ನಮಸ್ತೆ ಬಂಧುಗಳೇ… ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು ತಾವು ಬಯಸಿದರು ಗರ್ಭಧರಿಸದೇ ಇರಲು ಮಹಿಳೆಯರಲ್ಲಿ ತಮ್ಮ ದೇಹದಲ್ಲಿನ ಗರ್ಭಕೋಶಕ್ಕೆ ಸಂಬಂಧಿಸಿದಂತೆ ಯಾವ ಯಾವೆಲ್ಲಾ ಸಮಸ್ಯೆಗಳಿರಬಹುದು ಮತ್ತು ಅವುಗಳನ್ನು ಸರಿಪಡಿಸಲು ಯಾವ ಪರೀಕ್ಷೆಗಳನ್ನು ಮಾಡಿಸಬೇಕೆಂಬುದನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಕೆಲವು ದಂಪತಿಗಳಿಗೆ ತುಂಬ ದಿನಗಳಾದರೂ ಮಕ್ಕಳಾಗದೇ ಇರಲು ಹಲವಾರು ಕಾರಣಗಳಿವೆ ಮುಖ್ಯವಾಗಿ ಗಂಡು ಹೆಣ್ಣು ಇಬ್ಬರಲ್ಲಿ ಯಾರಲ್ಲೊಬ್ಬರಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ನಾವು ಪತ್ತೆಹಚ್ಚಬೇಕು. ಹೀಗೆಮಕ್ಕಳಾಗದೇ ಇರಲು ಮಹಿಳೆಯರಲ್ಲಿ ಯಾವೆಲ್ಲಾ ಕಾರಣಗಳಿರಬಹುದು ಎನ್ನುವುದನ್ನು ಪ್ರಖ್ಯಾತ ಅಪೋಲೋ ಆಸ್ಪತ್ರೆಯ ಫರ್ಟಿಲಿಟಿಯ ಡಾ. ಚಿತ್ರಾ ರಾಮಮೂರ್ತಿ ಅವರು ತಿಳಿಸಿರುವ ಈ ಕೆಳಕಂಡ ಕಾರಣಗಳಿಂದ ತಿಳಿಯೋಣ.
ಸಾಮಾನ್ಯವಾಗಿ ಮಹಿಳೆಯರಿಗೆ ಮೂವತ್ತು ದಿನದ ಋತುಚಕ್ರದಲ್ಲಿ ಮುಟ್ಟಾಗುತ್ತಿದ್ದರೆ ಹದಿನೈದನೇ ದಿನಕ್ಕೆ ಮೊಟ್ಟೆ ಹೊರಬರುತ್ತದೆ.ಹಾಗಾಗಿ ಆ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಧರಿಸಲು ಸಾಧ್ಯವಾಗುತ್ತದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಮಹಿಳೆಯರು ಗರ್ಭಧರಿಸದೆ ಇರುವುದರಿಂದ ಗರ್ಭಿಣಿ ಆಗಲು ವೈದ್ಯಕೀಯವಾಗಿ ಮಾಡಿಸಬೇಕಾದ ಪರೀಕ್ಷೆಗಳನ್ನು ಈ ಕೆಳಕಂಡಂತೆ ವಿಸ್ಕೃತವಾಗಿ ತಿಳಿಸಲಾಗಿದೆ :
ಮುಖ್ಯ ಅಂಶಗಳು;
ಅಲ್ಟ್ರಾಸೌಂಡ್ ಪರೀಕ್ಷೆ
ಮಹಿಳೆಯರು ಗರ್ಭ ಧರಿಸಬೇಕೆಂದರೆ ಅವರ ಗರ್ಭಕೋಶ ಯಾವುದೇ ರೋಗ ಅಥವಾ ಸೋಂಕುಗಳಿಲ್ಲದೆ ಆರೋಗ್ಯವಾಗಿ ನಾರ್ಮಲ್ ಆಗಿರುವುದು ಬಹುಮುಖ್ಯ. ಪ್ರತಿ ತಿಂಗಳು ಸರಿಯಾಗಿ ಋತುಚಕ್ರ ಅಂದರೆ ಮುಟ್ಟಾಗುತ್ತಿದ್ದರೆ ನಿಮ್ಮ ಗರ್ಭಕೋಶ ಬಹುಪಾಲು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಅಂದರೆ ನಾರ್ಮಲ್ ಆಗಿದೆ ಎಂದರ್ಥ. ಇದನ್ನು