ನಮಸ್ತೆ ಬಂಧುಗಳೇ..Pimple & Open pores issue : ಸೌಂದರ್ಯ, ಹೆಣ್ಣು ಮಕ್ಕಳಿಗೆ ದೇವರು ಸೌಂದರ್ಯದ ವರವನ್ನು ನೀಡುತ್ತಾ ಅದರ ಕಾಳಜಿ ಏನು ಮಾಡುವ ಗುಣವನ್ನು ಸಹ ಹೆಚ್ಚಾಗಿ ನೀಡಿರುತ್ತಾನೆ, ಎಲ್ಲರ ಮಧ್ಯದಲ್ಲೂ ಎದ್ದು ಕಾಣುವಂತಹ ಸೌಂದರ್ಯವನ್ನು ಹೊಂದಿರಬೇಕೆಂದು ಪ್ರತಿ ಹೆಣ್ಣು ಮಕ್ಕಳು ಬಯಸುತ್ತಾರೆ, ಹಾಗೆ ಈ ಬಯಕೆಗಳಲ್ಲಿ ಯಾವುದೇ ತಪ್ಪಿಲ್ಲ ಕೇವಲ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ನೈಸರ್ಗಿಕವಾಗಿ ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದು ಉತ್ತಮವಾದ ದಾರಿ, ಅತಿ ಪರಿಣಾಮಕಾರಿಯಾದಂತಹ ಇಂಗ್ಲಿಷ್ ಮೆಡಿಸನ್ ಬಳಸುವುದರ ಬದಲಿಗೆ ಮನೆಯಲ್ಲಿರುವ ನೈಸರ್ಗಿಕ ಮದ್ದುಗಳನ್ನು ಬಳಸಿ ಮುಖವನ್ನು ಚಂದ ಮಾಡಿಕೊಂಡರೆ ದೀರ್ಘಾವಧಿಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಮುಖದಲ್ಲಿರುವ ಮೊಡವೆಗಳಿಗೆ & ಕಪ್ಪು ಕಲೆಗಳಿಗೆ ಅಮೆರಿಕ ಯುನಿವರ್ಸಿಟಿ ದೃಢಪಡಿಸಿರುವ ಈ ಐದು ಮನೆಮದ್ದುಗಳನ್ನು ಬಳಸಿ 4 ವಾರಗಳಲ್ಲಿ ಫಲಿತಾಂಶ ನಿಮ್ಮದೇ! ಹೀಗೆ ಮನೆಯಲ್ಲೇ ಸಿಗಬಹುದಾದ ಮದ್ದುಗಳ ಬಗ್ಗೆ ಈ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ಇತರರಿಗೂ ಹಂಚಿಕೊಳ್ಳಿ ಶೇರ್ ಮಾಡಿ.
