ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ ! Cow Farming !

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ ಬಂಧುಗಳೇ…  ನಗರ ವಾಸದ ಜಂಜಾಟದಿಂದ  ಬೆಸತ್ತು  ಹಳ್ಳಿಯ ಜೀವನದ ಕಡೆ ಮುಖ ಮಾಡಿರುವ ವರ್ಗ ಒಂದು ಕಡೆಯಾದರೆ ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಜೀವನ ನಡೆಸುತ್ತಿರುವ ವರ್ಗವು ಜೀವನೋಪಾಯಕ್ಕಾಗಿ ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.  ಆದರೆ ಮಂಡ್ಯದಲ್ಲಿರುವ ಮಂಗಳಮ್ಮ ಎನ್ನುವ ಮಹಿಳೆ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅಸಾಧಾರಣ ಸಾಧನೆ ಮಾಡಿ ತೋರಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿಗಳು ಸಹ ಸಂದಿರುವುದು ಹೆಮ್ಮೆಯ ವಿಷಯ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಹೌದು ಬಂಧುಗಳೇ, , 40ಕ್ಕೂ ಹೆಚ್ಚಿನ ಹಸುಗಳನ್ನು ಕಟ್ಟಿರುವ ಮಂಗಳಮ್ಮ ರವರ ಕುಟುಂಬದಲ್ಲಿ ಒಟ್ಟು ಮೂವರು ಸದಸ್ಯರಿದ್ದಾರೆ ಅವರ ಪತಿ ಮತ್ತು ಅವರ ಮಗ ಈ ಮೂವರು ಸದಸ್ಯರೇ, 40ಕ್ಕೂ ಹೆಚ್ಚಿನ ಹಸುರುಗಳನ್ನು ಪೋಷಣೆ ಮಾಡುತ್ತಾ ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.  ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬದಲ್ಲಿ ಪ್ರತಿ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ.  ಹೀಗೆ ಪ್ರತಿಯೊಬ್ಬರು ಒಗ್ಗಟ್ಟಾಗಿ ಒಂದು ಕೊಂಡು ಹೋಗುವುದರಿಂದ ಯಾವುದೇ ಕಷ್ಟಕರ ಕೆಲಸಗಳನ್ನು ಸಹ ಮಾಡಿ ಮುಗಿಸಬಹುದು ಎನ್ನುತ್ತಾರೆ ಮಂಗಳಮ್ಮ ರವರು.

ಹಸುಗಳು  ದಿನಕ್ಕೆ ಎಷ್ಟು ಹಾಲು ಕೊಡುತ್ತವೆ.!

40ಕ್ಕೂ ಹೆಚ್ಚಿನ ಹಸು ಕರಗಳನ್ನು ಸಾಕಿರುವ ಮಂಗಳಮ್ಮ  ಪ್ರತಿ ಹೊತ್ತಿಗೆ ಅಂದರೆ ಬೆಳಿಗ್ಗೆ 150 ಲೀಟರ್ ಹಾಲನ್ನು  ಮತ್ತು ಸಂಜೆಗೂ 150 ಲೀಟರ್ ಹಾಲನ್ನು ತಮ್ಮಗೆ ಹತ್ತಿರದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ,  ಕರ್ನಾಟಕ ಹಾಲು ಮಹಾ ಮಂಡಳಿ ಸಂಘಕ್ಕೆ ಸರಬರಾಜು ಮಾಡುತ್ತಾರೆ,  ಮತ್ತು ಪ್ರತಿ 15 ದಿನಗಳಿಗೊಮ್ಮೆ ತಮ್ಮ ಹಾಲಿನ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಪಡೆಯುತ್ತಿದ್ದಾರೆ. 

ಹಸುಗಳ ಜವಾಬ್ದಾರಿ ಮತ್ತು ಆಹಾರ ಪೂರೈಕೆ!