ನೀವು ವೈದ್ಯಕೀಯವಾಗಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡುವ ಮೂಲಕ ಗರ್ಭಕೋಶದ ಗಾತ್ರವನ್ನು, ಗರ್ಭಕೋಶದಲ್ಲಿ ಗಡ್ಡೆಗಳಾಗಿವೆಯೇ ಅಥವಾ ಗರ್ಭಕೋಶದಲ್ಲಿ ಏನಾದರೂ ಸೋಂಕುಗಳಿವೆಯೇ ಎನ್ನುವುದನ್ನು ಸರಳವಾಗಿ ತಿಳಿದುಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಗರ್ಭಕೋಶ ನಾಳಗಳು ತೆರೆದಿದೆಯೇ, ಮುಚ್ಚಿದೆಯೇ ತಿಳಿಯಲು HSG ಪರೀಕ್ಷೆ
ಸಾಮಾನ್ಯವಾಗಿ ಗರ್ಭಧರಿಸದ ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತವೆ ಕೆಲವು ಸಣ್ಣ ಸಣ್ಣ ಸಮಸ್ಯೆಗಳಿಂದಲೂ ಗರ್ಭದರಿಸುವಿಕೆಗೆ ಸಮಸ್ಯೆಯಾಗುತ್ತದೆ ಅವುಗಳಲ್ಲಿ ಗರ್ಭಕೋಶದ ಬಳಿ ಇರುವ ಎರಡು ನಾಳಗಳು ಇರುತ್ತವೆ ಇವು ತಮ್ಮ ಕೆಲಸಗಳನ್ನು ಕಾಲಕಾಲಕ್ಕೆ ನಿರ್ವಹಿಸುತ್ತಾ ಇರುತ್ತವೆ . ಹಾಗಾಗಿ ಈ ಎರಡು ನಾಳಗಳು ಮಿಲನ ಕ್ರಿಯೆ ನಡೆಯುವಾಗ ಅಂದರೆ ಗರ್ಭ ಧರಿಸಲು ಹೆಚ್ಚಿಸಿದಾಗ ಸರಿಯಾಗಿರಬೇಕು ಆಗ ಮಾತ್ರ ಅಂಡಾಣು ಹಾಗೂ ವೀರ್ಯಾಣು ಸಂಯೋಗವಾಗುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆಯ ಮುನ್ನ ಈ ನಾಳಗಳು ತೆರೆದಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಮುಟ್ಟಾದ ಹತ್ತು ದಿನಕ್ಕೆ HSG ಪರೀಕ್ಷೆ ಎಕ್ಸ್‌ರೇ ಅಥವಾ ಸ್ಕ್ಯಾನಿಂಗ್ ಟೆಸ್ಟ್ ಮೂಲಕ ತಿಳಿಯಲಾಗುತ್ತದೆ.
ಅಂಡಾಶಯ ಸರಿಯಾಗಿದೆಯೇ ತಿಳಿಯಲು ರಕ್ತಪರೀಕ್ಷೆ
ಮಕ್ಕಳನ್ನು ಪಡೆಯಲು ಬಯಸುವ ಮಹಿಳೆಯ ಅಂಡಾಶಯದ ಕಾರ್ಯ ಸರಿಯಾಗಿದೆಯೇ ಮತ್ತು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತವೆ ಎನ್ನುವುದನ್ನು ತಿಳಿಯಲು ಮುಟ್ಟಾದ 3 ನೇ ದಿನಕ್ಕೆ ಕೆಲವು ರಕ್ತಪರೀಕ್ಷೆಯನ್ನು ಮಾಡಲಾಗುತ್ತದೆ. ಅವುಗಳಲ್ಲಿ FSH, LH,ಇಸ್ಟ್ರೋಜನ್ , ಪ್ರೊಜೆಸ್ಟಾನ್ ಪರೀಕ್ಷೆಯನ್ನು ಮಾಡಬಹುದಾಗಿದೆ. ಹೀಗೆ ಪರೀಕ್ಷೆ ನಡೆಸಿದ ನಂತರ ಅಂಡಾಶಯದ ಸಮಸ್ಯೆ ಕಂಡು ಬಂದರೆ ಅವುಗಳನ್ನು ಮಾತ್ರೆಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಒಣ ಕೆಮ್ಮಿಗೆ ಇಲ್ಲಿದೆ ಸೂಪರ್ ಮನೆಮದ್ದು ರಾಮಬಾಣ! home remedies for dry cough! homely medicine