ಹಿಂದಿನ ವೇಗವಾದ ಆಧುನಿಕ ಕಾಲದಲ್ಲಿ ತುಂಬಾ ಜನಕ್ಕೆ ಮನೆಮದ್ದುಗಳನ್ನು ತಯಾರಿ ಮಾಡಿಕೊಂಡು ಬಳಸಿಕೊಳ್ಳಲು ಸಮಯದ ಅಭಾವ, ಮತ್ತೆ ಇನ್ನು ಕೆಲವರಿಗೆ ಮನೆಮದ್ದುಗಳು ಅಂದ್ರೆ ಅಸಡ್ಡೆ . ಸುಮ್ನೆ ಏಕೆ ಬ್ಯೂಟಿ ಪಾರ್ಲರ್ ಹೋಗಿ ದುಡ್ಡು ಹಾಳು ಮಾಡಿಕೊಳ್ಳುತ್ತೀರಾ?! ಮನೆಯಲ್ಲೇ ಮದ್ದುಗಳಿವೆ, ಬಳಸಿನೋಡಿ ಪರಿಣಾಮ ನಿಮಗೆ ತಿಳಿಯುತ್ತದೆ, ಹೀಗೆ ಮುಖದ ಕಾಂತಿ ತ್ವಚೆಯನ್ನು ಹೆಚ್ಚಿಸುವ ಉಪಯುಕ್ತವಾದ ಮನೆ ಮದ್ದುಗಳು ಬಳಸಿಕೊಂಡು ನಿಮ್ಮ ಮುಖದ ಅಂದ ಮತ್ತು ಕಾಂತಿಯನ್ನು ಹೆಚ್ಚಿಸಿಕೊಳ್ಳಿ . ನಮ್ಮ ಹೆಣ್ಣು ಮಕ್ಕಳ ಮುಖದ ಕಾಂತಿ ಮತ್ತು ಅಂದವನ್ನು ಹೆಚ್ಚಿಸಲು ಈ ಐದು ಮನೆ ಮದ್ದುಗಳೇ ರಾಮಬಾಣ, ಅವುಗಳನ್ನು ಈ ಕೆಳಕಂಡಂತೆ ತಿಳಿಯೋಣ ಬನ್ನಿ :ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮುಖದ ಸೌಂದರ್ಯ ಕಾಂತಿ ಮತ್ತು ಅಂದವನ್ನು ಹೆಚ್ಚಿಸಲು ಬಳಸಬಹುದಾದ ಮನೆಮದ್ದುಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ for Pimple & Open pores issue :
1. ಅರಿಶಿಣ ಮತ್ತು ಕಡಲೆ ಹಿಟ್ಟು
ಹೌದು , ಬಹಳ ಹಿಂದಿನ ಕಾಲದಿಂದಲೂ ನೀವೆಲ್ಲ ಕೇಳಿರಬಹುದು, ಹಾಗೆ ನೋಡಿರಬಹುದು ಎಲ್ಲಾ ಸೌಂದರ್ಯವರ್ಧಕ ವಸ್ತುಗಳಿಗೆ ಅರಿಶಿಣವನ್ನು ಕಡ್ಡಾಯವಾಗಿ ಬಳಸುತ್ತಾರೆ. ಅಂತಹ ಅಘಾತವಾದ ಪ್ರಯೋಜನ ಈ ಅರಿಶಿಣದಲ್ಲಿ ನೈಸರ್ಗಿಕವಾಗಿಯೇ ಇದೆ. ಅರಿಶಿಣದಿಂದ ಮುಖದ ಕಾಂತಿ ಹೆಚ್ಚುತ್ತದೆ, ಯಾವುದೇ ಬ್ಯಾಕ್ಟೀರಿಯಾ ಗಳು ಇನ್ನಿತರ ಸೂಕ್ಷ್ಮಾಣು ಜೀವಿಗಳು ಇದ್ದ ಸಂದರ್ಭದಲ್ಲಿ ಅರಿಶಿಣ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಅವುಗಳೆಲ್ಲವನ್ನು ತೊಡೆದು ಹಾಕುತ್ತದೆ, ಮತ್ತು ಮೊಡವೆ ಕಲೆಗಳು ನಿವಾರಣೆಯಾಗುತ್ತೆ. ಇನ್ನು ಕಡಲೆ ಹಿಟ್ಟು ,ಕೇವಲ ಖಾದ್ಯಗಳನ್ನು ತಯಾರಿಸುವುದರ ಜೊತೆಗೆ ಇದು ತ್ವಚೆಯ ಕೋಮಲತೆಯನ್ನು ಕೊಡುವುದರಲ್ಲಿ ತುಂಬಾ ಪ್ರಯೋಜನಕಾರಿ. ಇದು ಮುಖದ ಮೇಲಿರುವ ಕಲೆಯನ್ನು ಹಾಗೆ, ಮುಖದ ಜಿಡ್ಡನ್ನು ತೆಗೆಯುತ್ತದೆ, ಹಾಗೆ ಮುಖದ ಮೇಲಿರುವ ಸಣ್ಣ ಸಣ್ಣ ಕೂದಲುಗಳನ್ನು ಕೂಡ ಇದು ತೆಗೆದು ಹಾಕುತ್ತದೆ,.
