Fertility ಅತಿಯಾದ ಮೊಬೈಲ್ ಫೋನ್‌ನ ಬಳಕೆಯು ಪುರುಷರ ಫರ್ಟಿಲಿಟಿಯ ಅಂದರೆ ವೀರ್ಯಾಣುವಿನ ಫಲವತ್ತುತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವೀರ್ಯಾಣು ಸಂಖ್ಯೆಯನ್ನು ದಿನೇ ದಿನೇ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಒತ್ತಡವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಚಳಿಗಾಲದಲ್ಲಿ ನಿಮ್ಮ ಮಕ್ಕಳು ಕಾಯಿಲೆ ಬೀಳಬಾರದೆಂದರೆ ಈ ರೀತಿ ಮಾಡಲೇಬೇಕು.!
ಪುರುಷರೇ ಹೆಚ್ಚು ಮೊಬೈಲ್ ಫೋನ್ ಬಳಸಿದ್ರೆ ತಮ್ಮ ವೀರ್ಯಾಣುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಚ್ಚರ
ಸ್ಮಾರ್ಟ್ ಫೋನ್‌ನ ಅತಿಯಾದ ಬಳಕೆಯು ಚಿಕ್ಕವರಿಂದ ವಯಸ್ಸಾದವರಿಗೂ ಹಾನಿಕಾರಕವಾಗಿದೆ. ಪುಟ್ಟ ಮಕ್ಕಳಿಗೆ ಮೊಬೈಲ್‌ನ ಹೆಚ್ಚಾದ ವೀಕ್ಷಣೆ ಅಪಾಯಕಾರಿ. ಹಾಗಿರುವಾಗ ವಯಸ್ಕರ ಪುರುಷರ ವೀರ್ಯಾಣುವಿನ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಬಹಳ ಜನರಿಗೆ ತಿಳಿದಿಲ್ಲ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಸ್ಮಾರ್ಟ್ ಫೋನ್‌ನ ಅತಿಯಾದ ಬಳಕೆಯು ಪುರುಷತ್ವಕ್ಕೆ ಅಪಾಯಕಾರಿ ಎಂದು ಸಾಬೀತು ಮಾಡಿದೆ . ಇದರಿಂದಾಗಿ ಪುರುಷರ ವೀರ್ಯಾಣುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತದೆ. ಸಂಶೋಧನೆಯು ಇದನ್ನು ಗಂಭೀರವಾಗಿ ದೃಢಪಡಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಫರ್ಟಿಲಿಟಿ ಮೇಲೆ ಅಪಾಯ ( ಫಲವತ್ತತೆಯ ಕೊರತೆ) Fertility
ತಜ್ಞರ ಪ್ರಕಾರ ಫೋನ್ ಅನ್ನು ಅತಿಯಾಗಿ ಬಳಸುವುದು ಫಲವತ್ತತೆಗೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್‌ನಲ್ಲಿ ಸ್ಕ್ರಾಲ್ ಮಾಡುತ್ತಾ ಕಳೆಯುವುದನ್ನು ನೀವು ಕಾಣಬಹುದು .
ಇತ್ತೀಚಿನ ದಿನಗಳಲ್ಲಿ ಯುವಕರು ತನ್ನ ಫೋನ್‌ನಲ್ಲಿ ಸದಾಕಾಲ ಬ್ಯುಸಿಯಾಗಿರುತ್ತಾರೆ. ಆಫೀಸ್ ಕೆಲಸವಿರಲಿ ಅಥವಾ ರೀಲ್ ನೋಡುವುದಿರಲಿ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫೋನ್‌ಗಳಲ್ಲಿ ನಿರತರಾಗಿದ್ದಾರೆ ಮೊಬೈಲ್ ಫೋನ್ ಮೇಲೆ ಅವಲಂಬಿತರಾಗಿದ್ದಾರೆ. ಫೋನ್‌ನ ಅತಿಯಾದ ಬಳಕೆ ಪುರುಷರ ಫಲವತ್ತತೆಯ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು,ಯಾವೆಲ್ಲಾ ಪರೀಕ್ಷೆ ಮಾಡಿಸ್ಬೇಕು ಅಂತಾರೆ ಅಪೋಲೋ ಆಸ್ಪತ್ರೆ ಡಾಕ್ಟರ್..!