ಅಂಡಾಶಯದಲ್ಲಿ ಮೊಟ್ಟೆ ಉತ್ಪತ್ತಿ ತಿಳಿಯಲು ಸ್ಕ್ಯಾನಿಂಗ್
ದೀರ್ಘ ಕಾಲದ ನಂತರವೂ ಸರಿಯಾಗಿ ಗರ್ಭ ಧರಿಸದೆ ಇರುವ ಮಹಿಳೆಯರು ತಮ್ಮ ಅಂಡಾಶಯದಲ್ಲಿ ಮೊಟ್ಟೆ ಸರಿಯಾಗಿ ಉತ್ಪತ್ತಿ ಆಗುತ್ತಿವೆಯ ಇಲ್ಲವೋ ಎನ್ನುವುದನ್ನು ಸ್ವತಃ ತಾವೇ ತಿಳಿಯಲು ಹತ್ತಿರದ ಮೆಡಿಕಲ್ ಸೆಂಟರ್ ಗಳಲ್ಲಿ “ಓವಲ್ಯೂಶನ್-ಕಿಟ್” ದೊರೆಯುತ್ತದೆ, ಅವುಗಳನ್ನು ಬಳಸಿ ತಿಳಿದುಕೊಳ್ಳಬಹುದಾಗಿದೆ. ಇಲ್ಲವಾದರೆ ಮುಟ್ಟಾದ 10 ನೆ ದಿನಕ್ಕೆ ವೈದ್ಯರು ಸ್ಕ್ಯಾನಿಂಗ್ ಮಾಡುತ್ತಾರೆ, ಈ ಮೂಲಕ ಮೂಲಕ ನೀವೂ ಯಾವಾಗ ಲೈಂಗಿಕ ಕ್ರಿಯೆ ನಡೆಸಬೇಕು ಮತ್ತು ಯಾವ ಸಮಯ ಉತ್ತಮ ಎಂಬುದನ್ನು ವೈದ್ಯರು ತಿಳಿಸುತ್ತಾರೆ.
ಟ್ಯೂಬ್ ಮುಚ್ಚಿದ್ದರೆ ಐವಿಎಫ್
ಬಂಧುಗಳೆ ಕೆಲವೊಮ್ಮೆ ಅಂಡಾಶಯದ ಮೊಟ್ಟೆ ಫೈಬ್ರಾಯ್ಡ್ ಟ್ಯೂಬ್‌ನಲ್ಲಿದ್ದರೂ ಮಹಿಳೆಯರು ಗರ್ಭಧರಿಸಲು ಸಾಧ್ಯವಿಲ್ಲ. ಕನಿಷ್ಠ ಒಂದು ನಾಳ ತೆರೆದಿದ್ದರೂ ನೀವು ಸಾಮಾನ್ಯವಾಗಿ ಗರ್ಭಧರಿಸಬಹುದು. ಇದು ಎಷ್ಟೋ ಮಹಿಳೆಯರಲ್ಲಿ ಸಂಭವಿಸುವ ಕ್ರಿಯೆ ಆಗಿದೆ, ಆದರೆ ಕೆಲವು ಮಹಿಳೆಯರಿಗೆ ಎರಡು ನಾಳಗಳು ಬ್ಲಾಕ್ ಆಗಿರುತ್ತವೆ, ಹೀಗೆ ಎರಡೂ ನಾಳಗಳು ಬ್ಲಾಕ್ ಆಗಿದ್ದರೆ ಐವಿಎಫ್ IVF ಮೊರೆ ಹೋಗಬೇಕಾಗುತ್ತದೆ. ಗರ್ಭಕೋಶದಲ್ಲಿ ತೊಂದರೆ ಇದ್ದರೆ ಹಿಸ್ಟ್ರೋಸ್ಕೋಪಿ ಟೆಸ್ಟ್ ಮಾಡುವ ಮೂಲಕ ಸಮಸ್ಯೆಯನ್ನು ವೈದ್ಯರು ಕಂಡುಹಿಡಿಯುತ್ತಾರೆ ಮತ್ತು ಈ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಇದನ್ನೂ ಓದಿ : ಗೃಹಲಕ್ಷ್ಮಿ ಡಿಸೆಂಬರ್ ನ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ! ಮೊಬೈಲ್ನಲ್ಲೇ ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು ! ಹೇಗೆಂದು ತಿಳಿಯಿರಿ
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