ಒಂದು ಚಮಚ ಕಡಲೆ ಹಿಟ್ಟಿಗೆ ಅರ್ಧ ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದನ್ನು ಮುಖಕ್ಕೆ ನಿಧಾನವಾಗಿ ಎರಡು ಕೈಯಿಂದ ಬಳಸಿ ಮುಖಕ್ಕೆ ಮಸಾಜ್ ಮಾಡಬೇಕು. ಹಾಗೆ ನಿಧಾನವಾಗಿ ಮಸಾಜ್ ರೀತಿಯಲ್ಲಿ ಸ್ಕ್ರಬ್ ಮಾಡುತ್ತ,. 10 ನಿಮಿಷದವರೆಗೆ ಚೆನ್ನಾಗಿ ಮಸಾಜ್ ರೀತಿಯಲ್ಲಿ ಸ್ಕ್ರಬ್ ಮಾಡಬೇಕು,.ನಂತರ ಅದನ್ನು ಒಣಗಲು ಬಿಡಿ, ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ನಿಮ್ಮ ಮುಖ ತೊಳೆದ ನಂತರ ನೀವೇ ವ್ಯತ್ಯಾಸವನ್ನು ಕಾಣುವಿರಿ.ನೈಸರ್ಗಿಕವಾದದ್ದನ್ನೇ ಬಳಸಿ ಚರ್ಮವನ್ನು ಕಾಪಾಡಿಕೊಳ್ಳಿ
2. ಟೊಮೇಟೊ, ಸಕ್ಕರೆ ಮತ್ತು ಜೇನು
ಬಂಧುಗಳೇ, ಟೊಮೊಟೊ ಹಣ್ಣು ಕನ್ನಡದಲ್ಲಿನ ಗೂದೆ ಹಣ್ಣು, ಬಹಳ ಹಿಂದಿನ ಕಾಲದಲ್ಲಿ ಟೊಮೊಟೊ ಹಣ್ಣನ್ನು ಯಾರು ಕೂಡ ಬಳಸುತ್ತಿರಲಿಲ್ಲ, ಹಾಗೂ ಇದನ್ನು ಒಂದು ಬೆಳೆಯಾಗಿ ಕೂಡ ಪರಿಗಣಿಸಲಿಲ್ಲ, ಕೇವಲ ಮನೆ ಹಿಂದೆಯ ತಿಪ್ಪೆಗಳ ಮೇಲೆ ತನ್ನಿಂದ ತಾನೇ ಬೆಳೆಯುತ್ತಿದ್ದ ಟೊಮೊಟೊ ಹಣ್ಣನ್ನು, ಗಲೀಜು ಎಂಬಂತೆ ಎಲ್ಲರೂ ಭಾವಿಸಿ ಅಡುಗೆಗೆ ಬಳಸುತ್ತಿರಲಿಲ್ಲ, ಕೇವಲ ಕಾಡು ಗಿಡವಂತೆ ಟೊಮೆಟೊ ಹಣ್ಣಿನ ಗಿಡಗಳು ಎಲ್ಲಿಂದರಲ್ಲಿ ಬೆಳೆದು ಮಣ್ಣು ಸೇರುತ್ತಿದ್ದವು, ಟೊಮೇಟೊ ಹಣ್ಣನ್ನು ಅಡುಗೆಗೆ ಬಳಸುತ್ತಿರಲಿಲ್ಲ ದಿನ ಕಳೆದಂತೆ ಒಬ್ಬ ನಾಟಿ ವೈದ್ಯರು ಈ ಟೊಮೇಟೊ ಗೂದೆಹಣ್ಣನ್ನು ಪರೀಕ್ಷೆ ಮಾಡಿ ತಿನ್ನಲು ಯೋಗ್ಯ ಎಂದು ತಿಳಿಸಿದರು ಆನಂತರ ಟೊಮೋಟೊ ಹಣ್ಣನ್ನು ಅಡುಗೆಗೆ ಬಳಸಲು ಆರಂಭಿಸಿದರು ಇದು ಸಣ್ಣ ಇತಿಹಾಸ, ಟೊಮೊಟೊ ಹಣ್ಣು ಒಂದು ಉತ್ತಮ ಸೌಂದರ್ಯ ವರ್ಧಕ. ಇದರಿಂದ ಮುಖದ ಕಾಂತಿ ಹೊಳೆಯುವಂತೆ ಮಾಡುತ್ತದೆ ಮತ್ತು ಸನ್ ಟ್ಯಾನ್ ಅನ್ನು ಅಂದರೆ ಸೂರ್ಯನ ಬಿಸಿಲಿನಿಂದ ಚರ್ಮಕ್ಕೆ ಆದ ಹಾನಿಯನ್ನು ಕೂಡ ಇದು ಕಡಿಮೆ ಮಾಡುತ್ತದೆ. ಹಾಗೆ ನೈಸರ್ಗಿಕವಾದ ಜೇನು ಕೂಡ ನಮ್ಮ ಮುಖಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ, ಸೂರ್ಯನ ಬಿಸಿಲಿನಿಂದ ಚರ್ಮದ ತಂತುಗಳಿಗೆ ಆದ ಆನೆಯನ್ನು ಕಡಿಮೆ ಮಾಡುತ್ತದೆ ಮತ್ತೆ ಚರ್ಮವನ್ನು ಮಾಯಿಶ್ಚರೈಸ್ ಮಾಡುವ ಶಕ್ತಿ ಟೊಮೆಟೊದಲ್ಲಿದೆ ಮತ್ತು ಮೊಡವೆಗಳಿಂದ ರಕ್ಷಿಸುತ್ತೆ. ಇನ್ನು ಕಬ್ಬಿನಿಂದ ತಯಾರಿಸಿದ ಸಕ್ಕರೆ ಮುಖದ ಚರ್ಮಕ್ಕೆ ನಯವಾದ ಸ್ಪರ್ಶ ಕೊಡುತ್ತದೆ, ಮತ್ತು ಚರ್ಮದ ತೇವಾಂಶವನ್ನು ಕಾಪಾಡುತ್ತದೆ, ಓಪನ್ ಫೋರ್ಸ್ ಅಂದರೆ ತೆರೆದಿರುವ ಚರ್ಮದ ರಂದ್ರಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.
ಒಂದು ಟೊಮೋಟೊ ಪೀಸ್ ಮೇಲೆ, ಒಂದು ಸ್ವಲ್ಪ ಸಕ್ಕರೆ ಮತ್ತು ಒಂದು ಹನಿ ಜೇನು ತುಪ್ಪವನ್ನು ಹಾಕಿ , ಮುಖದ ಮೇಲೆ ಚೆನ್ನಾಗಿ ನಿಧಾನವಾಗಿ ಮಸಾಜ್ ಮಾಡಬೇಕು ಹಾಗೂ ಹಾಗೆ ಮಾಡುತ್ತಾ ನಿಧಾನವಾಗಿ ಸ್ಕ್ರಬ್ ಜೊತೆಗೆ ಮಸಾಜ್ ಮಾಡಬೇಕು. ಹೀಗೆ 10 ರಿಂದ15 ನಿಮಿಷಗಳವರೆಗೆ ಸ್ಕ್ರಬ್ ಮಾಡಿದ ಮೇಲೆ ಸಹಜ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ನಂತರ ನೀವೇ ಇದರ ಪರಿಣಾಮವನ್ನು ನೋಡುವಿರಿ,ಮುಖ ತುಂಬಾ ನಯವಾದ ಮತ್ತು ಮೃದುವಾದ ಚರ್ಮ ನಿಮ್ಮದಾಗಿರುತ್ತದೆ ಹಾಗೆ ಯಾವುದೇ ಕಲೆ ಇರದಂತೆ ಕ್ಲಿಯರ್ ಆಗಿರುತ್ತದೆ ಮತ್ತು ಕಾಂತಿಯುಕ್ತವಾಗಿರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
3. ಮೊಸರು, ಅರಿಶಿಣ ಮತ್ತು ಜೇನು
