ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,Mysore Bank ನ ಕ್ಯಾಶ್ ಕೌಂಟರ್ ಜನರಿಂದ ತುಂಬಿಕೊಂಡು ರಶ್ ಇತ್ತು. ಅಲ್ಲಿ ಒಬ್ಬರು ಸರಾಸರಿ 80 ವರ್ಷದ ಅಜ್ಜ ಒಬ್ಬರು ತಮ್ಮ ಕೈಯ್ಯಲ್ಲಿ ಬ್ಯಾಂಕ್ ಚೀಟಿಯೊಂದನ್ನು ಹಿಡಿದು ಸರತಿಯಲ್ಲಿ ಬಂದಿದ್ದರು . ನಂತರ ತಮ್ಮ ಅಕೌಂಟ್ ಚೆಕ್ ಮಾಡಲು ಬ್ಯಾಂಕ್ ಸಿಬ್ಬಂದಿಗೆ ವಿನಂತಿಸಿದರು,ಅದರಂತೆ ಬ್ಯಾಂಕ್ ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 100 ರೂ ಮಾತ್ರ ಇತ್ತೆಂದು ಬ್ಯಾಂಕ್ ಸಿಬ್ಬಂದಿ ಹೇಳಿದರು. ಕಳೆದ 4 ತಿಂಗಳಿಂದ 20 ಲಕ್ಷದ ಹೋಂ ಲೋನ್ ನ 19,500 ರೂ EMI ಕಟ್ಟಿರಲಿಲ್ಲ ಆ ಅಜ್ಜ. ಕ್ಯಾಶಿಯರ್ ಸಿಟ್ಟಿನಲ್ಲಿ ಇದ್ದಂತೆ. “ಏನಜ್ಜ, 4 ತಿಂಗಳಿಂದ ಮನೆಯ ಲೋನ್ ಕಂತು ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಯ್ತು ನಿಮಗೆ, ಎಂದು ಎಲ್ಲರಿಗೂ ಕೇಳುವಂತೆ ಕೂಗಿದ.. “ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಇನ್ನೊಮ್ಮೆ ಚೆಕ್ ಮಾಡಿ” ಅಜ್ಜ ನಿಧಾನವಾಗಿ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..
“ನೋಡಿ ಅಜ್ಜ ಆಗಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ, ಮಗ ನಿಮ್ಮ ಅಕೌಂಟಿಗೆ ಹಣ ಹಾಕಿಲ್ಲ, ಅಕೌಂಟ್ ಅಲ್ಲಿ ಯಾವ ಹಣವು ಇಲ್ಲ.. ….ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು. ಬ್ಯಾಂಕಿನಲ್ಲಿ ಇದ್ದವರೆಲ್ಲ ಆ ವೃದ್ಧರನ್ನು ಏನೋ ತಪ್ಪು ಮಾಡಿದವರಂತೆ ಕಂಡರು
ವೃದ್ಧರಿಗೂ ನಾಚಿಕೆಯಾಗಿದ್ದು, ಅಲ್ಲೇ , ಪಕ್ಕಕ್ಕೆ ಹೋಗಿ ತಮ್ಮ ಮೊಬೈಲ್ ನಿಂದ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ಸಂಪರ್ಕವಾಗಿರಲಿಲ್ಲ.. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ. “ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 9 ಒಟ್ಟು ಕಂತು ಬಾಕಿ ಇದೆ, ಈಗಾಗಲೇ 4 ಕಂತು ಕಟ್ಟಿಲ್ಲ, ಮುಂದಿನ ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಹೇಳುತ್ತಾ, ಆಗಲೇ ನಿಮ್ಮಂಥವರಿಗೆ ಬುದ್ದಿ ಬರುವುದು” ಎಂದ ಸಿಟ್ಟಲ್ಲಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅಜ್ಜನಿಗೆ ವಯಸ್ಸಾಗಿತ್ತು ಎಂಬುದರ ಅರಿವು ಬ್ಯಾಂಕ್ ಸಿಬ್ಬಂದಿಗೆ ಕಾಣಿಸಿದಂತೆ ಅನಿಸಲಿಲ್ಲ ಅಜ್ಜನ ಕಣ್ಣುಗಳು ಮಂಜಾಗಿದ್ದವು ಪದೇ ಪದೇ ಅದೇ ನಂಬರ್ ಗೆ ಕಾಲ್ ಮಾಡುತಿದ್ದರು ಅವರು .. ಇದನ್ನೆಲ್ಲಾ ನೋಡುತ್ತಿದ್ದ ಅದೇ ಮೈಸೂರು ಬ್ಯಾಂಕಿನ ಉದ್ಯೋಗಿ ಒಬ್ಬರು ಅಜ್ಜನ ಬಳಿ ಬಂದರು.. ಅಜ್ಜನನ್ನು ಪಕ್ಕಕ್ಕೆ ಕರೆಸಿ ಅಜ್ಜನಲ್ಲಿ ಅವರ ಮಗನ ನಂಬರ್ ಕೇಳಿ ತಮ್ಮ ಫೋನ್ ಅಲ್ಲಿ ರಿಂಗ್ ಮಾಡಿದಾಗ ಗೋಚರ ಎಂಬಂತೆ ಫೋನ್ ರಿಂಗ್ ಆಗಿತ್ತು
ಹಲೋ ಎಂದು ಹೆಂಗಸಿನ ಧ್ವನಿ ಅವರನ್ನು ಆಶ್ಚರ್ಯ ಗೊಳಿಸಿತ್ತು. ಅಜ್ಜ ಇದು ಮಗನ ನಂಬರ್ ಎಂದಿದ್ದರು. ಹಾಗಾಗಿ ವಿಶ್ವಾಸದಿಂದ ಹೆಂಗಸಿನೊಡನೆ ಮಾತು ಶುರು ಮಾಡಿ, ತಕ್ಷಣ ಅಜ್ಜನ ವಿಷಯ ತಿಳಿಸಿದರು.. ಆ ಹೆಂಗಸಿನ ಧ್ವನಿ ಬದಲಾಗಿತ್ತು ಆಕೆ ಅಳುತ್ತಿರುವಂತೆ ಕೇಳಿಸಿತು. ಒಂದು ಕ್ಷಣ ಸ್ತಬ್ದ ವಾಗಿದ್ದು. ಆನಂತರ ಆಕೆ ಮಾತು ಮುಂದುವರಿಸಿದಳು.. “ಹಾ ನಾನು ರೂಪ ,, ಅವರು ನಮ್ಮ ಮಾವ. ನನ್ನ ಗಂಡನ ತಂದೆ, ನನ್ನ ಗಂಡನ ಊರಿನಲ್ಲಿ ಅವರ ಮನೆ ಕಟ್ಟಿದ್ದು, ತಂದೆ ತಾಯಿಯರನ್ನು ನೋಡಿ ಕೊಂಡಿದ್ದು, ಮನೆ ಖರ್ಚು ವೆಚ್ಚಗಳನ್ನು ನೋಡಿ ಕೊಂಡಿದ್ದು, ಮನೆಯ ಹೋಂ ಲೋನ್ ಕಟ್ಟುತಿದ್ದದ್ದು ಎಲ್ಲವೂ ನನ್ನ ಗಂಡನೇ ಆಗಿದ್ದರು , ಆದರೆ ಕಳೆದ 2 ತಿಂಗಳ ಹಿಂದೆ ನನ್ನ ಗಂಡ ಬೈಕ್ ಆಕ್ಸಿಡೆಂಟ್ ಅಲ್ಲಿ ಮರಣ ಹೊಂದಿದರು” .. ಆಕೆಯ ಅಳು ಜೋರಾಗಿತ್ತು… ಜೀವನದ ಕೊನೆ ಉಸಿರು ಇರುವ ತನಕ ನನ್ನೊಂದಿಗೆ ಇರುತ್ತೇನೆ ಎಂದವರು ಅರ್ಧಕ್ಕೆ ನೆನಪುಗಳು ಹಾಗೂ ನೋವುಗಳನ್ನಷ್ಟೇ ಬಿಟ್ಟು ಹೋದರು” ಎನ್ನುವಾಗ ಆಕೆಯ ಅಳು ಮತ್ತಷ್ಟು ಜೋರಾಗಿತ್ತು. ನಮ್ಮ ಮಾವನವರಿಗೆ ನನ್ನ ಪತಿ ಒಬ್ಬನೇ ಮಗ, ಈಗ ಅವರಿಬ್ಬರನ್ನು ನೋಡಿಕೊಳ್ಳಲು ಇವಾಗ ಯಾರೂ ಇಲ್ಲ ಅವರಿಗೆ ತಮ್ಮ ಮಗ ಸತ್ತದ್ದು, ಮಗ ಇಲ್ಲ ಎನ್ನುವುದು ಯಾವುದೂ ಸರಿಯಾಗಿ ನೆನಪಿಲ್ಲ ಅವರಿಗೆ… ಪದೇ ಪದೇ ಮಗನ ನಂಬರ್ ಗೆ ನಿರಂತರವಾಗಿ ಫೋನ್ ಮಾಡುತಿದ್ದರು, ನನ್ನ ಗಂಡ ನನ್ನ ಎಲ್ಲಾ ವೈಯಕ್ತಿಕ ಚಿನ್ನ ಬ್ಯಾಂಕಲ್ಲಿಟ್ಟಿದ್ದರು,
ಆ ಮನೆಯ ಮೇಲೆ ತೆಗೆದುಕೊಂಡಿರುವ ಸಾಲವನ್ನು ತೀರಿಸಲು, ಕೇಳಿದರೆ ನಿನ್ನ ಚಿನ್ನ ನಾನೇ ಇದ್ದೀನಲ್ಲ ಎನ್ನುತಿದ್ದರು. ಈಗ ಅವರೂ ಇಲ್ಲ ಕಷ್ಟ ಕಾಲಕ್ಕೆ ಆಗುತ್ತಿದ್ದ ಚಿನ್ನವೂ ಇಲ್ಲ,ಕಳೆದ 12 ವರ್ಷಗಳಿಂದ ಒಂದೇ ಒಂದು ಲೋನ್ EMI ತಪ್ಪಿಸಿರಲಿಲ್ಲ ಈಗ ಅವರೇ ಇಲ್ಲ, ರಾಣಿ ತರ ಇದ್ದ ನನ್ನ ಜೀವನ ಈಗ ಹಾಳಾಗಿದೆ, ನಾನೀಗ ಇಬ್ಬರು ಮಕ್ಕಳೊಂದಿಗೆ ನನ್ನ ತವರು ಮನೆಯಲ್ಲಿದ್ದೇನೆ, ನನ್ನ ಮುಂದೆ ಮಕ್ಕಳ ಹಾಗೂ ನನ್ನ ಭವಿಷ್ಯವಿದೆ ಹಾಗಾಗಿ ಮಾವನವರಿಗೆ ನಾನೇನೂ ನೆರವು ಮಾಡಲಾಗುತ್ತಿಲ್ಲ ,ಪದೇ ಪದೇ ಮಗನಿಗೆ ಕಾಲ್ ಮಾಡಿ ಕೊಡು ಎನ್ನುವಾಗ ನನ್ನ ಕರುಳು ಕಿತ್ತು ಬರುತಿತ್ತು, ಅದಕ್ಕೇ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ” ಎನ್ನುವಾಗ ಆಕೆಯ ಅಳು ಮತ್ತಷ್ಟು ಹೆಚ್ಚಿತ್ತು . ಮತ್ತೆ ಮಾತಾಡುವ ಧೈರ್ಯ ಫೋನ್ ಮಾಡಿದ ಬ್ಯಾಂಕ್ ಉದ್ಯೋಗಿ ಅವರಿಗೂ ಇರಲಿಲ್ಲ. ಅಷ್ಟರಲ್ಲಿ ಫೋನ್ ಕಾಲ್ ಕಟ್ ಆಗಿತ್ತು.. ಆ ಬ್ಯಾಂಕ್ ಸಹೋದ್ಯೋಗಿಯ ಕಣ್ಣಲ್ಲೂ ನೀರಿತ್ತು.. ಹಾಗೆ ಫೋನ್ ಹಿಡಿದು ಮಾತನಾಡುತ್ತಾ ಹೊರಗೆ ಬಂದ ಅವರು ಒಳ ಹೋಗುತಿದ್ದಂತೆ ಬಾಗಿಲ ಬಳಿ ಕಾಯುತಿದ್ದ ಆ ಅಜ್ಜ ” ಮಗ ಏನಂದ? ” ಎಂದು ತೀವ್ರ ಕುತೂಹಲ ದಿಂದ..”ಬನ್ನಿ ಸರ್” ಎಂದು ಅವರನ್ನು ತಮ್ಮ ಕೌಂಟರ್ ನತ್ತ ಕರೆದೊಯ್ದರು ಇವರು.
ಮತ್ತೆ ಆ ಅಜ್ಜ ಬ್ಯಾಂಕ್ ನತ್ತ ಬಂದದ್ದು ನೋಡಿ ಆ ಬ್ಯಾಂಕ್ ಕ್ಯಾಶಿಯರ್ ಗೆ ಸಿಟ್ಟು ಉಕ್ಕುತಿತ್ತು… ಸಹೋದ್ಯೋಗಿ ಕೇಳಿದ ಅವನಲ್ಲಿ “ಅಜ್ಜನ ಲೋನ್ ಸ್ಟೇಟ್ಮೆಂಟ್ ಕೊಡಿ”ಎಂದು.. ಅಜ್ಜ ಮತ್ತೆ ಕೇಳಿದರು “ಸರ್ ಮಗ ಏನಂದ?”, ಈ ಬಾರಿ ಅಜ್ಜನ ಕಣ್ಣುಗಳಲ್ಲಿ ಆತಂಕವಿತ್ತು,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
Mysore Bank
ಸ್ಟೇಟ್ಮೆಂಟ್ ಮೇಲೆ ಕಣ್ಣಾಡಿಸಿದ ಬ್ಯಾಂಕ್ ಸಹೋದ್ಯೋಗಿ..20 ಲಕ್ಷದ 15 ವರ್ಷದ ಲೋನ್ ಅದಾಗಿತ್ತು. 7 ತಿಂಗಳಷ್ಟೇ ಬಾಕಿ ಇತ್ತು, 4 ತಿಂಗಳು ಲೋನ್ ಕಟ್ಟಿರಲಿಲ್ಲ.. ಕ್ಯಾಲ್ಕುಲೇಟರ್ ಹಿಡಿದು ಲೋನ್ ಲೆಕ್ಕ ಹಾಕಿದರು, ಬಡ್ಡಿ ಕೂಡಿ 180,000ಸಾವಿರ ಬಾಕಿ ಇತ್ತು. ನಗುತ್ತಾ ಅಜ್ಜನಲ್ಲಿ ಬ್ಯಾಂಕ್ ಸಿಬ್ಬಂದಿ ಹೇಳಿದರು.. “ಅಯ್ಯೋ ಅಜ್ಜ ನಿಮ್ಮ ಮಗ ಈಗ ತಾನೆ ಹಣ ಹಾಕಿದರು.. ನಿಮಗೆ ಇನ್ನೊಂದು ಶುಭ ಸುದ್ದಿ ಇದೆ ನಿಮ್ಮ ಬಾಕಿ ಇರುವ ಲೋನ್ನ ಕಂತಿನ ಹಣವನ್ನು ಒಟ್ಟಾಗಿ ಹಾಕಿದ್ದಾರೆ, ನಿಮ್ಮ ಲೋನ್ ಕ್ಲೋಸ್ ಆಗುತ್ತದೆ, ನೀವಿನ್ನು ಯಾವುದೇ ಸಮಸ್ಯೆ ಇಲ್ಲದೆ ನಿಶ್ಚಿಂತೆಯಲ್ಲಿ ಮನೆಗೆ ಹೋಗಬಹುದು, ಲೋನ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಬ್ಯಾಂಕ್ ನಿಮ್ಮ ಮನೆಗೆ ತಾನೇ ಕಳಿಸುತ್ತದೆ”. ಎಂದಾಗ ಅಜ್ಜ ನ ಆತಂಕದ ಮುಖದಲ್ಲಿ ಮಂಡ್ಸ್ಮಿತ ಬಿತ್ತು,ಕೈ ಮುಗಿದು ನಿಂತರು.ತುಂಬಾ ” ಸಹಾಯ ಆಯಿತು ಸರ್” ಎಂದಾಗ, ” ಸಹಾಯ ನನ್ನಿಂದ ಅಲ್ಲನಿಮ್ಮ ಮಗನಿಂದ ಆಯ್ತು ಎಂದು ಹೇಳಿ” ಎಂದು ನಕ್ಕರು ಆ ಬ್ಯಾಂಕ್ ಸಹೋದ್ಯೋಗಿ, ಅಜ್ಜ ನ ಮುಖದಲ್ಲಿ ಗೆಲುವಿನ ಆತ್ಮವಿಶ್ವಾಸವಿತ್ತು & ನಗುವಿತ್ತು
