AnnaBagya Scheme Money Check: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಮಾಹಿತಿ ಏನೆಂದರೆ, ಅನ್ನ ಭಾಗ್ಯ ಯೋಜನೆಯು ಕರ್ನಾಟಕದಲ್ಲಿ ಪ್ರಸ್ತುತ ಚಾಲ್ತಿಯಲ್ಲಿದ್ದು,ಗ್ಯಾರೆಂಟಿ ಯೋಜನೆಗಳ ಪೈಕಿ ಒಂದಾಗಿದೆ, ಕರ್ನಾಟಕ ಸರ್ಕಾರವು ಪ್ರತಿ ತಿಂಗಳು ರೇಷನ್ ಕೊಟ್ಟಾಗ ಫಲಾನುಭವಿಗಳ ಖಾತೆಗೆ ಅಂದರೆ ಮನೆಯ ಮುಖ್ಯಸ್ಥರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಒಟ್ಟು ಸದಸ್ಯರ ಆಧಾರದ ಮೇಲೆ ಡಿ ಬಿ ಟಿ ಮುಖಾಂತರ ಹಾಕುತ್ತಾರೆ.
ಅನ್ನಭಾಗ್ಯ ಯೋಜನೆಯ ಹಣವು ಪ್ರತಿ ಮಹಿಳೆಯರ ಬ್ಯಾಂಕ್ ಖಾತೆಗೂ ಪ್ರತಿ ತಿಂಗಳು ತಲುಪುತ್ತಿದೆ ಹಾಗೂ ಕೆಲವು ಮಹಿಳೆಯರ ಖಾತೆಗೆ ಕೆಲವು ತಾಂತ್ರಿಕ ಕಾರಣಗಳಿಂದ ಮತ್ತು ಕೆ ವೈ ಸಿ ಸರಿಯಾಗಿ ಮಾಡಿಸದ ಕಾರಣ ಇನ್ನು ಸಹ ಹಣ ತಲುಪಿಲ್ಲ ಎಂದು ತಿಳಿದುಬಂದಿದೆ, ಆದರೆ ಅನ್ನಭಾಗ್ಯ ಯೋಜನೆಯ ಹಣವು ರಾಜ್ಯದ ಬಹುತೇಕ ಮಹಿಳೆಯರ ಖಾತೆಗೆ ಜಮೆ ಆಗುತ್ತಿದ್ದು ಹೀಗೆ ಜಮೆಯಾದ ಫಲಾನುಭವಿ ಮಹಿಳೆಯ ಖಾತೆಯನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಹಣ ಬ್ಯಾಂಕ್ ನ ಖಾತೆಗೆ ಜಮೆ ಆಗಿದೆಯೇ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ..ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ 10 ಕೆಜಿ ಅಕ್ಕಿಯನ್ನು ಪ್ರತಿಯೊಬ್ಬ ಸದಸ್ಯನಿಗೂ ನೀಡುವುದಾಗಿ ತಿಳಿಸಿತ್ತು ಆದರೆ ಕೇಂದ್ರ ಸರ್ಕಾರವು ಇದಕ್ಕೆ ಸಮ್ಮತಿ ಕೊಡದ ಕೇಂದ್ರ ಸರ್ಕಾರದಿಂದ ನೀಡಬೇಕಿದ್ದ ಅಕ್ಕಿಯ ಪಾಲನ್ನು ತಡೆ ಮಾಡಿದ ಕಾರಣ, ಸರ್ಕಾರಕ್ಕೆ ಅಕ್ಕಿಯ ಅಭಾವ ಉಂಟಾಯಿತು, ಹಾಗಾಗಿ ರಾಜ್ಯದ ಗೋಧಿಮುಗಳಲ್ಲಿರುವ ಅಕ್ಕಿಯನ್ನು ಬಳಸಿಕೊಂಡು ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ ಹಾಗೂ ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಯಂತೆ ಮನೆಯಲ್ಲಿರುವ ಒಟ್ಟಾರೆ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಅವರಿಗೆ ಒಟ್ಟಾರೆ ಹಣವನ್ನು ಸೇರಿಸಿ ಫಲಾನುಭವಿಯ ಮಹಿಳೆಯ ಖಾತೆಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ಹಣವನ್ನು ಜಮಾ ಮಾಡುತ್ತಿದೆ.