ಬಂಧುಗಳೇ ಹಸುಗಳು ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ಪ್ರಾಣಿಗಳು,  ಹಾಗಾಗಿ ಅವುಗಳ ಆಹಾರ ಆರೋಗ್ಯವನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಹಾಗಾಗಿ ಹಸುಗಳ ಜವಾಬ್ದಾರಿಯನ್ನು ಯಾರೋ ಮೂರನೇವರಿಗೆ ಕೆಲಸದ ಅಳುಗಳಿಗೆ ಕೊಡುವ ಬದಲಾಗಿ ನಮ್ಮ ಕುಟುಂಬದವರೇ ನಿರ್ವಹಣೆ ಮಾಡಿದರೆ ಉತ್ತಮ ಮತ್ತು ಲಾಭದಾಯಕವಾಗಿರುತ್ತದೆ.  ಹಾಗೂ ಆರ್ಥಿಕವಾಗಿ ಹಣವನ್ನು ನಾವು ಉಳಿಸಬಹುದಾಗಿದೆ.  ಆದ್ದರಿಂದ ಕುಟುಂಬದವರೇ ಒಗ್ಗಟ್ಟಾಗಿ ಹಸುಗಳ ಜವಾಬ್ದಾರಿಯನ್ನು ನಿರ್ವಹಿಸುವುದು ಅತ್ಯುತ್ತಮವಾದ ಅಂಶವಾಗಿರುತ್ತದೆ.   

 ಹಸುಗಳ ಆರೋಗ್ಯವನ್ನು ನೋಡಿಕೊಳ್ಳಲು ಹಾಗಾಗಿ ಪಶು ವೈದ್ಯಧಿಕಾರಿಗಳನ್ನು ಕರೆಸಬೇಕು ಮತ್ತು ಅವುಗಳ ಆರೋಗ್ಯ ತಪಾಸಣೆಯನ್ನು ಮಾಡಿಸುವುದರಿಂದ  ಪಶುಗಳ ಆರೋಗ್ಯ ಚೆನ್ನಾಗಿರುತ್ತದೆ. 

WhatsApp Group Join Now
Telegram Group Join Now

ಹಸುಗಳ ಆಹಾರ ಪೂರೈಕೆಗಾಗಿ  ತಮ್ಮದೇ ಸ್ವಂತ ಗದ್ದೆಗಳಲ್ಲಿ ಹೊಲಗಳಲ್ಲಿ ಮೇವುಗಳನ್ನು ಬೆಳೆಸಬೇಕು,  ತಾವೇ ತಮ್ಮ ಸ್ವಂತವಾಗಿ ಮೇವುಗಳನ್ನು ಬೆಳೆಸುವುದರಿಂದ ಇತರರ ಮೇಲೆ ಅವಲಂಬನೆ ಯಾಗುವುದು ತಪ್ಪುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಮೇವು ಒದಗಿಸಬಹುದು.  ಹಾಗೂ ಆರ್ಥಿಕವಾಗಿಯೂ ಹೆಚ್ಚಾಗಿ ಖರ್ಚಾಗುವ ಮೇವನ್ನು ಕೊಂಡುಕೊಳ್ಳದೆ ನಮ್ಮದೇ ಸ್ವಂತಗದ್ದೆಗಳಲ್ಲಿ ಬೆಳೆದು ಹಸುಗಳಿಗೆ ಆಹಾರ ಪೂರೈಕೆ ಮಾಡಬೇಕು. 

 ಹಸುಗಳಿಗೆ ಹೀಗೆ ಹಸಿರುಮೇವು ನೀಡುವುದರೊಂದಿಗೆ ಅವುಗಳ ಪೋಷಣೆಗಾಗಿ ಉತ್ತಮವಾದ  ಹಸು ಫೀಡ್ಗಳನ್ನು  ಕೊಡಬೇಕು.  ಈ ಫೀಡ್ ಗಳಲ್ಲಿ ಎಲ್ಲಾ ರೀತಿಯ ಧಾನ್ಯಗಳು ಮೆಕ್ಕೆಜೋಳ ನವಣೆ ಬೇವಿನ ಹಿಂಡಿ,  ಕಡಲೆಕಾಯಿ ಹೊಟ್ಟು,  ಹೀಗೆ ಹಲವಾರು ರೀತಿಯ ಧಾನ್ಯಗಳ ಫೀಟ್ಗಳನ್ನು ಹಸುಗಳಿಗೆ ನೀಡಬೇಕು,  ಹೀಗೆ ಕ್ಯಾಟಲ್ ಫೀಡ್ಗಳನ್ನು ನೀಡುವುದರಿಂದ ಹಸುಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಚೆನ್ನಾಗಿ ಹಾಲು ಬರುತ್ತದೆ.   ಕ್ಯಾಟಲ್ ಫೀಡ್‌ಗಳನ್ನು  ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿ  ಹಸುಗಳಿಗೆ ನೀಡಬೇಕು .ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