ಮೇಕೆ ಸಾಕಾಣಿಕೆ ಮಾಡಲು ಉಚಿತ ತರಬೇತಿ,ಊಟ ವಸತಿ ಉಚಿತ ಆಸಕ್ತರು ಅರ್ಜಿ ಸಲ್ಲಿಸಿ.!

ನಮಸ್ತೆ ಬಂಧುಗಳೇ.. ಇಂದು ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕುವ ಸಣ್ಣ ರೈತರು, ಕೃಷಿ ಕಾರ್ಮಿಕರು, ರೈತ ಮಹಿಳೆಯರು ಹಾಗೂ ಹಳ್ಳಿ ನಾಡಿನ ರೈತ ಮಕ್ಕಳಿಗೆ ಮೇಕೆ ಸಾಕಾಣಿಕೆ ಹೊಸ ಭರವಸೆಯ ಬೆಳಕಾಗಿ ಮಾರ್ಪಾಡಾಗಿದೆ. ಹವಾಮಾನ ವೈಪರಿತ್ಯದಿಂದ ರೈತರ ಕೃಷಿ ಆದಾಯ ಕೈಕೊಟ್ಟಾಗ ಜೀವನಕ್ಕೆ ಆಸರೆಯಾಗುವುದೇ  ಮತ್ತು ಬೆಳಕಾಗುವುದೇ ಹೈನುಗಾರಿಕೆ ಮತ್ತು ಕುರಿ/ಮೇಕೆ ಸಾಕಣೆಯ ಆದಾಯ.

WhatsApp Group Join Now
Telegram Group Join Now

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

ಹೈನುಗಾರಿಕೆಯಲ್ಲಿ ಪ್ರಮುಖವಾಗಿ ಹಾಲು, ಗೊಬ್ಬರ, ಗಂಜಲದಿ೦ದ ಆದಾಯ ದೊರೆತರೆ, ಆಡು-ಕುರಿಗಳ ಸಾಕಣೆಯಲ್ಲಿ ಮಾಂಸ, ಅವುಗಳ ಹಾಲು, ಚರ್ಮ, ಉಣ್ಣೆ, ಗೊಬ್ಬರ  ಇತ್ಯಾದಿ ಉಪಯೋಗಿ ವಸ್ತುಗಳನ್ನು ಮಾರಿ ಲಾಭ ಗಳಿಸಬಹುದಾಗಿದೆ. ಹೀಗಾಗಿ ಅನೇಕ ಯುವ ಉತ್ಸಾಹಿಗಳು ಹೈನುಗಾರಿಕೆ, ಹಾಗೂ ಆಡು-ಕುರಿ ಸಾಕಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಲು ಶುರು ಮಾಡಿದ್ದಾರೆ.

ಆದರೆ, ಅನೇಕರು ಹೈನುಗಾರಿಕೆ, ಹಸು ಕರು ಎಮ್ಮೆ ಮತ್ತು ಕುರಿ-ಮೇಕೆ ಸಾಕಣೆಯಲ್ಲಿ ಸೂಕ್ತ ಅನುಭವ, ಮಾಹಿತಿ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಹೊಸದರಲ್ಲಿ ಹೈನುಗಾರಿಕೆ ಶುರು ಮಾಡುವಾಗ ಹೆಚ್ಚಿನ ಬಂಡವಾಳವನ್ನು ವಿನಿಯೋಗಿಸದೆ  ಹಾಗೂ ಬೃಹತ್ ಶೆಡ್ಡು, ವಿದೇಶಿ ತಳಿಗಳ ಹಸು ಕರುಗಳ ಆಕರ್ಷಣೆಗೆ ಒಳಗಾಗದೇ,ಆದೇಶಿ ಹಸು ಕರುಗಳನ್ನು ಸಾಕುತ್ತಾ ಸಣ್ಣಪುಟ್ಟ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸರಳ ಪದ್ಧತಿಯನ್ನು ಅಳವಡಿಸಿಕೊಂಡರೆ ಹೈನುಗಾರಿಕೆ ಮತ್ತು ಆಡು-ಕುರಿ ಸಾಕಣೆಯಲ್ಲಿ ಗೆಲುವು ಆದರೆ ಪರಿಶ್ರಮ ಪ್ರತಿದಿನವೂ ಅಗತ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಯಶಸ್ವಿನಿ ಕಾರ್ಡ್ ಯೋಜನೆ” ಪ್ರಾರಂಭ, ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಬೇಕಾಗುವ ದಾಖಲೆಗಳು.ಇಲ್ಲಿದೆ ಮಾಹಿತಿ!

