ಹೊಸವರ್ಷಕ್ಕೆ ಟಾಟಾ,ಮಾರುತಿಸುಜುಕಿ,ಹುಂಡೈ ಕಾರುಗಳ ಬೆಲೆ ಏರಿಕೆ! ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ! ಆಧಾರ್ ತಿದ್ದುಪಡಿಗೆ ಕೊನೆ ! ಹೊಸ ವರ್ಷಕ್ಕೆ ಸರ್ಕಾರದಿಂದ ಜಾರಿಗೆ ಬರುವ ಹೊಸ ನಿಯಮಗಳ ಅಬ್ಬರ ! ನಮಸ್ಕಾರ ಬಂಧುಗಳೇ.. ಕಳೆದ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಯು ನಡೆದು ಕಾಂಗ್ರೆಸ್ ಪಕ್ಷವು ಬಹುಮತದೊಂದಿಗೆ ರಾಜ್ಯದಲ್ಲಿ ಆಡಳಿತ ಶುರು ಮಾಡಿತು, ಚುನಾವಣೆ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ಹಲವಾರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು, ಅವುಗಳಲ್ಲಿ ಅನ್ನ ನೀಡುವ ಅನ್ನ ಭಾಗ್ಯ, ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ, ಮನೆಯ ಯಜಮಾನಿಯಾ ಖಾತೆಗೆ ಪ್ರತಿ ತಿಂಗಳು 2000 ರೂ ಹಣ, ಪದವಿ ಮಾಡಿದ ಮತ್ತು ಡಿಪ್ಲೋಮಾ ಮಾಡಿದ ಕೆಲಸ ದೊರೆಯದ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆ ಅಡಿಯಲ್ಲಿ ಎರಡು ವರ್ಷದ ಅವಧಿಗೆ ಪ್ರತಿ ತಿಂಗಳು 3000 ರೂ ಹಣ, ಹಾಗೂ ಪ್ರತಿಯೊಬ್ಬರ ಮನೆಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಹೀಗೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ಮಾಡುತ್ತ ಬಂದಿದೆ. ಇದರೊಂದಿಗೆ ಹಲವಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ಸಿಗುವ ರೀತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಕೇವಲ ಒಂದು ಲಕ್ಷ ರೂಗೆ ಸೈಟು ಮತ್ತು ಮನೆ.
ಸರ್ಕಾರವು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅನುದಾನಗಳ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಕೊಳಗೇರಿಗಳಲ್ಲಿ ವಾಸ ಮಾಡುತ್ತಿದ್ದ ನಿರಾಶ್ರಿತರಿಗೆ ಆಶ್ರಯವನ್ನು ಮಾಡಿಕೊಟ್ಟಿದೆ ಈ ರೀತಿ ನಿರ್ಮಾಣ ಮಾಡಿದ ಮನೆಗಳಿಗೆ ಕೇವಲ ಒಂದು ಲಕ್ಷ ರೂ ಹಣವನ್ನು ಪಡೆದುಕೊಂಡು ಅವರಿಗೆ ಮನೆಗಳನ್ನು ನೀಡಿತ್ತು, ಅದೇ ರೀತಿ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 52,189 ಮನೆಗಳನ್ನು ಕಟ್ಟಲು ಶುರು ಮಾಡಿದೆ, ಈ ಮನೆಗಳನ್ನು ಸರ್ಕಾರವೇ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ನಿರ್ಮಾಣ ಮಾಡಿ ಫಲಾನುಭವಿಗಳಿಂದ ನಾಲ್ಕು ಲಕ್ಷ ರೂಗಳನ್ನು ಪಾವತಿಸಿಕೊಂಡು ಇನ್ನುಳಿದ ಹಣವನ್ನು ಸರ್ಕಾರವೇ ಪಾವತಿ ಮಾಡಲಾಗುವುದು ಎಂದು ತಿಳಿಸಿತ್ತು,
