ನಮಸ್ತೆ ಬಂಧುಗಳೇ.. ಗೃಹಲಕ್ಷ್ಮಿಯ 9ನೆಯ ಕಂತು ಬಿಡುಗಡೆಯಾಗಿದ್ದು, ಅದು ಚುನಾವಣೆ ಇರುವ ಇಂದೇ ಮಹಿಳೆಯರ ಖಾತೆಗೆ ಒಟ್ಟು 4 ಸಾವಿರ ಜಮೆಯಾಗಿದೆ. GRUHALAKSHMI ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿದ ಜನಪ್ರಿಯ ಯೋಜನೆ ಗೃಹಲಕ್ಷ್ಮಿಯೋಜನೆಯು ಮಹಿಳೆಯರ ಖಾತೆಗೆ ನೇರವಾಗಿ 2000 ಹಣವನ್ನು ಪ್ರತಿ ತಿಂಗಳೂ ಜಮೆ ಮಾಡುವ ಕಾರ್ಯಕ್ರಮವಾಗಿದೆ. ರಾಜ್ಯದ ಮಹಿಳೆಯರು ಈಗಾಗಲೇ ತಮ್ಮ ರೇಷನ್ ಕಾರ್ಡ್ ಉಪಯೋಗಿಸಿಕೊಂಡು ಪ್ರತಿ ತಿಂಗಳು 2000 ಹಣವನ್ನು ಗ್ಯಾರಂಟಿ ಯೋಜನೆ ಅಡಿ ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ,
ಈಗಾಗಲೇ ಏಳು ಕಂತುಗಳನ್ನು ಪಡೆದುಕೊಂಡಿದ್ದ ಮಹಿಳೆಯರು ಈ ಸಲ ಒಟ್ಟಿಗೆ ಎರಡು ಕಂತುಗಳನ್ನು ಅಂದರೆ ನಾಲ್ಕು ಸಾವಿರ ರೂಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಂಡಿರುತ್ತಾರೆ.
ಈ ಸುದ್ದಿ ಓದಿ : ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ..! free sewing machine scheme
ಡಿಬಿಟಿ ಮುಖಾಂತರ ರಾಜ್ಯ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡಲಾಗುತ್ತಿದೆ, ಲೋಕಸಭಾ ಚುನಾವಣೆ ನಡೆಯುತ್ತಿರುವುದರ ಸಲುವಾಗಿ ಮಹಿಳೆಯರ ಖಾತೆಗೆ ಚುನಾವಣೆ ದಿನ, ಮತ್ತು ಚುನಾವಣೆಯ ಹಿಂದಿನ ಎರಡು ದಿನಗಳಲ್ಲಿ ಗೃಹ ಲಕ್ಷ್ಮಿಯ 2,000ಗಳನ್ನು ಮುಂಚಿತವಾಗಿಯೇ ಹಾಕಲಾಗಿದೆ ಎಂದು ತಿಳಿದುಬಂದಿದೆ, ಇದಕ್ಕಾಗಿ ಪರಿಶೀಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡಿಬಿಟಿ ಎಂಬ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಪರಿಶೀಲಿಸಿಕೊಳ್ಳಿ. ಇದೇ ರೀತಿ ಸರ್ಕಾರ ನೀಡುವ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಈಗಲೇ ಸೇರಿಕೊಳ್ಳಿ.
ಎಲ್ಲಾ ಜಿಲ್ಲೆಯ ಮಹಿಳೆಯರು ಪ್ಲೇ ಸ್ಟೋರ್ ನಲ್ಲಿ ಸಿಗುವ ಡಿಬಿಟಿ DBT ಎಂಬ ಅಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಗೃಹಲಕ್ಷ್ಮಿ ಯೋಜನೆಯ ಹಣವು ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು,
ಗೃಹಲಕ್ಷ್ಮಿ ಚೆಕ್ ಮಾಡುವುದು (GRUHALAKSHMI) ಹೇಗೆ ?
DBT ಎಂಬ ಮೊಬೈಲ್ ಆಪ್ ನ ಲಿಂಕ್ ಅನ್ನು ಈ ಕೆಳಕಂಡಂತೆ ನೀಡಲಾಗಿದೆ ಈ ಆಪ್ ಕರ್ನಾಟಕ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆಗಿದೆ, ಇದರಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ದಾಖಲಿಸಿರುವ ತಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಹಾಕಬೇಕು ನಂತರ ಅಪ್ಲಿಕೇಶನ್ ಗೆ ಲಾಗಿನ್ ಮಾಡಬೇಕು, ಹಾಗೂ ಅಲ್ಲಿ M PIN ಎಂದು ಕೇಳಿದಾಗ ನಿಮಗೆ ನೆನಪಿರುವ ಯಾವುದಾದರೂ ನಾಲ್ಕು ಅಂಕಿಯ ಸಂಖ್ಯೆಯನ್ನು ಹಾಕಿ ಲಾಗಿನ್ ಮಾಡಬೇಕು ನಂತರ ಫಲಾನುಭವಿಯನ್ನು ಆಯ್ಕೆ ಮಾಡಿ ಎಂಬ ಫಲಕ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ಆಯ್ಕೆ ಮಾಡಿ ನಂತರ M PIN ಎಂದು ನೀವು ಕೊಟ್ಟಿದ್ದ ನಾಲ್ಕು ಅಂಕಿಯ ಸಂಖ್ಯೆಯನ್ನು ಹಾಕಿ ನಂತರ ಲಾಗಿನ್ ಆಗಿ, ಬಲಭಾಗದಲ್ಲಿ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿಕೊಳ್ಳಿ,
LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದಿಂದ ಜನ ಸಾಮಾನ್ಯರಿಗೆ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ.!
https://play.google.com/store/apps/details?id=com.dbtkarnataka
ನಂತರ ಅಲ್ಲಿ ನಾಲ್ಕು ಆಯ್ಕೆಗಳು ಕಂಡುಬರುತ್ತವೆ ಅವು ಈ ಕೆಳಕಂಡಂತಿವೆ,
- ಪಾವತಿ ಸ್ಥಿತಿ
- ಬ್ಯಾಂಕ್ ಖಾತೆಯೊಂದಿಗೆ ಆಧಾರ ಸಂಯೋಜನೆ
- ಪ್ರೊಫೈಲ್
- ಸಂಪರ್ಕ
ಈ ಮೇಲ್ಕಂಡ ನಾಲ್ಕು ಆಯ್ಕೆಗಳಲ್ಲಿ ಮೊದಲ ಪಾವತಿ ಸ್ಥಿತಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ನಂತರ ಫಲಾನುಭವಿ ಅರ್ಜಿ ಸಲ್ಲಿಸಿರುವ ಎಲ್ಲಾ ಯೋಜನೆಗಳು ಕಂಡುಬರುತ್ತವೆ ಅವುಗಳಲ್ಲಿ ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಸರ್ಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ, ಹಾಗೂ ನರೇಗಾ ಯೋಜನೆ ಅಡಿಯಲ್ಲಿ ಪಡೆದಿರುವ ಕೂಲಿಕಾರ್ಡ್ ನ ಯೋಜನೆಯ ಆಯ್ಕೆ ಕಾಣ ಸಿಗುತ್ತವೆ,
ಇವುಗಳಲ್ಲಿ ಗೃಹಲಕ್ಷ್ಮಿ ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಫಲಾನುಭವಿ ಹೆಸರಿನೊಂದಿಗೆ ಯೋಜನೆಯ ಹೆಸರು ಮೇಲ್ಭಾಗದಲ್ಲಿ ತೋರಿಸುತ್ತದೆ, ಕೆಳಭಾಗದಲ್ಲಿ ಫಲಾನುಭವಿಯ ಖಾತೆಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಹಾಕಿರುವ ದಿನಾಂಕದೊಂದಿಗೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ತೋರಿಸುತ್ತದೆ, ಹೀಗೆ ಮಹಿಳೆಯರು ಖಾತೆಗೆ ಜಮೆಯಾದ ಹಣದ ಎಲ್ಲ ವಿವರವನ್ನು ಪಡೆಯುವ ಅವಕಾಶ ಸಿಗುತ್ತದೆ.