ನಮಸ್ತೆ ಬಂಧುಗಳೇ… ರೈತ ಈ ದೇಶದ ಬೆನ್ನೆಲುಬು ಆದರೆ ಇಂದಿನ ವಾಸ್ತವ ಸ್ಥಿತಿಯಲ್ಲಿ ದೇಶದ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ನಿಗದಿತ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಿದೆ,ಆದರೆ ರೈತನೊಬ್ಬನು ವೈಜ್ಞಾನಿಕ ಕ್ರಮದಲ್ಲಿ ಎಚ್ಚರಿಕೆಯಿಂದ ಬೆಳೆಗಳನ್ನು ಬೆಳೆದರೆ ಸಾಫ್ಟ್ವೇರ್ ಇಂಜಿನಿಯರ್ ಗಿಂತ ಹೆಚ್ಚಿನ ಆದಾಯವನ್ನು ತನ್ನ ಜಮೀನಿನಿಂದಲೇ ಕಾಣಬಹುದಾಗಿದೆ, ಹೀಗೆ ರೈತರಿಗೆ ಮಾದರಿಯಾಗಬಲ್ಲ ಹಲವಾರು ರೈತರು ನಮ್ಮ ರಾಜ್ಯದಲ್ಲಿದ್ದಾರೆ, ಇವರಲ್ಲಿ ರೈತ ಮಾದರಿಯಾಗಿರುವ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ವಲಯದಲ್ಲಿ ಅಪ್ಪಾಸಾಹೇಬ ಎಂಬ ರೈತರೊಬ್ಬರು ತಮ್ಮ 3 ಎಕರೆಯ ಜಮೀನಿನಲ್ಲಿ ವಿಶಿಷ್ಟ ಪ್ರಯೋಗ ಮಾಡಿ ವರ್ಷಕ್ಕೆ ₹12 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿನ ಮಾದರಿ ರೈತ ಎಂಬುದಾಗಿ ಗುರುತಿಸಿಕೊಂಡಿದ್ದಾರೆ.
6ನೇ ತರಗತಿವರೆಗೆ ಶಾಲೆಗೆ ಹೋಗಿರುವ ಅಪ್ಪಾಸಾಹೇಬ ಅವರು ಕಲ್ಲಂಗಡಿ, ಕಬ್ಬು, ಮೆಣಸಿನಕಾಯಿ ಹಾಗೂ ಹಲವಾ ವಿಧದ ಬೆಳೆ ಬೆಳೆಯುವ ಅವರ ವಿಭಿನ್ನ ಪ್ರಯೋಗ ಬರಗಾಲದಲ್ಲಿಯೂ ಅವರ ಕೈ ಹಿಡಿದಿದೆ.
ಈ ಸುದ್ದಿ ಓದಿ:- LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದಿಂದ ಜನ ಸಾಮಾನ್ಯರಿಗೆ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ.!
ರಾಜ್ಯ ಈಗಾಗಲೇ ನೀರಿಲ್ಲದೆ ತತ್ತರಿಸಿದೆ, ಭೀಕರ ಬರಗಾಲದ ಸಂದರ್ಭದಲ್ಲಿ ನೀರಿನ ಕೊರತೆಯ ನಡುವೆಯೂ ತಮ್ಮ 3 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ 30 ಟನ್ ಕಲ್ಲಂಗಡಿ ಬೆಳೆದು ಅದರ ಖರ್ಚು ತೆಗೆದು ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆದಿದ್ದಾರೆ. ರಾಜ್ಯವೇ ಬರದಲ್ಲಿ ತತ್ತರಿಸುತ್ತಿರುವ ಸಮಯದಲ್ಲಿ ಬರಕ್ಕೆ ಸೆಡ್ಡು ಹೊಡೆದು ತಮ್ಮ ಬಾವಿಯಿಂದ ಹನಿ ನೀರಾವರಿ ಪದ್ಧತಿ ಮೂಲಕ 3 ತಿಂಗಳಲ್ಲಿ ಕಲ್ಲಂಗಡಿ ಬೆಳೆದು ಕೃಷಿಯಲ್ಲಿನ ತಮ್ಮ ಸಾಧನೆ ತೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅಪ್ಪಾಸಾಹೇಬ 10 ಎಕರೆ ಜಮೀನು ಹೊಂದಿದ್ದರೂ ಬರದ ಹಿನ್ನೆಲೆಯಲ್ಲಿ ಕೊಳವೆ ಬಾವಿಯ ಹಾಗೂ ಬಾವಿ ಅಂತರ್ಜಲಮಟ್ಟ ತೀವ್ರ ಹಾಳಕ್ಕೆ ಕುಸಿದಿದೆ. ಹೀಗಾಗಿ ಅಪ್ಪಾಸಾಹೇಬ ಕೇವಲ ತಮ್ಮ 3 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯನ್ನಾಗಿ ಅವರು ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಇನ್ನುಳಿದ 7 ಎಕರೆ ಜಮೀನಿನ ಪ್ರದೇಶದಲ್ಲಿ ಮುಂಗಾರು ಮುನ್ನ ಜೋಳ, ಕಬ್ಬು, ಮೆಕ್ಕೆಜೋಳ, ಗೋಧಿ,ತರಕಾರಿ ಬೆಳೆದಿದ್ದಾರೆ. ಹಾಗಾಗಿ ತಮ್ಮ 3 ಎಕರೆ ಪ್ರದೇಶವನ್ನೇ ವಿಭಿನ್ನ ಬೆಳೆಗಳನ್ನು ಬೆಳೆಯಲು ಪ್ರಯೋಗ ಶಾಲೆ ಮಾರ್ಪಾಡು ಮಾಡಿಕೊಂಡಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಕಲ್ಲಂಗಡಿ ಸಸಿ ನಾಟಿ ಮಾಡಿ ಕಳೆ ಗಿಡಗಳು ಬಾರದಂತೆ 3 ಎಕರೆ ಹೊಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿಸಿ, ಬಾವಿಯ ನೀರನ್ನು ಹನಿ ನೀರಾವರಿ ಡ್ರಿಪ್ ಮೂಲಕ ಕೊಟ್ಟಿದ್ದು, 2 ಸಲ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಹೀಗೆ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ 35 ಸಾವಿರ ಖರ್ಚು ಮಾಡಿದ್ದಾರೆ. 1 ನೇ ಕೊಯ್ಲಿನಲ್ಲಿ 20 ಟನ್ ಗಿಂತ ಹೆಚ್ಚಿನ ಇಳುವರಿ ಬಂದಿದ್ದು, ಪ್ರತಿ ಟನ್ ಕಲ್ಲಂಗಡಿ ದರ ರೂ 14,500 ರಂತೆ ಮಾರಾಟ ಮಾಡಿದ್ದಾರೆ.
ಈ ಸುದ್ದಿ ಓದಿ:- Ration Card Status: ಹೊಸ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವ ಸರಳ ವಿಧಾನ! ಈಗಲೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ !
ಕಲ್ಲಂಗಡಿ ಹಣ್ಣು ಬೆಳೆಯುವುದಕ್ಕೂ ಮುಂಚೆ ಈ ಜಮೀನಿನಲ್ಲಿ ಕಬ್ಬು ಬೆಳೆಯುವ ಉದ್ದೇಶದಿಂದ ಕಬ್ಬಿನ ಬಿತ್ತನೆ ನಾಟಿ ಮಾಡಿದ್ದರು. ಹಾಗೂ ಇದರಲ್ಲೂ ಎಕರೆಗೆ 70 ಟನ್ ನಷ್ಟು ಕಬ್ಬು ಬೆಳೆದು, ಪ್ರತಿ ಟನ್‌ಗೆ ₹ 3 ಸಾವಿರ’ದಂತೆ ₹ 6.30 ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ. ಹೀಗೆ ತಾವು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಾಟ ಮಾಡಿದ ಬಳಿಕವೇ ಭೂಮಿಯನ್ನು ಉಳಿಮೆ ಮಾಡಿ, ಹದ ಮಾಡಿ ನಂತರದಲ್ಲಿ ಕಲ್ಲಂಗಡಿ ಬೆಳೆದರು.
ಹೀಗೆ ಕಬ್ಬು ಆದಾಯದಿಂದ ₹6.90 ಲಕ್ಷ, ಕಲ್ಲಂಗಡಿ ಹಣ್ಣಿನಿಂದ ₹3 ಲಕ್ಷ, ಇತರೆ ತರಕಾರಿ ಮತ್ತು ಮೆಣಸಿನಕಾಯಿ ಯಿಂದ ₹2 ಲಕ್ಷಕ್ಕೂ ಹೆಚ್ಚು ಸೇರಿದಂತೆ ವರ್ಷಕ್ಕೆ ₹11.90 ಲಕ್ಷ ಲಾಭ ಪಡೆದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.