ಈ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಸತಿ ಸಚಿವ ಜಮೀರ್ ಅಹಮದ್ ರವರೊಂದಿಗೆ ಪರಿಶೀಲನೆ ನಡೆಸಿದರು, ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ 52,189 ಮನೆಗಳನ್ನು ಪೂರ್ಣಗೊಳಿಸಲು 2168 ಕೋಟಿ ರೂ ಅಗತ್ಯವಿತ್ತು, ಆದರೆ ಫಲಾನುಭವಿಗಳು ಪ್ರತ್ಯೇಕವಾಗಿ ಪ್ರತಿಯೊಬ್ಬರು ನಾಲ್ಕು ಲಕ್ಷ ರೂಗಳನ್ನು ಪಾವತಿಸಲು ಕಷ್ಟವಾಗಿದೆ, ಬ್ಯಾಂಕ್ ಗಳಿಂದಲೂ ಸಾಲ ದೊರೆಯುತ್ತಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ರೊಂದಿಗೆ ಅಳಲು ತೋಡಿಕೊಂಡಿರುವ ಫಲಾನುಭವಿಗಳು ನಾಲ್ಕು ಲಕ್ಷ ಹಣ ಹೊಂದಿಸುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ ಹಾಗಾಗಿ ಜಮೀರ್ ಅಹ್ಮದ್ ರವರು ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಇಲ್ಲಿಯವರೆಗೂ ಫಲಾನುಭವಿಗಳಿಂದ ಕೇವಲ 4 ಲಕ್ಷದಂತೆ 134 ಕೋಟಿ ಹಣ ಸಂದಾಯವಾಗಿದ್ದು, ಮನೆಗಳನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಲು ಇನ್ನೂ 2,013 ಕೋಟಿ ಹಣದ ಅಗತ್ಯವಿದೆ, ಫಲಾನುಭವಿಗಳು ಬಡವರಾಗಿದ್ದು ಹಣವಂತಿಸಲು ಕಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದ ಜಮೀರ್ ಅಹ್ಮದ್, ಕೊಳಗೇರಿ, ಅಭಿವೃದ್ಧಿ ಮಂಡಳಿಯ ಫಲಾನುಭವಿಗಳಿಗೆ ಒಂದು ಲಕ್ಷ ರೂಗೆ ಮನೆ ನೀಡಿದಂತೆ ರಾಜೀವ್ ಗಾಂಧಿ ನಿಗಮದ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳನ್ನು ಸಹ ಒಂದು ಲಕ್ಷ ರೂ ಹಣ ಕಟ್ಟಿಸಿಕೊಂಡು ಇನ್ನುಳಿದ 2,013 ಕೋಟಿ ರೂ ಹಣವನ್ನು ಸರ್ಕಾರವೇ ಪಾವತಿಸಿದರೆ ಈ ಯೋಜನೆ ಸಾಧ್ಯವಾಗುವುದು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಸತಿ ಸಚಿವ ಜಮೀರ್ ಅಹಮದ್ ಮನದಟ್ಟು ಮಾಡಿದ್ದಾರೆ ಎಂದು ತಿಳಿದುಬಂದಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಪೋಸ್ಟ್ ಆಫೀಸ್ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ
ಹೌದು ಬಂಧುಗಳೇ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಪೋಷಕರಿಗೆ ಭವಿಷ್ಯದಲ್ಲಿ ಆರ್ಥಿಕವಾಗಿ ಭದ್ರತೆಯನ್ನು ಒದಗಿಸಲು ಮತ್ತು ಒರೆಯಾಗದಂತೆ ಮಾಡಲು ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪರಿಚಯ ಮಾಡಿತು, ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳನ್ನು ಹೊಂದಿರುವ ಪೋಷಕರು ತಮ್ಮ ಹೆಣ್ಣುಮಕ್ಕಳ ಹೆಸರಿನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ತಮಗೆ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಮಾಡುವುದರೊಂದಿಗೆ ತಮ್ಮ ಹೆಣ್ಣು ಮಕ್ಕಳ ವಯಸ್ಸು 18 ವರ್ಷ ತುಂಬಿದಾಗ ಈ ಯೋಜನೆಯ ಹಣವು ದೊರಕುವಂತೆ ಮಾಡಿದೆ, ಹಾಗೂ ಈ ಯೋಜನೆಯಲ್ಲಿ ಉಳಿತಾಯ ಠೇವಣಿ ಮಾಡುವವರಿಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನು ಸಹ ಕೇಂದ್ರ ಸರ್ಕಾರವು ನೀಡಿದೆ,
ಭಾರತೀಯ ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಕಟ್ಟುತ್ತಿರುವವರಿಗೆ ಕೇಂದ್ರ ಸರ್ಕಾರವು ಬಡ್ಡಿದರ ಹೆಚ್ಚಳ ಮಾಡುವುದರೊಂದಿಗೆ ಈ ಹೊಸ ವರ್ಷಕ್ಕೆ ಸಿಹಿ ಸುದ್ದಿಯನ್ನು ನೀಡಿದೆ. ಸಣ್ಣ ಉಳಿತಾಯವನ್ನು ಪೋಸ್ಟ್ ಆಫೀಸ್ನಲ್ಲಿ ಕಟ್ಟುತ್ತಿರುವ ಪ್ರತಿಯೊಬ್ಬರಿಗೂ ಬಡ್ಡಿದರವನ್ನು ಹೆಚ್ಚಳ ಮಾಡಿದೆ, ಸುಕನ್ಯಾ ಸಮೃದ್ಧಿ ಯೋಜನೆ ಯ ಬಡ್ಡಿದರವನ್ನು ಶೇಕಡ 8 ರಿಂದ ಶೇಕಡ 8.2ಕ್ಕೆ ಮತ್ತು ಮೂರು ವರ್ಷಗಳ ಅವಧಿಗೆ ಠೇವಣಿ ಕಟ್ಟುತ್ತಿರುವವರಿಗೆ ಬಡ್ಡಿದರವು ಶೇಕಡ 7 ರಿಂದ ಶೇಕಡ 7.1 ಕ್ಕೆ ಏರಿಕೆ ಆಗುವುದು ಎಂಬುದಾಗಿ ಕೇಂದ್ರ ಸರ್ಕಾರವು ತಿಳಿಸಿದೆ, ಡಿಸೆಂಬರ್ 29ರಂದು ಈ ಏರಿಕೆಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆಯು 2024ರ ಜನವರ.- ಮಾರ್ಚ್ ತ್ರೈಮಾಸಿಕ ಅವಧಿಗೆ ಅನ್ವಯವಾಗಿ ಜಾರಿಗೆ ಬರಲಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಗಾಗಿ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೊಸ ವರ್ಷಕ್ಕೆ ಕಾರುಗಳ ಬೆಲೆ ಏರಿಕೆಯಾಗಲಿದೆ. 2024
