ನಮಸ್ತೆ ಬಂಧುಗಳೇ…ಸರ್ಕಾರದ ವಿವಿಧ ಇಲಾಖೆಗಳಮಹಿಳಾ ಸಿಬ್ಬಂದಿಗೆ ವಾರ್ಷಿಕವಾಗಿ ನೀಡುವ ಸಾಂದರ್ಭಿಕ ರಜೆಗಳ CL (ಸಿಎಲ್) ಸಂಖ್ಯೆಯನ್ನು 25ಕ್ಕೆ ಏರಿಸಿರುವುದಾಗಿ ಒಡಿಶಾಸರ್ಕಾರ ಮಂಗಳವಾರ ಘೋಷಣೆ ಮಾಡಿದೆ.
ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿದೆ, ಹಾಗೂ ಹಾಗೂ ಮಹಿಳೆಯರಿಗಿರುವ ಕುಟುಂಬ ನಿರ್ವಹಣೆ ಜವಾಬ್ದಾರಿ ಮತ್ತಿತರ ಮಹಿಳಾ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಅವರಿಗೆ 10 ದಿನಗಳ ಹೆಚ್ಚುವರಿಯಾಗಿ ಸಾಂದರ್ಭಿಕ ರಜೆ CL ನೀಡುವ ನಿರ್ಧಾರವನ್ನು ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಆದೇಶಗಳಿಗಾಗಿ ಮತ್ತು ಸರ್ಕಾರಿ ಉದ್ಯೋಗಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇತ್ತೀಚೆಗಷ್ಟೇ, ಸರ್ಕಾರೇತರ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ (Aided) ನೌಕರರಿಗೆ ವಾರ್ಷಿಕವಾಗಿ 15 ದಿನಗಳು ಸಾಂದರ್ಭಿಕ ರಜೆ ನೀಡುವುದಾಗಿ ಒಡಿಶಾ ಸರ್ಕಾರವು ಘೋಷಿಸಿತ್ತು. ಅದರ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಹತ್ತು ದಿನಗಳ ಸಾಂದರ್ಭಿಕ ರಜೆಯನ್ನು ರಜೆಯನ್ನು ನೀಡಿದೆ, ಶಿಕ್ಷಣ ಸಂಸ್ಥೆಗಳ ಮಹಿಳಾ ಸಿಬ್ಬಂದಿ (ಬೋಧಕ ಮತ್ತು ಬೋಧಕೇತರ) 180 ದಿನಗಳ ಮಾತೃತ್ವ ರಜೆ ನೀಡುವುದಾಗಿ ಘೋಷಿಸಿತ್ತು.ನಮ್ಮ ಕರ್ನಾಟಕ ಸರ್ಕಾರವು ಒಡಿಸ್ಸಾ ರಾಜ್ಯ ಮಾದರಿಯನ್ನು ಅನುಸರಿಸಬಹುದೆಂಬ ಭರವಸೆಗಳನ್ನು ರಾಜ್ಯದ ನೌಕರರು ಬಂದಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾದು ನೋಡಬೇಕಾಗಿದೆ.ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಆದೇಶಗಳಿಗಾಗಿ ಮತ್ತು ಸರ್ಕಾರಿ ಉದ್ಯೋಗಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.