2019ರ ಕ್ಕಿಂತ ಮುಂಚೆ ಸ್ಕೂಟರ್ ಬೈಕು ಕಾರು ತೆಗೆದುಕೊಂಡಿದ್ದರೆ ಈಗಲೇ ನಂಬರ್ ಪ್ಲೇಟ್ ಚೇಂಜ್ ಮಾಡಿಸಿ! ಇಲ್ಲದಿದ್ದರೆ ಫೆ.17ರಿಂದ 1000 ರೂ ದಂಡ! HSRP Number ಪೂರ್ತಿ ಓದಿ ಮಾಹಿತಿ ಪಡೆಯಿರಿ

ನಮಸ್ತೆ ಬಂಧುಗಳೇ…

WhatsApp Group Join Now
Telegram Group Join Now

2019 ರ ಕ್ಕಿಂತ ಮುಂಚೆ ಸ್ಕೂಟರ್ ಬೈಕು ಕಾರು ತೆಗೆದುಕೊಂಡಿದ್ದರೆ ಈಗಲೇ ನಂಬರ್ ಪ್ಲೇಟ್ ಚೇಂಜ್ ಮಾಡಿಸಿ! HSRP Number ಪ್ಲೇಟ್ ಹಾಕಿಸಬೇಕು ಇಲ್ಲದಿದ್ದಲ್ಲಿ, ಇದೇ ತಿಂಗಳ  ಫೆಬ್ರವರಿ 17ರ ನಂತರ  ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಪೊಲೀಸ್ ಇಲಾಖೆಯು ನಿರ್ಧಾರ  ಮಾಡಿದೆ.

ಸ್ಕೂಟರ್ ಕಾರು  ವಾಹನಗಳಿಗೆ HSRP ಹೊಸ ಹೈ ಸೆಕ್ಯುರಿಟಿ ನಂಬ‌ರ್ ಪ್ಲೇಟ್ ಹಾಕಿಸಿಲ್ಲವೆಂದರೆ ದಂಡ!

2019 ಏ.1ಕ್ಕಿಂತ ಮುಂಚೆ ಖರೀದಿ ಮಾಡಿರುವ ಬೈಕು ಕಾರುಗಳ ನೋಂದಣಿಯಾಗಿರುವ ಹಾಗೂ ಎಲ್ಲ ಮಾದರಿಯ ವಾಹನಗಳಿಗೆ ಸರ್ಕಾರವು ಹೊಸದಾಗಿ ನಿಗದಿ ಮಾಡಿರುವ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್‌ಗಳನ್ನು  ಅಂದರೆ  (ಎಚ್‌ಎಸ್‌ಆರ್‌ಪಿ) ಅಳವಡಿಸಲು ನಿಗದಿ ಪಡಿಸಲಾಗಿದ್ದ  ಕೊನೆಯ ದಿನಾಂಕದ ಗಡುವು ಸಮೀಪಿಸುತ್ತಿದ್ದರೂ  ನಂಬರ್ ಪ್ಲೇಟ್ ಬದಲಾವಣೆ ಮಾಡಲು  ಯಾವುದೇ ವಾಹನ ಮಾಲೀಕರು ಆಸಕ್ತಿ  ತೋರಿಸುತ್ತಿಲ್ಲ.  ಹಾಗೂ ಹಲವಾರು ಹಳ್ಳಿ  ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿಯು ಇಲ್ಲ,  ನಮ್ಮ ಈ ಲೇಖನದಲ್ಲಿ ಎಲ್ಲರಿಗೂ ತಿಳಿಯುವಂತೆ ತಿಳಿಸಲಾಗಿದೆ,  ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ, ದಂಡದಿಂದ ಪಾರಾಗಿ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

HSRP-Number-plate-kannada
HSRP-Number-plate-kannada

ಹೊಸ ನಂಬರ್ ಪ್ಲೇಟ್ ಹಾಕಿಸದ (ಎಚ್‌ಎಸ್‌ಆರ್‌ಪಿ)HSRP  ವಾಹನಗಳಿಗೆ ದಂಡದ ದರ ಎಷ್ಟು ?

1.ದ್ವಿಚಕ್ರ ವಾಹನ – 390 ರೂ. ನಿಂದ – 440ವರೆಗೆ 

2.ನಾಲ್ಕು ಚಕ್ರದ ವಾಹನಗಳಿಗೆ – 680 ರೂ.