ಬಂಧುಗಳೇ, ನಮಗೆಲ್ಲರಿಗೂ ತಿಳಿದಂತೆ ಭಾರತೀಯರಾದ ನಮಗೆ ನಮ್ಮ ವಾಹನಗಳ ಮೇಲೆ ಅತಿಯಾದ ಬಾಂಧವ್ಯ ಪ್ರೀತಿ ಬೆಸೆದಿರುತ್ತದೆ, ಸೈಕಲಗಳ ಮೂಲಕ ಪ್ರಾರಂಭವಾದ ನಾಗರಿಕತೆಯು ಈಗ ಅತಿ ದುಬಾರಿಯಾದ ಕಾರುಗಳೊಂದಿಗೆ ಜೀವನವು ಆಧುನಿಕತೆಯ ರೂಪವನ್ನು ಪಡೆದಿದೆ, ಸ್ಕೂಟರ್ ಹೊಂದಿರುವವರು ಕಾರುಗಳನ್ನು ಕೊಳ್ಳಬೇಕೆಂಬುದು ಜೀವಮಾನದ ಕನಸಾಗಿರುತ್ತದೆ, ಕೆಲವರಿಗೆ ಅದು ನನಸಾದರು ಹಲವರಿಗೆ ಕನಸಾಗಿಯೇ ಉಳಿಯುತ್ತದೆ, ಸ್ವಂತ ಕಾರು ಹೊಂದಬೇಕು ಕುಟುಂಬದೊಂದಿಗೆ ಪ್ರಯಾಣ ಮಾಡಬೇಕು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬುದು ನಮ್ಮ ಭಾರತೀಯರಾದ ಎಲ್ಲರಿಗೂ ಭಾವನಾತ್ಮಕವಾಗಿ ಬೆಸೆದಿರುವ ಸಂಗತಿ. ನಮ್ಮ ದಿನನಿತ್ಯ ಕಾರ್ಯಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ವಾಹನಗಳು ಅತ್ಯಗತ್ಯ, ಹೀಗೆ ಚಲಿಸುವಾಗ ಸುರಕ್ಷಿತವಾಗಿ ಮತ್ತು ಬಿಸಿಲು ಮಳೆ ಗಾಳಿ ಇದ್ದರೂ ಯಾವುದೇ ಸಮಸ್ಯೆಯನ್ನು ನೀಡದೆ ನಮ್ಮನ್ನು ಅಗತ್ಯವಿರುವ ಸ್ಥಳಕ್ಕೆ ತಲುಪಿಸುವ ಕಾರ್ಯವನ್ನು ಕಾರುಗಳು ಮಾಡುತ್ತವೆ,ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಾರುಗಳ ಪಾತ್ರ ಬಹುಮುಖ್ಯವಾಗಿದೆ, ಭಾರತದಂತಹ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ವಾಹನಗಳು ಅವಶ್ಯಕವಾಗಿವೆ ಹಾಗಾಗಿ ಪ್ರತಿಯೊಬ್ಬ ಮಧ್ಯಮ ಆರ್ಥಿಕ ವರ್ಗಗಳಿಂದ ಬಂದಂತಹ ಎಷ್ಟೋ ಯುವಕರ ಕನಸಾಗಿರುತ್ತದೆ,
ಮಾರುತಿ ಸುಜುಕಿ ಕಾರುಗಳು, ಟಾಟಾ ಕಂಪನಿಯ ಕಾರುಗಳು, ಹುಂಡೈ ಕಾರುಗಳ ಬೆಲೆ ಏರಿಕೆ ! 2024
ಮಧ್ಯಮ ವರ್ಗವಾಗಿದ್ದ ನಮಗೆ ಕಾರನ್ನು ಕೊಳ್ಳುವುದು ಪ್ರತಿ ತಿಂಗಳು ತಪ್ಪದೇ EMI ಪಾವತಿಸುವುದು ಸವಾಲಿನ ಕೆಲಸವಾಗಿತ್ತು, ಈಗಾಗಲೇ ಕಾರುಗಳ ಬೆಲೆಯು ಸರ್ಕಾರಕ್ಕೆ ಪಾವತಿ ಯಾಗುವ ರೋಡ್ ಟ್ಯಾಕ್ಸ್, ಇನ್ಸೂರೆನ್ಸ್, ಇನ್ನಿತರ ಸಾರಿಗೆ ಇಲಾಖೆಯ ತೆರಿಗೆಗಳು ದುಬಾರಿಯಾಗಿತ್ತು, ಇದರ ಮಧ್ಯೆ ಜಾಗತೀಕರಣದ ಸಂದರ್ಭದಲ್ಲಿ ಮಾರುತಿ ಸುಜುಕಿ, ಟಾಟಾ ಕಂಪನಿ,, ಹುಂಡೈ, ಮರ್ಸಿಡಿಸ್ ಬೆಂಜ್, ಆಡಿ ಕಂಪನಿಗಳು ತಮ್ಮ ಕಾರುಗಳ ದರವನ್ನು ಏರಿಕೆ ಮಾಡಿ ಈಗಾಗಲೇ ಘೋಷಣೆಯನ್ನು ಮಾಡಿವೆ. ಹೀಗೆ ಏರಿಕೆಯಾಗಿರುವ ಕಾರುಗಳ ದರವನ್ನು ಬರುವ ಹೊಸ ವರ್ಷದಿಂದ ಅಂದರೆ ಜನವರಿ 1 ತಾರೀಖಿನಿಂದ ಜಾರಿಗೆ ಮಾಡಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಆಧಾರ್ ಕಾರ್ಡ್ ಉಚಿತ ತಿದ್ದುಪಡಿಗೆ ಈ ತಿಂಗಳೇ ಕೊನೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ನಾಳೆಯೇ ಕಡೆ ದಿನ !
ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಅಥವಾ ಇನ್ನಿತರ ಮಾಹಿತಿಗಳು ತಪ್ಪಾಗಿದ್ದರೆ ಉಚಿತವಾಗಿ ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಇಷ್ಟು ದಿನ ಅವಕಾಶ ನೀಡಿತ್ತು, ಆದರೆ ಹೊಸ ವರ್ಷದಿಂದ ಆಧಾರ್ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ಶುಲ್ಕ ವಿಧಿಸಲು ಯೋಜಿಸಿದೆ, ಹಾಗಾಗಿ ನಿಮ್ಮ ಕುಟುಂಬಗಳಲ್ಲಿ ಯಾರಿಗಾದರೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕೆಂಬುದು ಅಗತ್ಯವಾಗಿದ್ದರೆ ಈ ಕೂಡಲೇ ಉಚಿತವಾಗಿ ತಿದ್ದುಪಡಿ ಮಾಡಿಸಿ, ಉಚಿತ ಆಧಾರ್ ತಿದ್ದುಪಡಿಯನ್ನು ಡಿಸೆಂಬರ್ 31ಕ್ಕೆ ಸರ್ಕಾರವು ನಿಲ್ಲಿಸುತ್ತದೆ, ಮತ್ತು ಹೊಸ ವರ್ಷದಿಂದ ಆನ್ಲೈನ್ ನಲ್ಲಿ ಆಧಾರ್ ತಿದ್ದುಪಡಿಯನ್ನು ಮಾಡಿಸಲು ಪ್ರತ್ಯೇಕ ವೆಚ್ಚವನ್ನು ನಾಗರೀಕರು ಭರಿಸಬೇಕಾಗಿದೆ ಎಂದು ಪತ್ರಿಕಾ ವರದಿಯಲ್ಲಿ ತಿಳಿಸಲಾಗಿದೆ.
Income tax ರಿಟರ್ನ್ ಫೈಲ್ ಮಾಡುವವರು ಡಿಸೆಂಬರ್ 31ರ ಒಳಗಾಗಿ ಐಟಿ ರಿಟರ್ನ್ಸ್ ಫೈಲ್ ಮಾಡಲು ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಕೇಂದ್ರ ಆದಾಯ ತೆರಿಗೆ ಇಲಾಖೆಯು ತಿಳಿಸಿದೆ. ಈಗಾಗಲೇ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಿ ಇನ್ನೊಂದು ಅವಕಾಶವನ್ನು ಇಲಾಖೆಯು ನೀಡಿತ್ತು.
ನಿರುದ್ಯೋಗಿಗಳಿಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಕೆಲಸ ಗಿಟ್ಟಿಸಲು ಒಳ್ಳೆಯ ಅವಕಾಶ !
ಓದು ಮುಗಿಸಿ ಕೆಲಸ ದೊರೆಯದೆ ಇದ್ದ ನಿರುದ್ಯೋಗಿ ಯುವಕ ಯುವತಿಯರಿಗೆ ಸರ್ಕಾರವು ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ಜನವರಿ ತಿಂಗಳಿನ ಕೊನೆಯ ವಾರದಲ್ಲಿ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಹಲವಾರು ಇಲಾಖೆಗಳ ಸಚಿವರೊಂದಿಗೆ ಈ ತೀರ್ಮಾನವನ್ನು ಕೈಗೊಳ್ಳಲಾಯಿತು, ಈ ಕೂಡಲೇ ವಿದ್ಯಾಭ್ಯಾಸ ಮುಗಿಸಿದ ಎಲ್ಲಾ ಪದವೀಧರರು ತಮ್ಮ ಮೂಲ ದಾಖಲಾತಿಗಳೊಂದಿಗೆ ಜನವರಿಯಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ನೇರವಾಗಿ ಭೇಟಿ ನೀಡಿ ಉದ್ಯೋಗ ಪಡೆದುಕೊಳ್ಳಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