WhatsApp Group Join Now
Telegram Group Join Now
free-goat-training-with-accomodation-and-food

ಮೇಕೆ/ ಆಡು ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿಯನ್ನು ಈಗಾಗಲೇ ಆಯೋಜನೆ ಮಾಡಿದ್ದು ಫೆ.12 ರಿಂದ 21 ರವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದ್ದು, ಹಲವಾರು ನಿರುದ್ಯೋಗಿ ಯುವಕ ಯುವತಿಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,  ಹೀಗೆ ಉಚಿತ ತರಬೇತಿಯು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು  ಜಿಲ್ಲೆಗಳ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಆಗಿದ್ದಾರೆ. ದಿನಗಳಲ್ಲಿ ಮತ್ತೊಂದು ಸುತ್ತಿನ ತರಬೇತಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಹಾಗಾಗಿ ಈಗಾಗಲೇ ನಡೆಯುತ್ತಿರುವ ತರಬೇತಿಯನ್ನು  ಭಾಗವಹಿಸಲು ಸಾಧ್ಯವಾಗದವರು ಮುಂದಿನ ತರಬೇತಿಯಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

 ಹೀಗೆ ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಯಾವೆಲ್ಲ ಯೋಜನೆಯಡಿ  ಎಷ್ಟೆಷ್ಟು ಸಹಾಯಧನ ಪಡೆಯಬಹುದು?  ಹಾಗೂ ಅರ್ಜಿ ಸಲ್ಲಿಕೆ  ಹೇಗೆ  ಅದರ ವಿಧಾನ ಹೇಗಿರುತ್ತದೆ? ಎಲ್ಲಿ  ನಮ್ಮ ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿ  ವಿಲೇವಾರಿಯ ಸಂಪೂರ್ಣ ಪ್ರಕ್ರಿಯೆ ಇತ್ಯಾದಿ  ಮಾಹಿತಿಯನ್ನು ನಿಮಗೆ ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ. ಹೀಗಾಗಿ ಒಟ್ಟಿನಲ್ಲಿ ಸಂಕ್ಷೀಪ್ತವಾಗಿ ಕುರಿ-ಮೇಕೆ ಸಾಕಾಣಿಕೆ ಪ್ರಾರಂಭಿಸುವ ಬಗ್ಗೆ ಯೋಚನೆಯಲ್ಲಿರುವವರು ಪ್ರಾರಂಭಿಸಲು ಅಗತ್ಯ ಮಾಹಿತಿಯನ್ನು ಈ ತರಬೇತಿಯಲ್ಲಿ ಅಭ್ಯರ್ಥಿಗಳು  ಉಚಿತವಾಗಿ ಪಡೆದುಕೊಳ್ಳಬಹುದು.

ನಮ್ಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನ’ರಾ ಬ್ಯಾಂಕ್‌ನ ಸಂಯುಕ್ತಶ್ರಯದಲ್ಲಿ  ಆಯೋಜಿಸಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಉಚಿತ ಮೇಕೆ ಸಾಕಾಣಿಕೆ ತರಬೇತಿಗೆ ಆಸಕ್ತರಾದ  ಹಾಗೂ ವಯಸ್ಸು 18 ರಿಂದ 45 ವರ್ಷ ವಯೋಮಾನದವರು  ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ

ಮೇಕೆ ಸಾಕಾಣಿಕೆ ಬಗ್ಗೆ ಇತರೆ ಮಾಹಿತಿ

ಮೊದಲನೆಯದಾಗಿ ಅರ್ಜಿ ಸಲ್ಲಿಸುವವರು ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು. ಹಾಗೂ ಅಭ್ಯರ್ಥಿಗಳು ಆಧಾರ್‌ ಕಾರ್ಡ್‌ನ್ನು ಹಾಗೂ ಬಿಪಿಎಲ್‌ ಕಾರ್ಡ್‌ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ  ತರಬೇತಿಗೆ ಮೊದಲ ಆದ್ಯತೆ ನೀಡಲಾಗುವುದು.

ಮೇಕೆ ಸಾಕಾಣಿಕೆ ತರಬೇತಿಯು ಕಡ್ಡಾಯವಾಗಿ ವಸತಿ ಸಹಿತವಾಗಿದ್ದು, ತರಬೇತಿಯ ಸಂಪೂರ್ಣ ಅವಧಿಯಲ್ಲಿ ಆಯೋಜಕರು ಅಭ್ಯರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿ ನೀಡುತ್ತಾರೆ. ಹಾಗೂ ತರಬೇತಿ ಪೂರ್ಣಗೊಂಡ ನಂತರ ಭಾರತ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ  ತರಬೇತಿಯ ಭಾಗವಾಗಿ ಪ್ರಮಾಣಪತ್ರವನ್ನು  ವಿತರಿಸಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆಸಕ್ತರು ಅರ್ಜಿ ಸಲ್ಲಿಸಲು  ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಈ ಕೆಳಕಂಡಂತೆ ಮೊಬೈಲ್‌ ಸಂಖ್ಯೆ: 8884554510, 9740982585, 9113880324 ಅನ್ನು ಸಂಪರ್ಕಿಸಬಹುದಾಗಿದೆ, ಮತ್ತು ನಿಮ್ಮ ಎಲ್ಲಾ ಅನುಮಾನ  ಸಂದೇಹಗಳನ್ನು ವಿವರಿಸಿಕೊಳ್ಳಬಹುದು ಎಂಬುದಾಗಿ  ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ  ನಿರ್ದೇಶಕರು ಆದ ರವಿಕುಮಾರ್‌ ತಿಳಿಸಿದ್ದಾರೆ.

ತರಬೇತಿಗೆ ಯಾವ ಯಾವ ದಾಖಲೆ ಬೇಕು?

 ಬಂಧುಗಳೇ ಕುರಿ ಮೇಕೆ ಸಾಕಾಣಿಕೆ  ತರಬೇತಿ ಪಡೆಯಲು ಹೆಚ್ಚಿಸುವ ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ  ಎಂದರೆ ರೇಷನ್ ಕಾರ್ಡ್ ಇರಬೇಕು.  ಹಾಗೂ ಇತ್ತೀಚಿನ  ಭಾವಚಿತ್ರ (ಫೋಟೋ)  ಇರಬೇಕು. ತರಬೇತಿಯ ಅರ್ಜಿಯೊಂದಿಗೆ ಈ  ದಾಖಲೆಗಳನ್ನು   ಜೆರಾಕ್ಸ್ ಮಾಡಿಸಿ ಪ್ರತಿಯನ್ನು ಸಾಕಾಣಿಕೆ ಅರ್ಜಿಯೊಂದಿಗೆ ಲಗತ್ತಿಸಬೇಕು. ಮೊದಲು ಬಂದವರಿಗೆ ಅಂದರೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು  ಎಂದು ತಿಳಿಸಲಾಗಿದೆ. ಹಾಗಾಗಿ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಈ ಕೂಡಲೇ ಅರ್ಜಿ ಸಲ್ಲಿಸಿ ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ತರಬೇತಿಯ ಲಾಭ ಪಡೆದುಕೊಳ್ಳಿ.

ರೈತರು ತಮ್ಮ ಸಾಂಪ್ರದಾಯಿಕ ಕೃಷಿಯೊಂದಿಗೆ ಕುರಿ, ಮೇಕೆ, ಕೋಳಿ ಮುಂತಾದ  ಆಹಾರ ಪ್ರಾಣಿಗಳ ಸಾಕಾಣಿಕೆಯಂತಹ ಉಪಕಸುಬು ಮಾಡಿ ತಮ್ಮ ಜೀವನವನ್ನು ಉಜ್ವಲವನ್ನಾಗಿಸಬಹುದು,  ಹೇಗೆ ತಮ್ಮ ಜೀವನ ಸಾಗಿಸಬಹುದು.  ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಯಾವಾಗ ಕುರಿ ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ಪಡೆದು ರಾಜ್ಯದ ಇತರೆ ರೈತರು ಅಗತ್ಯ ದಾಖಲೆಗಳೊಂದಿಗೆ ಕುರಿ ಮೇಕೆ ಸಾಕಾಣಿಕೆಗೆ ಅರ್ಜಿ ಸಲ್ಲಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಮೇಕೆ ಸಾಕಣೆಯ ಪ್ರಯೋಜನಗಳು