ಅಲ್ಲೇ ಇದ್ದ ಕ್ಯಾಶಿಯರ್ ಈ ಬಾರಿ,, ಭಾರಿ ಸಿಟ್ಟಲ್ಲಿದ್ದ ಹಾಗೂ ತನ್ನ ಸಹೋದ್ಯೋಗಿ ಮೇಲೆ.,. “ನಿಂಗೇನು ತಲೆ ಸರಿ ಇದೆಯೇ, ಆ ಅಜ್ಜನ ಲೋನ್ ಹಣ ಅವರ ಮಗ ಹಾಕೇ ಇಲ್ಲ” ಎಂದಾಗ ನಿಧಾನವಾಗಿ ಉತ್ತರಿಸಿದ ಬ್ಯಾಂಕ್ ಸಿಬ್ಬಂದಿ.. ಈ ಬಾರಿ ಪೂರ್ತಿ ಬ್ಯಾಂಕ್ ಸಹೋದ್ಯೋಗಿ ಗಳು ನೋಡುತ್ತಿದ್ದುದು ಒಳಗಿಂದ ಮ್ಯಾನೇಜರ್ ಕೂಡಾ ಕೇಳುತ್ತಿದ್ದುದು ಗೊತ್ತಿತ್ತು ಅವರಿಬ್ಬರಿಗೂ ಈ ಬಾರಿ ಬ್ಯಾಂಕ್ ಕ್ಯಾಶಿಯರ್ ಸ್ವರ ಜೋರಾಗಿತ್ತು…
ಬ್ಯಾಂಕ್ ಸಹೋದ್ಯೋಗಿ ತನ್ನ ಜೇಬಿನಲ್ಲಿದ್ದ 10,000 ಟೇಬಲ್ ಮೇಲೆ ಇಟ್ಟ ಮತ್ತು ಈತ ಹೀಗೆ ಹೇಳಿದ “ನನಗೆ ತಲೆ ಸರಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತೀರಿಹೋಗಿರುವ ಮಗ ಇದ್ದಾನೆಂದು ಭಾವಿಸಿ ,ಆ ತಂದೆ ಮಗನ ಮೇಲೆ ಇಟ್ಟಿರುವ ಅಚಲವಾದ ವಿಶ್ವಾಸವನ್ನು ಆ ಕ್ಷಣದಲ್ಲಿ ಉಳಿಸುವುದು, ಆ ತಂದೆಯ ಕಣ್ಣು ಗಳಲ್ಲಿ ಇದ್ದ ಆಸೆಯನ್ನು ಹಾಗೇ ಜೀವಂತ ಉಳಿಸುವುದಷ್ಟೇ ಆ ಸಮಯದಲ್ಲಿ ನನ್ನ ಎದುರಿಗಿದ್ದ ಸವಾಲಾಗಿತ್ತು, ಯಾಕೆಂದರೆ ಆತ ನನ್ನೆದುರು ಕೇವಲ ಒಬ್ಬ ತಂದೆಯಾಗಿದ್ದ, ಆದರೆ ಯಾರ ತಂದೆ ಎನ್ನುವುದು ಮುಖ್ಯವಾಗಿರಲಿಲ್ಲ, ಮಗನ ಮೇಲಿಟ್ಟಿದ್ದ ಆ ವಿಶ್ವಾಸ ಉಳಿಸಿದ್ದು ಅದಕ್ಕೇ ಪ್ರತಿಯಾಗಿ ಆ ತಂದೆಯ ಕಣ್ಣಲ್ಲಿದ್ದ ಆ ಸಂತೋಷದ ಎದುರು , ಲಕ್ಷ ರೂಪಾಯಿ ಬಹಳ ಬಹಳ ಚಿಕ್ಕದಾಗಿತ್ತು ನನಗೆ, ನಾನು ಮಾಡಿದ ಕೆಲಸದಿಂದ ನನಗೆ ಸಿಕ್ಕಿದ ನೆಮ್ಮದಿ ಬಹುಶಃ ಕೋಟಿ ರೂಪಾಯಿ ಸಿಕ್ಕಿದ್ದರೂ ಸಿಗಲು ಸಾಧ್ಯವೇ ಇಲ್ಲ ಎಂದೆನಿಸಿತು” ಎಂದವನೇ ಮಿಕ್ಕುಳಿದ 170,000 ದ ಚೆಕ್ ಕೊಡಲು, ಚೆಕ್ ಬುಕ್ ತರಲು ಬ್ಯಾಂಕ್ ಹೊರಗಡೆ ಹೋದ.. ಆತ ಚೆಕ್ ಪುಸ್ತಕ ತರುವಾಗ 10/12 ಜನರಿರುವ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದರು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು ಅಷ್ಟರಲ್ಲಿ , ಟೇಬಲ್ ಮೇಲೆ ಒಂದಷ್ಟು ಹಣ ತಂದು ಇಟ್ಟಿದ್ದರು ಬ್ಯಾಂಕ್ ಸಿಬ್ಬoದಿಗಳು.. ಲೆಕ್ಕ ಮಾಡಿದ 7 ಜನ ಸಿಬ್ಬಂದಿಗಳು ಒಟ್ಟು ಬರೋಬ್ಬರಿ 153,000ರೂ ಇಟ್ಟಿದ್ದರು, ಅಷ್ಟರಲ್ಲಿ ಆಗ ವೃದ್ಧರಿಗೆ ಬೈದಿದ್ದ ಕ್ಯಾಶಿಯರ್ ಕೂಡ 7000 ಕೊಟ್ಟಿದ್ದ, ಆಗ ಅಸಹಾಯಕ ವೃದ್ಧರಿಗೆ ಬೈದಿದ್ದ ಅವನ ಕಣ್ಣಲ್ಲಿ ತಪ್ಪಿನ ಅರಿವಾಗಿ ಪಶ್ಚತ್ತಾಪದ ಕಣ್ಣೀರಿತ್ತು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಒಟ್ಟು ತನ್ನ 7000 ಕೂಡಿ 160,000 ಸಂಗ್ರಹ ವಾಗಿತ್ತು, ಚೆಕ್ ತೆರೆದು ಉಳಿದ 10,000 ಬರೆಯಲು ಪೆನ್ನು ತೆಗೆದವನ ಹೆಗಲ ಮೇಲೆ ಕೈಯೊಂದು ಅಡ್ಡಲಾಗಿ ಬಂತು, ತಿರುಗಿ ನೋಡಿದ ಅಲ್ಲಿ ಬ್ಯಾಂಕ್ ಮ್ಯಾನೇಜರ್ ನಿಂತಿದ್ದರು, “ನನ್ನನ್ನು ಬಿಟ್ಟು ನೀವೇ ಎಲ್ಲಾ ಪುಣ್ಯವನ್ನುಹಂಚಿಕೊಂಡರೆ ಹೇಗೆ ? ನನಗೂ ಸ್ವಲ್ಪ ಪುಣ್ಯ ಇರಲಿ ಎಂದವರೇ 10,000 ಕೊಟ್ಟು ಚೆಕ್ ಪುಸ್ತಕ ಮಡಚಿ ಅವನ ಜೇಬಿನೊಳಗೆ ಇಟ್ಟು ಬಿಟ್ಟರು , ಒಟ್ಟಿನಲ್ಲಿ
ಆ ತಂದೆ ಮಗನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಬ್ಯಾಂಕಿನ ಸಿಬ್ಬಂದಿಗಳೇ ಒಗ್ಗಟ್ಟಾಗಿ ಎಲ್ಲರೂ ಉಳಿಸಿ ಬಿಟ್ಟಿದ್ದರು,
ಹೀಗೆ ಸಹಾಯ ಮಾಡುವ ಅವಕಾಶವನ್ನು ದೇವರು ಪ್ರತಿಯೊಬ್ಬನಿಗೂ ಕೆಲವೊಂದು ಸಂದರ್ಭದಲ್ಲಿ ಒದಗಿಸುತ್ತಾನೆ ಆ ಕ್ಷಣ ಉಪಯೋಗಿಸಿಕೊಂಡವನಿಗಷ್ಟೇ ಅದರ ನಿಜ ಸುಖದ ಅನುಭವ ಸಿಗುತ್ತದೆ. ಇಲ್ಲಿ ಆ ಬ್ಯಾಂಕ್ ಎಲ್ಲಾ ಸಿಬ್ಬಂದಿಗಳಿಗೂ ಆ ಕ್ಷಣ ಒಂದೇ ಬಾರಿಗೆ ಒದಗಿದೆ ಅಷ್ಟೇ,
