ನಮಸ್ತೆ ಬಂಧುಗಳೇ..ಇಷ್ಟೊಂದು ಭತ್ತ ಬೆಳೆಯೋದು ಸಾಧ್ಯನಾ, ಹೌದು ಬಂಧುಗಳೇ, ಒಬ್ಬೊಬ್ಬರು 60, 72 ಎಕರೆ ಜಮೀನಿನಲ್ಲಿ ಸುಮಾರು 40 ವರ್ಷಗಳಿಂದ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯವರಾದ ಇಬ್ಬರು ಸ್ನೇಹಿತರು ತಮ್ಮ ತಂದೆಯವರ ಕಾಲದಿಂದಲೂ ಭತ್ತವನ್ನು ಬೆಳೆಯುತ್ತಾ ಬಂದಿದ್ದಾರೆ .
ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳು !
ಬಂಧುಗಳೇ ಇಷ್ಟೊಂದು ಎಕರೆಯಲ್ಲಿ ಭತ್ತ ಬೆಳೆಯುವಾಗ ಇವರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ, ಅವುಗಳಲ್ಲಿ
- ಕಾಂಡ ಕೊರಕ : ಬಂಧುಗಳೇ ಕಾಂಡದಲ್ಲಿ ಒಂದು ರೀತಿಯ ಹುಳು ಆಹಾರಕ್ಕಾಗಿ ಬತ್ತದ ಕಾಂಡವನ್ನು ಕೊರೆದು ಭತ್ತದ ಜೀವವನ್ನು ತೆಗೆಯುತ್ತದೆ ನಂತರ ಇದರಿಂದ ಭತ್ತದ ತೆನೆ ಬಿಡುವುದಿಲ್ಲ, ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಕೀಟನಾಶಕವನ್ನು ಬಳಸಿ ಸಮಸ್ಯೆಯನ್ನು ಹೋಗಲಾಡಿಸಬಹುದು.
- ಎಲೆ ಹುಳು: ಬಂಧುಗಳೇ ಭತ್ತದ ಎಲೆಯ ಒಳಗೆ ಸುತ್ತಿಕೊಂಡು ಎಲೆಗಳನ್ನು ತಿಂದು ಹಾಕಿ ಭತ್ತವನ್ನು ಹಲವು ಹಾಳು ಮಾಡುತ್ತದೆ, ಇವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಸಮಸ್ಯೆಯಿಂದ ಪಾರಾಗಬಹುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