಚೇರಿಗಳಿಗೆ  ಅಲೆಯುತ್ತಿದ್ದ ರೈತನ ಕಷ್ಟ ಕಡಿಮೆ ಮಾಡುವ  ಉದ್ದೇಶದಿಂದ  ಕೇವಲ 7 ದಿನದಲ್ಲಿ ಮ್ಯೂಟೇಶನ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ  ರಿಜಿಸ್ಟರ್ (ನೋಂದಣಿ) ಆದ ಆಸ್ತಿಯು ರಿಜಿಸ್ಟರ್ ಆದ ದಿನದಿಂದ ಹೆಸರಿಗೆ ದಾಖಲೆ ಆಗುವ ಸಮಯವನ್ನು “ಮ್ಯುಟೇಶನ್ ಅವಧಿ” ಎಂದು ಕರೆಯುತ್ತಾರೆ. ಈವಿಚಾರವು ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುತ್ತದೆ, ಹಾಗಾಗಿ ಇದರ ಕುರಿತು  ಕೆಲವಾರು ಪ್ರಮುಖ  ಅಂಶಗಳನ್ನು ಈ  ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಆಸ್ತಿಯು  ಒಬ್ಬರಿಂದ ಒಬ್ಬರಿಗೆ ವರ್ಗಾವಣೆಯಾಗುವಾಗ ಯಾವೆಲ್ಲ ವಿಧಾನದ ಮೂಲಕ ಒಬ್ಬರ ಹೆಸರಿಂದ ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು  ಬಹು ಮುಖ್ಯ. ಕ್ರಯ, ದಾನ, ವಿಭಾಗ ಮತ್ತು ಪೌತಿ ಖಾತೆ ಈ ನಾಲ್ಕು 4 ವಿಧಾನದ ಮೂಲಕ ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯು ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿ : Post office scheme: ಹೆಣ್ಣು ಮಗಳ ಮದುವೆಗೆ ಸರ್ಕಾರ ನೀಡಲಿದೆ 70 ಲಕ್ಷ ರೂಪಾಯಿ..! ಪೋಸ್ಟ್ ಆಫೀಸ್ ಹೊಸ ಸ್ಕೀಮ್..!

property-can-get-land-in-your-name-in-just-7-days
property-can-get-land-in-your-name-in-just-7-days
1. ಕ್ರಯ ವಿಧಾನ:-

ಕ್ರಯ ಎಂದರೆ ಆಸ್ತಿ  ಒಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಎಂದರ್ಥ. ಮಾರಾಟವಾದ ವ್ಯಕ್ತಿಯಿಂದ  ಆಸ್ತಿಯನ್ನು ಕೊಂಡುಕೊಂಡ ವ್ಯಕ್ತಿಗೆ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ ಇದು ಹಿಂದೆ 30 ದಿನಗಳು ತಗಲುತ್ತಿತ್ತು. ಈಗ  ಕೇವಲ ಏಳು ದಿನಗಳಲ್ಲಿ ಈ ಪ್ರಕ್ರಿಯೆ  ಪೂರ್ತಿಗೊಳಿಸಿ ಎಂದು ಆದೇಶಿಸಲಾಗಿದೆ.

WhatsApp Group Join Now
Telegram Group Join Now
2. ದಾನ ಮತ್ತು ಆಸ್ತಿ ವಿಭಾಗ ವಿಧಾನ:-

ಒಂದು ಕುಟುಂಬದೊಳಗೆ ಭಾಗ ಆದಾಗ  ಆಸ್ತಿ ವರ್ಗಾವಣೆ ಮಾಡುವ ವಿಧಾನವನ್ನು  ವಿಭಾಗ ವಿಧಾನ ಎಂದು  ಹೇಳಲಾಗುತ್ತದೆ. ಯಾಕೆಂದರೆ ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಮತ್ತೊಬ್ಬರ ಹೆಸರಿಗೆ ತಮ್ಮ ಸ್ವಯಾರ್ಜಿತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಕೂಡು ಕುಟುಂಬದಲ್ಲಿ ಭಾಗ ಆದಾಗ  ವಿಭಾಗ ಮಾಡಿಕೊಂಡಾಗ ಈ ರೀತಿ ತಂದೆ ಹೆಸರಿನಲ್ಲಿದ್ದ  ಅಥವಾ ಇತರರ  ಹೆಸರಿನಲ್ಲಿದ್ದ ಆಸ್ತಿಯು,  ಕೋರಿಕೊಂಡವರ ಹೆಸರಿಗೂ ವರ್ಗಾವಣೆ ಆಗುತ್ತದೆ. ಇದಕ್ಕೂ ಕೂಡ ಈ ಹಿಂದೆ 30 ದಿನಗಳು ತಗಲುತ್ತಿತ್ತು. ಈಗ ಇದನ್ನು 7 ಏಳು ದಿನಗಳಲ್ಲಿ ಮ್ಯೂಟೇಷನ್ ಮಾಡಲು ಸರ್ಕಾರವು ಸೂಚಿಸಲಾಗಿದೆ.