ಇದನ್ನೂ ಓದಿ : ಇದನ್ನೂ ಓದಿ : ನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ
ಅನ್ನಭಾಗ್ಯ AnnaBagya ಯೋಜನೆಯ ಹಣ ಬಂದಿಲ್ಲವೇ ಏನು ಮಾಡಬೇಕು? ತಿಳಿದುಕೊಳ್ಳಿ
- ನಿಮ್ಮ ರೇಷನ್ ಕಾರ್ಡ್ ನೊಂದಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಇ – ಕೆವೈಸಿ ಯನ್ನ ಮಾಡಿಸಬೇಕು
- ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಜೋಡಿಸಬೇಕು .
- ಆಧಾರ್ ಕಾರ್ಡ್ ನವೀಕರಣ (ಅಪ್ಡೇಟ್) ಮಾಡಿಸಬೇಕು
- ಕುಟುಂಬದಲ್ಲಿ ಸದಸ್ಯರು ಮರಣ ಹೊಂದಿದ ಸದಸ್ಯರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಬೇಕು.
ಈ ಮೇಲ್ಕಂಡ ಎಲ್ಲಾ ಕಾರ್ಯಗಳನ್ನು ನೀವು ಮಾಡಿಸಿದ್ದಲ್ಲಿ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣವು ಜಮಾ ಆಗುತ್ತದೆ. ಈ ಕೂಡಲೇ ಈ-ಕೆ ವೈಸಿ ಯನ್ನು ಮಾಡಿಸಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅನ್ನಭಾಗ್ಯ AnnaBagya ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.
https://ahara.kar.nic.in/status1/status_of_dbt_new.aspx
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಪರೀಕ್ಷಿಸಬೇಕಿರುವ ವರ್ಷ ಮತ್ತು ತಿಂಗಳನ್ನು ನಮೂದಿಸಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಂಬರನ್ನು ನಮೂದಿಸಬೇಕು, ಕೊನೆಯಲ್ಲಿ ಅಲ್ಲಿ ಕಾಣಿಸುವ ಆರು ಅಂಕಿಗಳ ನಂಬರನ್ನು ಖಾಲಿ ಬಿಟ್ಟ ಜಾಗದಲ್ಲಿ ತುಂಬಬೇಕು, ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಹೆಸರುಗಳು ಕಾಣಿಸುತ್ತವೆ ಆಗ ನೀವು ಕುಟುಂಬದ ಮುಖ್ಯಸ್ಥೆಯ ಫಲಾನುಭವಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಅಲ್ಲಿ ಅನ್ನ ಭಾಗ್ಯ ಯೋಜನೆಯ ಹಣವು ಬ್ಯಾಂಕ್ ಖಾತೆಗೆ ಜಮೆ ಆಗಿದ್ದರೆ ಅದರ ಸಂಪೂರ್ಣ ಮಾಹಿತಿ ದಿನಾಂಕ, ಬ್ಯಾಂಕನ ಹೆಸರು ಇತ್ಯಾದಿ ಮಾಹಿತಿಗಳೊಂದಿಗೆ ಕಾಣಸಿಗುತ್ತದೆ. ಹೀಗೆ ರೇಷನ್ ಕಾರ್ಡ್ ಹೊಂದಿರುವವರ ಖಾತೆಗೆ ಹಣ ಬಂದಿದೆಯ ಎಂಬುದನ್ನು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಪರೀಕ್ಷಿಸಿಕೊಳ್ಳಬಹುದು.
ಬಂಧುಗಳೇ ಹೀಗೆ ಅನ್ನ ಭಾಗ್ಯ ಯೋಜನೆ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಸರಳವಾಗಿ ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬುದರ ಮಾಹಿತಿ ಇದಾಗಿದೆ, ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ಪ್ರತಿದಿನವೂ ಓದಲು ಇಷ್ಟಪಡುತ್ತಿದ್ದರೆ ಹಾಗೂ ಸರ್ಕಾರಿ ಉದ್ಯೋಗದ ಮಾಹಿತಿಗಳು ಇನ್ನಿತರ ಇತ್ತೀಚಿನ ಯೋಜನೆಗಳ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳಲುನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಉಚಿತವಾಗಿ ಸೇರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ
3 thoughts on “ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya”