ನಮಸ್ತೆ ಬಂಧುಗಳೇ…ರೈತರ ಸಾಲ ಮನ್ನಾ! ಕಾಂಗ್ರೆಸ್ ಸರ್ಕಾರದ 6 ನೇ ಗ್ಯಾರೆಂಟಿ ಘೋಷಣೆ ! ಭಾರತದಲ್ಲಿ 70 ಪ್ರತಿಶತ ಪ್ರಮುಖ ಕಸುಬು ವ್ಯವಸಾಯ, ರಾಷ್ಟ್ರದ ಒಟ್ಟಾರೆ ಆದಾಯದಲ್ಲಿ ಹೆಚ್ಚಿನ ಪಾಲಿಗೆ ಮೂಲಾಧಾರವಾಗಿರುವ ವ್ಯವಸಾಯವು, ನಮ್ಮ ದೇಶದ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಆದರೆ ಬೆಳೆದ ಬೆಳೆಗಳಿಗೆ ಸರಿಯಾದ ವೈಜ್ಞಾನಿಕ ದರ ನಿಗದಿಯಾಗದೆ, ಸರಿಯಾದ ಕಾಲ ಕಾಲಕ್ಕೆ ಮಳೆ ಬಾರದೆ ರೈತನು ಕಷ್ಟದಲ್ಲಿ ತನ್ನ ಜೀವನವನ್ನು ನಡೆಸುತ್ತಿದ್ದಾನೆ.
ಸರ್ಕಾರಗಳು ಅನೇಕ ಬಾರಿ ರಾಸಾಯನಿಕ ಗೊಬ್ಬರಗಳು, ಬಿತ್ತನೆ ಬೀಜ, ಮಾರುಕಟ್ಟೆ ವಿಸ್ತರಣೆಯನ್ನು ಮಾಡಿದರು ಸಹ ಕೆಲವೊಂದು ಬಾರಿ ನೀರಿನ ಅಭಾವದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗುವುದು ಕೂಡ ಸತ್ಯ. ರಾಜ್ಯ ಸರ್ಕಾರಗಳು ಹಲವಾರು ಬಾರಿ ರೈತರು ಬೆಳೆ ಬೆಳೆಯಲು ತಾವು ಮಾಡಿರುವ ಸಾಲಗಳನ್ನು ಚುಕ್ತಾ ಮಾಡಿದ್ದಾರೆ, ಇದರಿಂದ ರೈತರು ಸ್ವಲ್ಪಮಟ್ಟಿನ ಸಮಾಧಾನವನ್ನು ಪಡೆದುಕೊಂಡಿದ್ದಾರೆ. ಮತ್ತೊಮ್ಮೆ ರೈತರ ಸಾಲ ಮನ್ನ ಮಾಡುವ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಪಕ್ಷವು ನೀಡಿದೆ, ಇದರಿಂದ ಹಲವಾರು ಬಡ ರೈತರಿಗೆ ಸ್ವಲ್ಪಮಟ್ಟಿನ ನೆಮ್ಮದಿಯನ್ನು ಕಾಣಬಹುದಾಗಿದೆ. ಈ ಯೋಜನೆಯನ್ನು ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ. ಹಾಗೂ ಇದೇ ರೀತಿಯ ಮಾಹಿತಿಯನ್ನು ಪ್ರತಿದಿನವೂ ಉಚಿತವಾಗಿ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಈಗಲೇ ಸೇರಿಕೊಳ್ಳಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಗುಡ್‌ನ್ಯೂಸ್, ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ರೂ.ಇಳಿಕೆ ! ಮೋದಿ ಸರಕಾರ ಭರ್ಜರಿ ಗಿಫ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮುನ್ನ ತಾವು ನೀಡಿದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ, ಅವುಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ, , ಗೃಹಜ್ಯೋತಿ ಯೋಜನೆ,ಶಕ್ತಿ ಯೋಜನೆ, ಯುವನಿಧಿ ಯೋಜನೆ, ಯೋಜನೆ ಹೀಗೆ ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ಅವುಗಳನ್ನು ಜಾರಿಗೆ ತಂದು ಬಡ ಮತ್ತು ಮಧ್ಯಮ ವರ್ಗದ ಜನರ ಅಭಿವೃದ್ಧಿಗೆ ಸಣ್ಣಮಟ್ಟಿನ ಕಾರಣವಾಗಿದೆ. ಈಗ ಇದೇ ರೀತಿ ಭಾರತೀಯ ಕಾಂಗ್ರೆಸ್ ನ ಮುಖಂಡರಾದ ಪ್ರಧಾನಿ ಅಭ್ಯರ್ಥಿಗಳಾದ ರಾಹುಲ್ ಗಾಂಧಿ ರವರು ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸಿ ಕಾಂಗ್ರೆಸ್ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ, ಹಾಗಾಗಿ ಕಾಂಗ್ರೆಸ್ ಸರ್ಕಾರವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಆಗುವುದು ಗ್ಯಾರಂಟಿಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ : ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ.!ನಿಮ್ಮ ಮೊಬೈಲ್ ನಲ್ಲೇ ನೀವೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ದೇಶದ ರೈತರ ಸಾಲ ಮನ್ನಾ !
ಭಾರತ ಬಲಿಷ್ಠ, ಸುಭದ್ರ ಹಾಗೂ ಒಗ್ಗಟ್ಟಿನಿಂದಿರಲು ನಮ್ಮ ದೇಶದ ರೈತರ ಪರಿಶ್ರಮವೇ ಕಾರಣ ಎಂದು ಪ್ರತಿಪಾದನೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅನ್ನದಾತರನ್ನು ಋಣ ಮುಕ್ತಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಗುರುವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡ್ ತಾಲೂಕಿನಲ್ಲಿ ರೈತರ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮುಖಂಡ., ಸಂಸದ ರಾಹುಲ್, ಪ್ರತಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲಗಳನ್ನು ಮನ್ನಾ ಮಾಡುವುದಾಗಿ ಹೇಳಿದರು. PM ಫಸಲ್ ಬಿಮಾ ಯೋಜನೆಯನ್ನು ಮತ್ತೆ ರಚಿಸಲಾಗುವುದೆಂದು ಹೇಳಿದ ಅವರು, ರೈತರನ್ನು ರೈತರ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯ (GST) ವ್ಯಾಪ್ತಿಯಿಂದ ಹೊರಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂಬುದಾಗಿ ಘೋಷಣೆ ಮಾಡಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರ ಮಾಡಿದ್ದು ಅದರ ಭಾಗವಾಗಿ ರ್ಯಾಲಿಯನ್ನು ಏರ್ಪಡಿಸಲಾಗಿತ್ತು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ಬ್ಯಾಂಕುಗಳಲ್ಲಿ ಪಡೆದ ಸಾಲ ಮನ್ನಾ ವಾಗುತ್ತದೆ ?
ಸಹಕಾರಿ ಬ್ಯಾಂಕುಗಳಲ್ಲಿ, ಕೃಷಿ ಪತ್ತಿನ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲ, ಮತ್ತು ಪ್ರೈವೇಟ್ ಬ್ಯಾಂಕುಗಳಿಂದ ಜಮೀನಿನ ಮೇಲೆ ಪಡೆದ ಸಾಲಗಳು, ಮತ್ತು ಬೆಳೆ ಸಾಲಗಳು ಮನ್ನಾ ಮಾಡಲಾಗುತ್ತದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
» ಮಹಾರಾಷ್ಟ್ರ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭರವಸೆ
ರೈತರ ಬಗ್ಗೆ ಸಂವೇದನೆಯಿಲ್ಲದ ಬಿಜೆಪಿ ಸರ್ಕಾರ: ದೇಶದ ರೈತರಿಂದಾಗಿ ದೇಶ ಬಲಿಷ್ಠವಾಗಿದೆ ಹಾಗೂ ಒಗ್ಗಟ್ಟಿನಿಂದಿದೆ. ಇಲ್ಲದಿದ್ದರೆ ದೇಶ ಇಷ್ಟೊತ್ತಿಗಾಗಲೇ ಒಡೆದು ಹೋಗುತ್ತಿತ್ತು. ನಿಮಗಾಗಿ ನಮ್ಮ ಬಾಗಿಲುಗಳು ಸದಾ ಇರುತ್ತವೆ ಮತ್ತು ಮುಕ್ತವಾಗಿವೆ. ರಾಷ್ಟ್ರದ ರೈತ ಸಮುದಾಯದ ಸಂಕಷ್ಟಗಳ ಬಗ್ಗೆ ಕೇಂದ್ರದಲ್ಲಿರುವ ಆಡಳಿತ ಪಕ್ಷ ಬಿಜೆಪಿ ಸರ್ಕಾರಕ್ಕೆ ಸಂವೇದನೆಯಿಲ್ಲ. ಇಂಡಿಯಾ ಕೂಟ ಅನ್ನದಾತರ ಒಳಿತಿಗಾಗಿ , ಮತ್ತು ಅವರ ಏಳಿಗೆಗಾಗಿ ಗರಿಷ್ಠ ಪ್ರಯತ್ನಗಳನ್ನು ನಡೆಸಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.