ಇದನ್ನೂ ಓದಿ :  LIC: ನಿಮ್ಮಮಗಳ ಹೆಸರಲ್ಲಿ ಕೇವಲ ರೂ1,800 ಹೂಡಿಕೆ ಮಾಡಿ ಸಾಕು 7 ಲಕ್ಷ ಪಡೆಯಬಹುದು, LIC ಹೊಸ ಸ್ಕೀಮ್.!

3. ಪೌತಿ ಖಾತೆ:-

ಪೌತಿ ಖಾತೆಯು ಒಬ್ಬ ವ್ಯಕ್ತಿ ಸತ್ತ ನಂತರ ವರ್ಗವಾಗುವ ವಿಧಾನವಾಗಿದೆ, ಉದಾಹರಣೆಗೆ ತಂದೆಯ ಹೆಸರಿನಲ್ಲಿ ಆಸ್ತಿ ಇದ್ದು ಆಸ್ತಿ ವಿಭಾಗ ಆಗುವ ಮುನ್ನವೇ ತಂದೆ  ಮೃತ ಪಟ್ಟಿದರೆ ಪೌತಿ ಖಾತೆ ವಿಧಾನದ ಮೂಲಕ ಆಸ್ತಿಯನ್ನು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡಲಾಗುತ್ತದೆ. ಆಗ ಮೊದಲಿಗೆ ಕುಟುಂಬದಲ್ಲಿರುವ ಹಿರಿಯ ಮಗಅಥವಾ ಮದುವೆಯಾಗದ ಮಗಳ ಹೆಸರಿಗೆ ಆಸ್ತಿ ವರ್ಗಾವಣೆ ಆಗುತ್ತದೆ ಆತನ ನಂತರ ಆತನ  ಪತ್ನಿ ಅಥವಾ ಹಿರಿಯ ಮಗನ ಹೆಸರಿಗೆ ಆಸ್ತಿ ಹಕ್ಕು ವರ್ಗಾವಣೆ ಆಗಿ ನಂತರ ಎಲ್ಲರೂ ತಮ್ಮ ಪಾಲನ್ನು ಪಡೆದುಕೊಳ್ಳುತ್ತಾರೆ. ಇದಕ್ಕೂ ಕೂಡ ಈ ಹಿಂದೆ 30 ದಿನಗಳ ಕಾಲ ಹಿಡಿಯುತ್ತಿತ್ತು, ಈಗ ಇದನ್ನು 15ನೇ ದಿನದೊಳಗೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.

ಸರ್ಕಾರವು ನಿಯಮ ಬದಲಾವಣೆ  ಮಾಡಿರುವುದರಿಂದ ಆಗುವ ಪ್ರಯೋಜನಗಳೇನು? ಮತ್ತು ಸಮಸ್ಯೆಗಳೇನು?:-

* ಆಸ್ತಿ ಸಂಬಂಧಿಸಿದ ತಕರಾರು ಸಲ್ಲಿಸಲು ಸಮಯವಕಾಶ ಕಡಿಮೆ ಆಗುತ್ತದೆ, ಸಮಯ ಸಿಕ್ಕರು ಆ ಸಮಯದೊಳಗೆ ಎಲ್ಲಾ ದಾಖಲೆಗಳನ್ನು ಹೊಂದಿಸುವುದಕ್ಕೆ ಬಹಳ ಕಷ್ಟ.
* ಸಮಯದ ಅಭಾವ ಇರುವುದರಿಂದ  ಆಸ್ತಿ ಮಾರಾಟಗಳಲ್ಲಿ ಮೋ’ಸ, ವಂ’ಚ’ನೆ ಮಾಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ .
* ಈ ಎಲ್ಲಾ ಮೇಲ್ಕಂಡ ಕಾರಣಗಳಿಂದಾಗಿ ಕೋರ್ಟ್ ಗಳಲ್ಲಿ ಕೇಸ್ ಗಳು ಹೆಚ್ಚಾಗಬಹುದು,  ನ್ಯಾಯಾಂಗಕ್ಕೆ ಒತ್ತಡ ಹೆಚ್ಚಾಗಬಹುದು

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