WhatsApp Group Join Now
Telegram Group Join Now

ಹೀಗೆ ಸಾರಿಗೆ ಇಲಾಖೆಯು ಹೊಸದಾಗಿ  ಜಾರಿ ತಂದಿರುವ HSRP ನಂಬರ್ ಪ್ಲೇಟ್ ಹಾಕಿಸಲು ಜನರು ನಿರಾಸಕ್ತಿ ತೋರಿಸುತ್ತಿರುವುದರಿಂದ  ಫೆಬ್ರವರಿ 17ನೇ ತಾರೀಖಿನ ನಂತರ ಸಾರಿಗೆ ಇಲಾಖೆ ದಂಡಾಸ್ತ್ರ ಪ್ರಯೋಗಿಸಲು  ನಿರ್ಧರಿಸಿದೆ.

ಇದನ್ನೂ ಓದಿ : ಕೇವಲ 13, 14ರ  ವಯಸ್ಸಿಗೆ ಲೈಂಗಿಕ ಕುತೂಹಲದಿಂದ ಗರ್ಭಿಣಿಯಾಗುತ್ತಿರುವ  ಈ ಬಾಲೆಯರು ಎಲ್ಲಿ? ಆಘಾತಕಾರಿ ಸಂಗತಿ ಬೆಳಕಿಗೆ!

 ಈ ಮೊದಲು ಎಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ  ನವೆಂಬರ್ .17ರ ಗಡುವು ವಿಧಿಸಿತ್ತು.. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಸಲುವಾಗಿ 2024ರ  ಫೆಬ್ರವರಿ 17ರವರೆಗೆ ವಿಸ್ತರಣೆ ಮಾಡಲಾಗಿತ್ತು. ಫೆಬ್ರವರಿ ತಿಂಗಳು ಈಗಾಗಲೇ ಪ್ರಾರಂಭವಾಗಿದ್ದು ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು ಕೇವಲ 15 ದಿನಗಳು ಮಾತ್ರ ಉಳಿದಿವೆ ಹಾಗೂ ಆದರೆ, ಈವರೆಗೆ ಸೇರಿ ಕೇವಲ 10 ಲಕ್ಷ ವಾಹನಗಳಿಗಷ್ಟೇ ಹೊಸದಾದ ಎಚ್‌ಎಸ್‌ಆರ್‌ಪಿ ನಂಬರ್ (HSRP) ಪ್ಲೇಟ್ ಹಾಕಿಸಲಾಗಿದೆ.

ಏನಿದು ಹೊಸ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ?(HSRP) ಇದರ ಉಪಯೋಗವೇನು?

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಜಾರಿಗೆ ತಂದಿರುವ ಹೊಸದಾದ ವಾಹನಗಳ ನಂಬರ್ ಪ್ಲೇಟ್ ಅಲ್ಯೂಮಿನಿಯಂ ಲೋಹದಿಂದ ಮಾಡಲಾಗಿರುತ್ತದೆ, (HSRP) High Security Registration Number  ಬೈಕು ಕಾರು ಇನ್ನಿತರ ವಾಹನಗಳನ್ನು ಕದ್ದ ಕಳ್ಳರು ವಾಹನಗಳಲ  ನಂಬರ್  ಪ್ಲೇಟ್ ಗಳಲ್ಲಿ ವಾಹನದ ನಂಬರ್ ಗಳನ್ನು  ತಿರುಚಿ, ಅಳಿಸಿಹಾಕಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾರೆ, ಆದರೆ ಎಚ್‌ಎಸ್‌ಆರ್‌ಪಿ  ನಂಬರ್ ಪ್ಲೇಟ್ ತಿರುಚಿ ಹಾಕಲು ಸಾಧ್ಯವಿರುವುದಿಲ್ಲ, ಹಾಗೂ ಸುರಕ್ಷಿತವಾಗಿರುತ್ತದೆ,  ಹೀಗಾಗಿ ವಾಹನಗಳ ಕಳ್ಳತನವಾದಾಗ ರಸ್ತೆಗಳಲ್ಲಿ ಅಳವಡಿಸಿರುವ ಕ್ಯಾಮರಗಳ ಮೂಲಕ ಅತಿ ಸುಲಭವಾಗ ಎಚ್‌ಎಸ್‌ಆರ್‌ಪಿ  ನಂಬರ್ ಗಳು ಗೋಚರವಾಗುತ್ತವೆ. ಆದ್ದರಿಂದ ಇಲಾಖೆಯೂ ಈ ರೀತಿಯಾದ ಹೊಸ HSRP  ನಂಬರ್ ಪ್ಲೇಟ್ ಗಳನ್ನು ಪರಿಚಯ ಮಾಡಿದೆ.ಸಾರ್ವಜನಿಕರು ಈ ರೀತಿಯ ಹೊಸ ನಂಬರ್ ಪ್ಲೇಟ್ ಗಳನ್ನು ತಮ್ಮ ವಾಹನಗಳಿಗೆ  ಹಾಕಿಸಿ  ತಮ್ಮ ವಾಹನಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ : ಕೊಳೆಅಂಗಿ,ಹರಿದ ಚಪ್ಪಲಿ ಇದ್ದರೇನು? ಮನುಷ್ಯತ್ವಕ್ಕೆ ಬೆಲೆ ಕೊಡಬೇಕಲ್ಲವೇ! ಮೈಸೂರು ಬ್ಯಾಂಕಿನಲ್ಲಿ ನಡೆದ ಕರುಣಾಜನಕ  ಸತ್ಯ ಕಥೆ! ವೈರಲ್ ಕಥೆ ನೀವು ಓದಿ! Mysore Bank story 2003