ಈ ಬರವಣಿಗೆಯನ್ನು ಬ್ಯಾಂಕಿನ ಸಿಬ್ಬಂದಿಗಳು ಓದುತ್ತಿದ್ದರೆ ದಯವಿಟ್ಟು ನಿಮ್ಮ ಬ್ಯಾಂಕ್ ಗೆ ಬರುವ ಹಿರಿಯ ಜೀವಗಳಿಗೆ ನಿರಾಸೆ ಮಾಡಬೇಡಿ, ಏರು ಧ್ವನಿಯಲ್ಲಿ ಮಾತನಾಡಬೇಡಿ. ಯಾಕೆಂದರೆ, ನಿಮ್ಮಲ್ಲಿ ಬರುವ ಹಿರಿಯ ಜೀವಗಳಿಗೆ ನೀವು ಕೊಡುವ ಆ ಹಣದ ಅಗತ್ಯತೆ ಅದೆಷ್ಟು ಇರುತ್ತದೋ ಯಾರಿಗೆ ಗೊತ್ತು ಅಲ್ಲವೇ? ಅದಕ್ಕಿಂತ ನೀವು ಅವರಿಗೆ ತುಂಬುವ ಆತ್ಮವಿಶ್ವಾಸದ ಬಲ ಹೆಚ್ಚಿರಲಿ,
ಬ್ಯಾಂಕ್ ಬರುವ ಖಾತೆದಾರ ಆತ ಕೊಳೆಯಾದ ಅಂಗಿ, ಕೊಳೆಯಾದ ಪ್ಯಾಂಟ್, ಪೈಜಾಮ, ಲುಂಗಿ, ಹರಿದ ಚಪ್ಪಲಿ, ಚಪ್ಪಲಿ ಇಲ್ಲದ ಕಾಲು, ಹೇಗೇ ಬಂದಿರಲಿ ಪ್ರೀತಿಯಿಂದ ಸೌಜನ್ಯದಿಂದ ಮಾತಾಡಿ.. ಫಾರಂ ಫಿಲ್ ಮಾಡಲು ನೆರವಾಗಿ, ಯಾಕೆಂದರೆ ನೀವು ಪಡೆಯುತ್ತಿರುವ ಸಂಬಳದಲ್ಲಿ ನೀವು ಅನುಭವಿಸುತ್ತಿರುವ ಜೀವನ ಶೈಲಿಯಲ್ಲಿ ಆ ಖಾತೆದಾರರ ಪಾಲು ಕೂಡ ಸೇರಿರುತ್ತದೆ ಅದಕ್ಕಿಂತ ಹೆಚ್ಚಾಗಿ ಮಾನವೀಯತೆ ಅಂತ ಮಿಗಿಲಾದದ್ದು ಜೀವನದಲ್ಲಿ ಪ್ರಪಂಚದಲ್ಲಿ ಯಾವುದು ಇಲ್ಲ.
“ನೆನಪಿರಲಿ….”
ಯಾರಾದರೇನು ? ಮನುಷ್ಯತ್ವಕ್ಕೆ ಬೆಲೆ ಕೊಡಬೇಕಲ್ಲವೇ !
ಇದನ್ನೂ ಓದಿ : ಗಾರೆ ಕೆಲಸದವರು ಎಂದು ಲೇಬರ್ ಕಾರ್ಡ್ ಪಡೆದಿರುವವರಿಗೆ ಸರ್ಕಾರದಿಂದ ಶಾಕ್ ಹೊಸ ಸೂಚನೆ!
ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
1 thought on “ಕೊಳೆಅಂಗಿ,ಹರಿದ ಚಪ್ಪಲಿ ಇದ್ದರೇನು? ಮನುಷ್ಯತ್ವಕ್ಕೆ ಬೆಲೆ ಕೊಡಬೇಕಲ್ಲವೇ! ಮೈಸೂರು ಬ್ಯಾಂಕಿನಲ್ಲಿ ನಡೆದ ಕರುಣಾಜನಕ ಸತ್ಯ ಕಥೆ! ವೈರಲ್ ಕಥೆ ನೀವು ಓದಿ! Mysore Bank story 2003”