ಕೃತಕ ಬಣ್ಣ ಹಾಕಿದ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ರಾಜ್ಯದಲ್ಲಿ ನಿಷೇಧ !
ನಮಸ್ತೆ ಬಂಧುಗಳೇ…
90ರ ದಶಕದಲ್ಲಿ ಜನಿಸಿರುವ ಎಲ್ಲರಿಗೂ ಪ್ರಿಯವಾದ ತಿಂಡಿ ಎಂದರೆ ಅದುವೇ ಬಾಂಬೆ ಮಿಠಾಯಿ, ಆದರೆ ಅದೇ ಮಿಠಾಯಿಯಲ್ಲಿ ಆರೋಗ್ಯ ಹಾಳು ಮಾಡುವಂತಹ ಹಲವಾರು ರಾಸಾಯನಿಕಗಳು ಇರುವುದನ್ನು ಈಗಾಗಲೇ ಆರೋಗ್ಯ ಸುರಕ್ಷಾ ಪ್ರಾಧಿಕಾರಗಳು ದೃಢೀಕರಿಸಿವೆ, ಬಾಂಬೆಮಿಠಾಯಿ ಮತ್ತು ಗೋಬಿಮಂಚೂರಿಯಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾಗಿರುವುದು ಗೋಬಿ ಮಂಚೂರಿ ಪ್ರಿಯರನ್ನ ಆತಂಕಕ್ಕೆ ತಳ್ಳಿದೆ. ಈ ವಿಚಾರ ನಮ್ಮ ಕರ್ನಾಟಕ ಸರ್ಕಾರದ ಗಮನಕ್ಕೂ ಬಂದಿದ್ದು ನಿಷೇಧದ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹಾಗಾಗಿ ರಾಜ್ಯದಲ್ಲಿ ಗೋಬಿ ನಿಷೇಧವಾಗಲಿದೆ ಎಂಬ ಸುದ್ದಿ ಇದೆ. ಈ ಸಂಬಂಧ ಇಂದು ಸರ್ಕಾರದ ಮಟ್ಟದಲ್ಲಿ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ಕೆಲವು ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಭೆ ಬಳಿಕ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳನ್ನ ತಿಳಿಸಿದ್ದಾರೆ.
ಇದನ್ನೂ ಓದಿ : ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇರುವ ಅಭ್ಯರ್ಥಿಗಳಿಗೆ ಕೋರ್ಟ್ ನೇರ ನೇಮಕಾತಿ ಗುಡ್ ನ್ಯೂಸ್ ! SSLC ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ
ರಾಜ್ಯದಲ್ಲಿ ತಿನ್ನುವ ಆಹಾರಗಳಲ್ಲಿ ಅಪಾಯಕಾರಿಯಾದ ಕೃತಕ ಬಣ್ಣ ಹಾಕಿದ ಬಾಂಬೆ ಮಿಠಾಯಿಯನ್ನು (ಕಾಟನ್ ಕ್ಯಾಂಡಿ) ನಿಷೇಧ ಬ್ಯಾನ್ ಮಾಡಲಾಗಿದೆ. ಇನ್ನು ಹೆಚ್ಚಿನ ಜನರು ಮಕ್ಕಳು ಇಷ್ಟಪಟ್ಟು ಸೇವಿಸುವ ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಅಥವಾ ಯಾವುದೇ ಅನಾರೋಗ್ಯಕರ ರಾಸಾಯನಿಕಗಳನ್ನು ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಗೋಬಿ ಮಂಚೂರಿಯ ಮಾರುವವರು ಯಾವುದೇ ಕೃತಕ ಬಣ್ಣಗಳನ್ನು ಅಥವಾ ರಾಸಾಯನಿಕಗಳನ್ನು ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ.!ನಿಮ್ಮ ಮೊಬೈಲ್ ನಲ್ಲೇ ನೀವೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ರಾಜ್ಯದಲ್ಲಿ ಹಲವಾರು ಅಂಗಡಿಗಳಲ್ಲಿ ಹೋಟೆಲ್ ಗಳಲ್ಲಿ ಗೋಬಿ ಮಂಚೂರಿಯ 171 ಮಾದರಿಗಳ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 107 ಗೋಬಿ ಮಂಚೂರಿ ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ. ಇವುಗಳು ಆರೋಗ್ಯಕ್ಕೆ ಮಾರ್ಗವಾದ ಅಂಶಗಳನ್ನು ಒಂದಿವೆ ಎಂದು ತಿಳಿದು ಬಂದಿದೆ, ಅವುಗಳಲ್ಲಿ ಟಾರ್ ಟ್ರಾಸೈಲ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೋಸಿನ್ ಎಂಬ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಬಾಂಬೆ ಮಿಠಾಯಿ (ಕಾಟನ್ ಕ್ಯಾಂಡಿಯ) 25 ಮಾದರಿಯ ಸಂಗ್ರಹ ಮಾಡಲಾಗಿತ್ತು. 15 ಮಾದರಿಯಲ್ಲಿ ಕೃತಕ ಬಣ್ಣಗಳು & ರಾಸಾಯನಿಕಗಳು ಕಂಡು ಬಂದಿವೆ. ಹಾಗೂ ಅಪಾಯಕಾರಿಯಾದ ರೋಡ್ ಮೈನ್-ಬಿ ಅಂಶ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ ಎಂದರು. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಈ ರೀತಿಯ ಅನಾರೋಗ್ಯಕರ ತೆನಿಸುಗಳನ್ನು ಕೊಡಿಸುವುದರ ಬದಲಿಗೆ ಸಾವಯುವ ನೀತಿಯಲ್ಲಿ ಬೆಳೆದಿರುವ ಹಣ್ಣುಗಳನ್ನು ಕೊಡಿಸಿ ತಮ್ಮ ಮಕ್ಕಳ ಭವಿಷ್ಯವನ್ನು ಆರೋಗ್ಯಕರವಾಗಿ ಇರಿಸಬಹುದಾಗಿದೆ.
ಇನ್ಮುಂದೆ ಕೃತಕ ಕಲರ್ ಬಳಸಿ ಗೋಬಿ ಮಂಚೂರಿ ಮಾರಾಟ ಮಾಡಿದರೆ 10 ಲಕ್ಷ ರೂಪಾಯಿ ತನಕ ದಂಡ ವಿಧಿಸಲಾಗುತ್ತದೆ. ಹಾಗೂ ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ ಒಂದರಲ್ಲಿ 7 ವರ್ಷಕ್ಕಿಂತ ಅಧಿಕ ಜೈಲುವಾಸ ಶಿಕ್ಷೆಗೆ ಒಳಪಡಬಹುದು. ಇದು ಹಲವಾರು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶವಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಜೀವಾವಧಿ ಶಿಕ್ಷೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : 2nd PUC |SSLC ಪರೀಕ್ಷೆ ಬರೆಯುತ್ತಿರುವವರು ಕೊನೆ ಸಮಯದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.