  •  ಅತ್ಯಂತ ಕಡಿಮೆ ಹೂಡಿಕೆ: ಒಂದು ಫಲ ಆಗಿರುವ ಎಮ್ಮೆಯ ವೆಚ್ಚದಲ್ಲಿ ನಾವು 10 ಫಲ ಆಗಿರುವ ಮೇಕೆಗಳನ್ನು ಪಡೆಯಬಹುದು.
  •  ಕಡಿಮೆ ಕೂಲಿ ಆವಶ್ಯಕತೆ:  ಕುರಿ ಮತ್ತು ಮೇಕೆಗಳನ್ನು ಮೇಯಿಸುವ ಪದ್ಧತಿಯಲ್ಲಿ 30-40 ಮೇಕೆಗಳು ಮತ್ತು  ಸ್ಟಾಲ್ ಫೀಡಿಂ’ಗ್ ಅಡಿಯಲ್ಲಿ 40 ರಿಂದ 80 ಮೇಕೆಗಳನ್ನು ಒಬ್ಬ ವ್ಯಕ್ತಿ ಸುಲಭವಾಗಿ ಸಾಕಬಹುದು. ಹಾಗೂ ಇತರೆ ಪ್ರಾಣಿ ಸಾಕಾಣಿಕೆಗೆ ಹೋಲಿಸಿದರೆ ಮೇಕೆ ಸಾಕಾಣಿಕೆಗೆ ಅತಿ ಕಡಿಮೆ ಕಾರ್ಮಿಕರು ಸಾಕಾಗುತ್ತಾರೆ.
  • ಇತರ ಆಹಾರ ಮಾಂಸಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಕೊಬ್ಬನ್ನು ಹೊಂದಿರುವ, ಹೆಚ್ಚಿನ ಜೈವಿಕ ಮೌಲ್ಯದೊಂದಿಗೆ ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವಾಗಿದೆ  ಮತ್ತು  ಎಲ್ಲಾ ಸಮುದಾಯದ ಜನರು ಕುರಿ ಮತ್ತು ಮೇಕೆಯ ಮಾಂಸವನ್ನು ಸೇವಿಸುತ್ತಾರೆ. ಹೆಚ್ಚಿನ ಪೌಷ್ಠಿಕಾಂಶ ಮತ್ತು ರುಚಿಯಿಂದಾಗಿ ಇದು ಪ್ರತಿ ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆಯನ್ನು ಕೊಳ್ಳುತ್ತಿದೆ.
  • ಹಾಲು: ಮೇಕೆ ಹಾಲು ಹೆಚ್ಚು ಪೌಷ್ಟಿಕವಾಗಿದೆ, ಏಕೆ ಹಾಲನ್ನು ಜಾಂಡಿಸ್ ರೋಗಿಗಳಿಗೆ ನೀಡಲಾಗುತ್ತದೆ,ಹಾಲಿನಲ್ಲಿ ರೋಗಾಣುಗಳನ್ನು ಕೊಲ್ಲುವ ಹೆಚ್ಚಿನ ಶಕ್ತಿ ಅಡಗಿದೆ, ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥವಾಗಿದೆ. ಹಾಗೂ ಆಹಾರವಾಗಿ ಮಾತ್ರ ಉಪಯೋಗಿಸದೆ ಮೇಕೆ ಹಾಲನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಮತ್ತು ಇತರೆ ವಾಣಿಜ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೇಕೆ ಹಾಲನ್ನು ಮಾರುವ ಯೋಜನೆಯಲ್ಲಿದ್ದರೆ ಮೆಟ್ರೋ ನಗರಗಳು ಹಾಲಿನ ಮಾರುಕಟ್ಟೆಗೆ ಉತ್ತಮ ಸ್ಥಳವಾಗಿದೆ ತಿಳಿದು ಬರುತ್ತದೆ.

ಈ ಸುದ್ದಿ ಓದಿ:- 2024 ರಲ್ಲಿ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡುತ್ತಿದ್ದರೆ ತಿಳಿದುಕೊಳ್ಳಲೇ ಬೇಕಾದ ಅಂಶಗಳೇನು ?