ನೈಸರ್ಗಿಕವಾದ ಹಾಲಿನಿಂದ ತಯಾರಿಸಬಹುದಾದ ಮೊಸರು ಹಲವಾರು ಪೌಷ್ಟಿಕಾಂಶಗಳಿಂದ ಕೂಡಿದ ಮನೆ ಮದ್ದು,ಆಹಾರದಲ್ಲಿ ಬಳಸುವ ಮೊಸರನ್ನು ನಮ್ಮ ಮುಖಕ್ಕೂ ವಾರಕ್ಕೆ ಮೂರು ಬಾರಿ ಬಳಸಿ ಒಳ್ಳೆಯ ತ್ವಚೆಯನ್ನು ಪಡೆಯಬಹುದು. ಅದು ಹೇಗೆ ಅಂತೀರಾ ಮೊಸರಲ್ಲಿರೋ ಆಂಟಿ ಏಜಿಂಗ್ ಅಂಶಗಳು ಅಂದರೆ ವಯಸ್ಸಾಗುವುದನ್ನು ಚರ್ಮದಲ್ಲಿ ತೋರ್ಪಡಿಸುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಹಲವಾರು ಅಂಶಗಳು ಮೊಸರಿನಲ್ಲಿದೆ ,ಮುಖದ ಸುಕ್ಕನ್ನು ಹೋಗಲಾಡಿಸುತ್ತದೆ ಮತ್ತು ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಎಂದರೆ ಕಪ್ಪು ವರ್ಣ ವೃತ್ತವನ್ನು ಕಡಿಮೆ ಮಾಡುತ್ತದೆ. ಮುಖದ ಮೇಲಿರುವ ಕಪ್ಪು ಕಲೆಗಳನ್ನುಕೂಡ ಇದು ಕಡಿಮೆ ಮಾಡುತ್ತೆ . ಹಾಗೆ ಮುಖವನ್ನು ಹೊಳೆಯುವ ಹಾಗೆ ಮಾಡುವುದರ ಜೊತೆಗೆ ಓಪನ್ ಪೋರ್ಸ್ ಅಂದರೆ ಚರ್ಮರ್ ಅಂದ್ರೆ ಗಳನ್ನು ಕೂಡ ಈ ಮೊಸರು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ.
ಈ ಮೊದಲೇ ಹೇಳಿದ ಹಾಗೆ, ಅರಿಶಿನ ಒಂದು ಉತ್ತಮ ಸೌಂದರ್ಯವರ್ಧಕ ಇದರಲ್ಲಿರೋ ಆಂಟಿಕ್ ಸತ್ವ ಅಂದರೆ ರೋಗನಿರೋಧಕ ಶಕ್ತಿ ಇರುವುದರಿಂದ ಅದು ಮುಖದಲ್ಲಿ ಹಾಗಿರುವ ಯಾವುದೇ ಗಾಯ ಗಳಿದ್ದರೆ ,ಅತಿ ಬೇಗ ಗುಣಪಡಿಸುತ್ತದೆ ಹಾಗೂ ಮುಖದ ಮೇಲಿರುವ ಕಪ್ಪು ಕಲೆಯನ್ನು ಮತ್ತು ಕಣ್ಣು ಸುತ್ತ ಇರುವ ಡಾರ್ಕ್ ಸರ್ಕಲ್ಸ್ ಅನ್ನು ಇದು ಕಡಿಮೆ ಮಾಡುತ್ತದೆ.ಮತ್ತು ನ್ಯಾಚುರಲ್ ಆಗಿ ಅಂದ್ರೆ, ನೈಸರ್ಗಿಕವಾಗಿ ಮುಖಕ್ಕೆ ಸಂಪೂರ್ಣಕಾಂತಿಯನ್ನು ಕೊಡುತ್ತದೆ. ಹೀಗೆ ಈ ಅರಿಶಿಣದಲ್ಲಿ ಹಲವಾರು ಗುಣಗಳಿವೆ.