 ಗಣರಾಜ್ಯ ಜಾರಿ ನಂತರ 1950ರಿಂದಲೂ ಇಲ್ಲಿವರೆಗೆ ಆಗಿರುವ  ವಾಹನ ನೋಂದಣಿ  ವರದಿ  ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೆಯ ವಾಹನಗಳಿವೆ, ಹಾಗೂ 2019 ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ  ಲೆಕ್ಕವನ್ನು ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ, ಎಂದು ಇಲಾಖೆಯು ತಿಳಿಸಿದೆ. ಅವಧಿ ವಿಸ್ತರಣೆ ಮಾಡಿದರೂ ವಾಹನ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ನಿಗದಿ ಮಾಡಿರುವ ಗಡುವು ಮುಗಿದ ಬಳಿಕ ವಾಹನಗಳನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ (HSRP) ನಂಬರ್ ಪ್ಲೇಟ್ ಇಲ್ಲದೇ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 2000 ರೂ. ವರೆಗೆ ದಂಡ ಹಾಕಲು ಕಾನೂನಿನಲ್ಲಿ ಅವಕಾಶ ಇದೆ  ಎಂದು ಸಿ.ಮಲ್ಲಿಕಾರ್ಜುನ (ಸಾರಿಗೆ ಇಲಾಖೆ ಅಪರ ಆಯುಕ್ತ)ಅಧಿಕಾರಿಗಳು ತಿಳಿಸಿದ್ದಾರೆ. 

ಸಾರ್ವಜನಿಕರು ಈ ಕೂಡಲೇ ಆರ್ ಟಿ ಓ ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಂಡು ತಮ್ಮ ಬೈಕು ಸ್ಕೂಟರ್ ಕಾರು ಇನ್ನಿತರ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ  (HSRP) ನಂಬರ್ ಪ್ಲೇಟ್  ಅಳವಡಿಸಿಕೊಳ್ಳಿ, ಕೊನೆಯ ದಿನಾಂಕದವರೆಗೆ ಕಾಯುವುದರ ಬದಲು ಈಗಲೇ RTO ಕಚೇರಿಗಳಿಗೆ ಭೇಟಿ ನೀಡಿ, ಫೆಬ್ರವರಿ 17ನೇ ತಾರೀಕಿನ ಒಳಗೆ ನಿಮ್ಮ ವಾಹನಗಳ ನಂಬರ್ ಪ್ಲೇಟ್  ಬದಲಾವಣೆ ಮಾಡಿಸಿ. ಹಾಗೂ ಕೊನೆಯ ದಿನಾಂಕಗಳಲ್ಲಿ RTO ಕಚೇರಿಗಳಲ್ಲಿ ಜನ ಜಂಗುಳಿಯು ಹೆಚ್ಚಾಗಿರುವುದರಿಂದ ಈಗಲೇ ಕಚೇರಿಗೆ ಭೇಟಿ ನೀಡಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಇದನ್ನೂ ಓದಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024

ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ :  ಟೀಮ್ One  life  ಕನ್ನಡ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