* ಮೇಕೆ ಗೊಬ್ಬರ: ದನ ಮತ್ತು ಎಮ್ಮೆ ಗೊಬ್ಬರಕ್ಕೆ ಮಾಡಿದರೆ ಮೇಕೆ ಗೊಬ್ಬರದಲ್ಲಿ 2.5 ಪಟ್ಟು ಹೆಚ್ಚು ಸಾರಜನಕ ಮತ್ತು ರಂಜಕವಿದೆ ಹೀಗಾಗಿ ಮಣ್ಣಿಗೆ ಅಗತ್ಯವಿರುವ ರಾಸಾಯನಿಕಗಳು ದೊರಕುತ್ತದೆ. ಹಾಗಾಗಿ ಕೃಷಿ ಮತ್ತು ತೋಟಗಾರಿಕೆ ಅವಲಂಬಿಸಿರುವ ರೈತರು ಮೇಕೆ ಗೊಬ್ಬರದ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ.
* ವಿವಿಧೋದ್ದೇಶ ಪ್ರಾಣಿ: ಕುರಿ ಮತ್ತು ಮೇಕೆ  ಹಲವಾರು ರೀತಿಯ ಲಾಭಗಳನ್ನು ಸಾಕಾಣಿಕೆ ಧಾರಣೆಗೆ ತಂದುಕೊಡುತ್ತವೆ ಅವುಗಳಲ್ಲಿ ಹಾಲು, ಮಾಂಸ, ಚರ್ಮ, ಗೊಬ್ಬರ, ಮರಿಗಳನ್ನು ಉತ್ಪಾದಿಸುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

* ಹೆಚ್ಚಿನ ಸಮೃದ್ಧತೆ: ಮೇಕೆ ಹಾಗೂ ಇತರ ದೇಶೀಯ ಪ್ರಾಣಿ ಜಾತಿಗಳಿಗೆ ಹೋಲಿಕೆ ಮಾಡಿದರೆಅಸಾಧಾರಣ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಮೇಕಿಗಳು ಹೊಂದಿದೆ, ವರ್ಷಕ್ಕೆ ಎರಡು ಬಾರಿ ಮರಿ ಹಾಕುವ ಮತ್ತು ಅವಳಿ ಮತ್ತು ತ್ರಿವಳಿಗಳು ಮರಿಗಳನ್ನು  ಪ್ರಸವ ಮಾಡುವ  ಸಾಮರ್ಥ್ಯ ಮೇಕೆಗಳಿಗೆ ಸೃಷ್ಟಿಯಲ್ಲಿ ದೊರಕಿದೆ ಹಾಗೂ ಈ ಪ್ರಕ್ರಿಯೆಗಳು ಮೇಕೆಗಳಲ್ಲಿ ಸಾಮಾನ್ಯವಾಗಿದೆ.
* ಸುಲಭವಾಗಿ ಮಾರಾಟ ಮಾಡಬಹುದು: ಮೇಕೆ ಹಾಲು, ಮಾಂಸ, ಮರಿ ಮತ್ತು ಗೊಬ್ಬರ ನಮ್ಮ ದೈನಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ ಹಾಗಾಗಿ ಯಾವುದೇ ಅಡೆತಡೆಗಳಿಂದ ಸುಲಭವಾಗಿ ಲಾಭಕ್ಕಾಗಿ ಮಾರಾಟ ಮಾಡಬಹುದು.

* ಪೋಷಣೆ ಮಾಡಲು ಸುಲಭ: ಮೇಕೆಗಳು ಹೆಚ್ಚಿನ ಪೋಷಣೆಯನ್ನು ಬೇಡುವುದಿಲ್ಲ, ಕಡಿಮೆ ಗುಣಮಟ್ಟದ ಫೀಡ್ ಮತ್ತು ನೈಸರ್ಗಿಕವಾಗಿ ದೊರೆಯುವ ಮೇವಿನೊಂದಿಗೆ ಮೇಕೆಗಳು ಜೀವನ ನಡೆಸುತ್ತವೆ, ಮತ್ತು ಸುಲಭವಾಗಿ  ಯಾವುದೇ ಖರ್ಚುಗಳಿಲ್ಲದೆ ಸಂತಾನೋತ್ಪತ್ತಿ ಪ್ರಕ್ರಿಯೆ ಮಾಡುತ್ತಾರೆ.
*ಆಡುಗಳು ಮೇಕಿಗಳು ವಿಧೇಯ  ಗುಣವನ್ನು ಹೊಂದಿದ ಸಾಕುಪ್ರಾಣಿಗಳಾಗಿವೆ, ಉತ್ತಮ ಸ್ವಭಾವ, ಸಹಕಾರಿ,ಹಾಗೂ ಸುಲಭವಾಗಿ ನಿರ್ವಹಿಸಬಹುದಾದ ಪ್ರಾಣಿಗಳು. ಆದ್ದರಿಂದ ಮಹಿಳೆಯರು ವಯಸ್ಸಾದವರು ಕೂಡ ಸುಲಭವಾಗಿ ಮೇಕೆಗಳನ್ನು ಸಾಕಬಹುದು.

ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ  Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