ಇನ್ನು ಜೇನುತುಪ್ಪ ಕೂಡ ಮೊದಲೇ ಹೇಳಿದ ಹಾಗೆ, ಸೂರ್ಯನ ಕಿರಣಗಳಿಂದ ಸುಟ್ಟಂತೆ ಆಗಿರುವ ಚರ್ಮದ ವರ್ಣತಂತುಗಳನ್ನು ಮೊದಲಿನಂತೆ ನೈಸರ್ಗಿಕವಾಗಿ ಮಾಡಲು ಸಹಾಯ ಮಾಡುತ್ತದೆ ಅಂದ್ರೆ ಸನ್ ಟ್ಯಾನ್ ಕಡಿಮೆ ಮಾಡುತ್ತದೆ, ಮತ್ತು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ, ಮುಖಕ್ಕೆ ಕಾಂತಿಯನ್ನು ನೀಡುತ್ತದೆ ಜೊತೆಗೆ ಚರ್ಮಕ್ಕೆ ಮಾಯಿಶ್ಚರೈಸಿಂಗ್ ಕೊಡುತ್ತದೆ.
ಕೇವಲ ಎರಡೇ ಎರಡು ಚಮಚ ಮೊಸರಿಗೆ , ಅರ್ಧ ಚಮಚ ಜೇನುತುಪ್ಪವನ್ನು ಹಾಗೆ ಎರಡು ಸಣ್ಣ ತುಂಡು ಅರಿಶಿನವನ್ನು ಚೆನ್ನಾಗಿ ಮಿಕ್ಸ್ ಮಾಡಿ ,ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ಚೆನ್ನಾಗಿ ಮುಖವನ್ನು ತೊಳೆಯಬೇಕು.ಹೀಗೆ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದರೆ ಮುಖವು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ : Gold Rate ಚಿನ್ನದ ಬೆಲೆ : ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ 70000 ದಾಟಲಿದೆ! ಬರ ಪರಿಹಾರ 2,000 ಹಣ ಖಾತೆಗೆ ಜಮೆ ಯಾವಾಗ?
4. ಬಾಳೆಹಣ್ಣು, ನಿಂಬೆ ರಸ ಮತ್ತು ಜೇನುತುಪ್ಪ
ಬಾಳೆಹಣ್ಣು ಬಡವರು ಊಟ ತಿನ್ನಲು ಸಾಕಾಗುವಷ್ಟು ಹಣವಿಲ್ಲದಿದ್ದಾಗ ಬಳಸುವ ಬಾಳೆಹಣ್ಣು ಬಹಳ ಜೀವಸತ್ವಗಳನ್ನು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಹಣ್ಣು ,ಹೀಗೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದರ ಜೊತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಬಾಳೆಹಣ್ಣು ಸಹಾಯ ಮಾಡುತ್ತದೆ, ಬಾಳೆಹಣ್ಣಿನಲ್ಲಿ ಅತಿಯಾದ ಪೊಟಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ ಸಿಕ್ಸ್ ಆಂಟಿ ಆಕ್ಸಿಡೆಂಟ್ಸ್ ಹೀಗೆ ಹಲವಾರು ಆರೋಗ್ಯಕರವಾದಂತಹ ಅಂಶಗಳನ್ನು ಬಾಳೆಹಣ್ಣು ಒಳಗೊಂಡಿದೆ, ಇದು ಮುಖಕ್ಕೆ ತ್ವಚೆಗೆ ಕಾಂತಿಯನ್ನು ಕೊಡುತ್ತದೆ ಮತ್ತು ಮುಖದಲ್ಲಿ ಇರುವ ಕಲೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಮೊಡವೆಗಳಿಂದ ಚರ್ಮವನ್ನು ರಕ್ಷಿಸಿ ಕಾಪಾಡುತ್ತದೆ, ಹೀಗೆ ಬಳಸುವಾಗ ಅತಿಯಾಗಿ ಹಣ್ಣು ಆಗಿರುವ ಬಾಳೆಹಣ್ಣನ್ನು ಚರ್ಮಕ್ಕೆ ಬಳಸಬೇಕು ಇದರಿಂದ ಈ ಮದ್ದು ಪರಿಣಾಮಕಾರಿಯಾಗಿರುತ್ತದೆ.
ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ ನಿಂಬೆ ಹಣ್ಣಿನ ರಸವು ಅತಿಯಾದ ವಿಟಮಿನ್ ಸಿ ಅಂಶವನ್ನು ಒಳಗೊಂಡಿದೆ, ಹಾಗೂ ಮುಖಕ್ಕೆ ಕೂಡ ಬಳಸಲು ಒಂದು ಒಳ್ಳೆಯ ಗುಣವನ್ನು ಹೊಂದಿದೆ. ಚರ್ಮದಲ್ಲಿರುವ ಸತ್ತ ಕೋಶಗಳನ್ನು ಇದು ತೆಗೆದು ಹಾಕುತ್ತದೆ, ಅಂದರೆ ಡೆಡ್ ಸೆಲ್ಸ್ ಗಳನ್ನು ಅದನ್ನ ತೆಗೆದುಹಾಕುತ್ತದೆ. ಮತ್ತು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿ. ಮುಖದಲ್ಲಿರುವ ಜಿಡ್ಡಿನಂಶ ಎಣ್ಣೆ ಅಂಶ ಗಳನ್ನು ಸಂಪೂರ್ಣವಾಗಿ ಕೂಡ ತೆಗೆದುಹಾಕುತ್ತದೆ. ಮತ್ತು ಮುಖದಲ್ಲಿರುವ ಕಪ್ಪು ಬೇರುಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ.
ಚೆನ್ನಾಗಿ ಹಣ್ಣಾಗಿರುವ ಎರಡು ಬಾಳೆಹಣ್ಣಿಗೆ, ಅರ್ಧ ಚಮಚ ಜೇನು ಮತ್ತು ಅರ್ಧ ಚಮಚ ನಿಂಬೆರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು , ಆ ನಂತರ ಫೇಸ್ ಮಾಸ್ಕನ್ನು ಸ್ವತಹ ನಾವೇ ತಯಾರಿಸಿ ,ಮುಖದ ಮೇಲೆ ಹಚ್ಚಿ 12 ನಿಮಿಷಗಳವರೆಗೆ ಬಿಡಬೇಕು. ಅದು ಒಣಗಿದ ನಂತರ ಸಹಜ ತಣ್ಣೀರಿನಿಂದ ಚೆನ್ನಾಗಿ ಮುಖವನ್ನು ತೊಳೆಯಬೇಕು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
5. ಆಲೂಗೆಡ್ಡೆ ಅಥವಾ ಆಲೂಗಡ್ಡೆ ರಸ
ಆಲೂಗಡ್ಡೆ ಅಡುಗೆಗೆ ಬಳಸುವ ತರಕಾರಿಗಳಲ್ಲಿ ಆಲೂಗಡ್ಡೆಯ ಪಾತ್ರ ಅತಿ ಮುಖ್ಯವಾದದ್ದು, ಅದರಲ್ಲೂ ಉತ್ತರ ಭಾರತೀಯರಿಗೆಂತು ಆಲೂಗಡ್ಡೆ ಇಲ್ಲದ ಪಲ್ಯವೇ ಸೇರೋದಿಲ್ಲ, ಹೀಗೆ ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಸೌಂದರ್ಯ ವರ್ಧಕವಾಗಿ ಕೂಡ ಆಲೂಗಡ್ಡೆಯನ್ನು ನಾವು ಬಳಸಬಹುದು. ಆಲೂಗೆಡ್ಡೆಯಲ್ಲಿರುವ ಅಜೀಲೇಕ್ ಎನ್ನುವ ಆಸಿಡ್ ಮುಖಕ್ಕೆ ಅವಳಪ್ಪನ್ನು ಕೊಡುವುದರಲ್ಲಿ ಸಹಾಯ ಮಾಡುತ್ತದೆ ಅಂದರೆ ಮುಖಕ್ಕೆ ಕಾಂತಿಯನ್ನು ಕೊಡುತ್ತದೆ. ಮತ್ತು ಮುಖದ ಮೇಲಿರುವ ಕಂದು ಬಣ್ಣದ ಕರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಕಪ್ಪು ಕಲೆ ತೆಗೆದು ಹಾಕುತ್ತದೆ. ವಯಸ್ಸಾದಂತೆ ಕಾಣುವ ಕಂದುಗೆರೆಗಳನ್ನು ಕಡಿಮೆ ಮಾಡುತ್ತದೆ
ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು, ಅದನ್ನು ಪೀಸ್ ಮಾಡಿ .ನಂತರ ಮುಖದ ಮೇಲೆ ಚೆನ್ನಾಗಿ 10 ನಿಮಿಷಗಳವರೆಗೆ ವೃತ್ತಾಕಾರವಾಗಿ ಮಸಾಜ್ ಮಾಡುತ್ತಾ ಸ್ಕ್ರಬ್ ಮಾಡಿ. ಹೆಚ್ಚಾಗಿ ಕಣ್ಣಿನ ಸುತ್ತ ಇರುವ ಮತ್ತು ಬಾಯಿಯ ಸುತ್ತ ಸ್ಕ್ರಬ್ ಮಾಡಿ ಇದು ಕಪ್ಪು ಕಲೆ ತೆಗೆದು ಹಾಕುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ . ನಂತರ ಒಣಗಲು ಬಿಡಿ ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಅಥವಾ ಒಮ್ಮೆಯಾದರೂ ಹೀಗೆ ಮಾಡಿ ,ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ,
ಇದನ್ನೂ ಓದಿ : ಮೊಬೈಲ್ ನಿಂದ ಕನ್ನಡದಲ್ಲಿ ಟೈಪಿಂಗ್ ಮಾಡಿ ಮನೆಯಲ್ಲಿಯೇ ತಿಂಗಳಿಗೆ 35,000 ಸರಳವಾಗಿ ಸಂಪಾದಿಸಿ! Work From Home Job
ಹೀಗೆ ಈ ಮೇಲೆ ತಿಳಿಸಿದ ಐದು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು, ಯಾವುದೇ ಇಂಗ್ಲಿಷ್ ಮೆಡಿಸನ್ ಉಪಯೋಗಿಸದೆ ಕೇವಲ ಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದ ನಮ್ಮ ತ್ವಚೆಯನ್ನು ಹೊಳಪು ಮಾಡಿಕೊಳ್ಳಬಹುದು, ಹಾಗೂ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ದೀರ್ಘಾವಧಿಯಲ್ಲಿ ನಮ್ಮ ಚರ್ಮವು ಚೆನ್ನಾಗಿರುತ್ತದೆ. ಹೀಗೆ ತಿಳಿಸಿದ ಐದು ಮಾರ್ಗಗಳಲ್ಲಿ ಕನಿಷ್ಠ ಎರಡು ಮಾರ್ಗಗಳನ್ನು ಮೂರು ತಿಂಗಳಿನವರೆಗೆ ಅನುಸರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
Usefull tips😇