ಕಡಿಮೆಯಾಗುವ ವೀರ್ಯಾಣುಗಳ ಸಂಖ್ಯೆ
ಸ್ವಿಜರ್ಲ್ಯಾಂಡ್ ದೇಶದ ಪುರುಷರ ಒಳಗೊಂಡು ನಡೆಸಲಾದ ಅಧ್ಯಯನವು ಸ್ಮಾರ್ಟ್ ಫೋನ್‌ಗಳನ್ನು ಹೆಚ್ಚಾಗಿ ಬಳಸುವ ಪುರುಷರ ವೀರ್ಯ ಸಾಂದ್ರತೆ ಕಡಿಮೆಯಾಗುತ್ತಿದೆ ಮತ್ತು ಕಡಿಮೆ ವೀರ್ಯಾಣು ಸಂಖ್ಯೆಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ. ದಿನಕ್ಕೆ 20 ಕ್ಕಿಂತ ಹೆಚ್ಚು ಬಾರಿ ತಮ್ಮ ಫೋನ್‌ಗಳನ್ನು ಬಳಸುವ ಪುರುಷರಲ್ಲಿ ವೀರ್ಯಾಣು ಸಾಂದ್ರತೆಯಲ್ಲಿ 21% ಕಡಿತ ಮತ್ತು ಒಟ್ಟು ವೀರ್ಯಾಣು ಸಂಖ್ಯೆಯಲ್ಲಿ 22% ಕಡಿಮೆಯಾಗಿದೆ ಎಂದು ಇನ್ನೊಂದು ಅಧ್ಯಯನವು ತಿಳಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇವುಗಳ ಜೊತೆಗೆ ಕೆಲವು ಕೆಟ್ಟ ಚಟಗಳಿಂದ ವೀರ್ಯಾಣುಗಳು ಕಡಿಮೆಯಾಗುತ್ತವೆ.
ಅತಿಯಾದ ಧೂಮಪಾನ ಮತ್ತು ಮದ್ಯಪಾನವು ವೀರ್ಯದ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು.
ಮೊಬೈಲ್‌ನ ಅತಿಯಾದ ಬಳಕೆ ,
ಸ್ಥೂಲಕಾಯತೆ ಮತ್ತು ಅನಾರೋಗ್ಯಕರ ಆಹಾರ ತಿನ್ನುವುದು ಸಹ ವೀರ್ಯಾಣು ಸಂಖ್ಯೆ ಕಡಿಮೆ ಮಾಡುತ್ತದೆ.
ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅಸಮತೋಲನದಿಂದಾಗಿ ವೀರ್ಯದ ಸಂಖ್ಯೆಯೂ ಕಡಿಮೆಯಾಗುತ್ತದೆ.
ಒಣ ಕೆಮ್ಮಿಗೆ ಇಲ್ಲಿದೆ ಸೂಪರ್ ಮನೆಮದ್ದು ರಾಮಬಾಣ!
ವೀರ್ಯಕ್ಕೆ ಸಂಬಂಧಿಸಿದ ಆನುವಂಶಿಕ ಕಾಯಿಲೆಗಳು, ಖಾಸಗಿ ಭಾಗಗಳಲ್ಲಿ ಸೋಂಕು ಮತ್ತು ಲೈಂಗಿಕ ಕಾಯಿಲೆ ಗೊನೊರಿಯಾದಿಂದ ಕಡಿಮೆ ವೀರ್ಯದ ಸಂಖ್ಯೆಯು ಅಪಾಯ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